ಅಹ್ಮದ್ ಖುರೈಷಿ ಮನೆಗೆ ಯುನೈಟೆಡ್ ಮುಸ್ಲಿಂ ಫ್ರಂಟ್ ನಾಯಕರ ಭೇಟಿ

Fri, 05/12/2017 - 10:32 -- web editor

ಮಂಗಳೂರು: ಕಳೆದ ತಿಂಗಳು ಮಂಗಳೂರು ಸಿಸಿಬಿ ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿ ಎರಡು ಕಿಡ್ನಿ ವೈಫಲ್ಯಕ್ಕೊಳಗಾಗಿದ್ದ ಅಹ್ಮದ್ ಖುರೈಷಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬಳಿಕ ಖುರೈಷಿ ಮನೆಗೆ ಭೇಟಿ ನೀಡಿದ ಯುನೈಟೆಡ್ ಮುಸ್ಲಿಂ ಫ್ರಂಟ್‌ನ ನಾಯಕರು ಆತನ ಆರೋಗ್ಯದ ಬಗ್ಗೆ ಮತ್ತು ಸಿಐಡಿ ತನಿಖೆ ನಡೆಸಿದ ಮಾಹಿತಿಯನ್ನು ಪಡೆದು ಮುಂದಿನ ಹೋರಾಟದ ರೂಪುರೇಷೆಯ ಕುರಿತ ವಿಚಾರಗಳನ್ನು ಚರ್ಚಿಸಿದರು.

ಈ ಸಂದರ್ಭದಲ್ಲಿ ಯುನೈಟೆಡ್ ಮುಸ್ಲಿಂ ಫ್ರಂಟ್‌ನ ಸಂಚಾಲಕ ಹಾಜಿ.ಮುಸ್ತಫಾ ಕೆಂಪಿ, ಸಮಿತಿ ಸದಸ್ಯರಾದ ರಫೀವುದ್ದೀನ್ ಕುದ್ರೋಳಿ,ಹನೀಫ್ ಖಾನ್ ಕೊಡಾಜೆ, ನವಾಝ್ ಉಳ್ಳಾಲ, ಜಲೀಲ್ ಕಷ್ಣಾಪುರ, ಇಕ್ಬಾಲ್ ಗೂಡಿನಬಳಿ ಉಪಸ್ಥಿತರಿದ್ದರು.