ಜಲೀಲ್ ಕರೋಪಾಡಿ ಹತ್ಯಾ ಆರೋಪಿಗಳ ಮೇಲೆ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿ: ಹನೀಫ್ ಖಾನ್

Fri, 05/12/2017 - 12:53 -- web editor

ಮಂಗಳೂರು : ಏಪ್ರಿಲ್ 20ರಂದು ನಡೆದ ದ.ಕ.ಜಿಲ್ಲೆಯ ಕರೋಪಾಡಿ ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಜಲೀಲ್ ಕರೋಪಾಡಿಯವರ ಹತೈಯು ಒಂದು ಸಂಘಟಿತ ಸಂಚಿನ ಕತ್ಯವಾಗಿದ್ದು, ಇದು ಸಮಾಜದಲ್ಲಿ ಗಲಭೆ ಸಷ್ಟಿಸುವಂತಹ ಪಿತೂರಿಯಾಗಿದೆ. ಹಾಡ ಹಗಲೇ ಪಂಚಾಯತ್ ಕಛೇರಿಯೊಳಗೆ ನುಗ್ಗಿ ಜನಪ್ರತಿನಿಧಿಯ ಕೊಲೆ ನಡೆಸಿರುವ ಘಟನೆ ಸಮಾಜವನ್ನು ಬೆಚ್ಚಿ ಬೀಳಿಸಿದ್ದು, ಇದರ ಸತ್ಯಾಸತ್ಯತೆ ಹೊರ ಬರಬೇಕಾದರೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುಬೇಕು ಮತ್ತು ಆರೋಪಿಗಳ ಮೇಲೆ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಒತ್ತಾಯಿಸಿದ್ದಾರೆ.

ನಗರದ ವುಡ್‌ಲ್ಯಾಂಡ್ ಹೊಟೇಲ್‌ನಲ್ಲಿ ಇಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಅಬ್ದುಲ್ ಜಲೀಲ್ ಕರೋಪಾಡಿಯವರ ಹತ್ಯೆ ನಡೆದ ಒಂದು ವಾರದ ಬಳಿಕ ಪೊಲೀಸರು 11 ಮಂದಿ ಅರೋಪಿಗಳನ್ನು ಬಂಧಿಸಿದ್ದರೂ ಕೊಲೆಗೆ ಸಂಚು ರೂಪಿಸಿದ ಸಂಘಟನೆಯ ಹೆಸರನ್ನು ಮರೆಮಾಚುವ ಪ್ರಯತ್ನವು ನಡೆಸಿದ್ದಾರೆ. ಆರೋಪಿಗಳೆಲ್ಲರೂ ಸಂಘಪರಿವಾರದ ಸಕ್ರಿಯ ಕಾರ್ಯಕರ್ತರಾಗಿದ್ದು, ಈ ಹಿಂದೆಯೂ ಜಿಲ್ಲೆಯಲ್ಲಿ ನಡೆದ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರು ಕೂಡ ಕೊಲೆ ಕತ್ಯವನ್ನು ಸಂಘಪರಿವಾರದ ಕಾರ್ಯಕರ್ತರು ನಡೆಸಿರುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಅದಲ್ಲದೆ ಕೊಲೆಯ ಸಂಚು ಪುತ್ತೂರಿನ ಸಂಘಪರಿವಾರದ ಕಛೇರಿಯಲ್ಲಿ ನಡೆದಿದೆ ಎಂಬ ವಿಷಯಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಆದರೂ ಪೊಲೀಸರು ಕೊಲೆ ಕತ್ಯವನ್ನು ಭೂಗತ ನಂಟಿನೊಂದಿಗೆ ಜೋಡಿಸಿ, ಪ್ರಕರಣವು ಯುಎಪಿಎ ಕಾಯ್ದೆಯಡಿ ದಾಖಲಾಗದಂತೆ ಯತ್ನಿಸುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸರಕಾರವು ಸಿಐಡಿಗೆ ಒಪ್ಪಿಸಿ ಅಕ್ರಮ ಸಂಚಿನ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ದ.ಕ.ಜಿಲ್ಲೆಯಲ್ಲಿ ಅಶಾಂತಿ ಸಷ್ಟಿಸಿ ಗಲಭೆ ನಡೆಸುವ ಸಂಚಿನ ಭಾಗವಾಗಿ ಹಲವು ಮಂದಿ ಅಮಾಯಕರ ಕೊಲೆಗಳು ನಡೆದಿದೆ.ಇವೆಲ್ಲವೂ ವೈಯಕ್ತಿಕ ದ್ವೇಶದಿಂದ ನಡೆದ ಕತ್ಯವಲ್ಲ, ಇವು ಸಂಘಟಿತ ಸಂಚಿನ ಪೂರ್ವಯೋಜಿತ ಕತ್ಯವಾಗಿದೆ. ದ.ಕ.ಜಿಲ್ಲೆಯ ಬಂಟ್ವಾಳದ ಹರೀಶ್ ಪೂಜಾರಿಯ ಕೊಲೆ ಮತ್ತು ನಾಸಿರ್ ಸಜಿಪರವರ ಕೊಲೆ ಪ್ರಕರಣದ ಆರೋಪಿಗಳಿಗೆ ಶೀಘ್ರ ಜಾಮೀನು ದೊರಕಿದೆ. ಆರೋಪಿಗಳ ಮೇಲೆ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸದೇ ಇರುವುದರಿಂದ ಆರೋಪಿಗಳು ಇನ್ನಷ್ಟು ಕತ್ಯಗಳನ್ನು ಎಸಗುತ್ತಿದ್ದಾರೆ ಎಂದು ಅವರು ಹೇಳಿದರು.

ಇದೇ ವೇಳೆ ದೇಶದಾದ್ಯಂತ ಯುಎಪಿಎ ಕಾನೂನನ್ನು ದುರುಪಯೋಗಪಡಿಸಲಾಗುತ್ತಿದ್ದು, ಪೂರ್ವಾಗ್ರಹಪೀಡಿತವಾಗಿ ಮುಸ್ಲಿಂ ಸಮುದಾಯದ ಮೇಲೆ ಅತೀ ಹೆಚ್ಚು ಈ ಕಾನೂನನ್ನು ಪ್ರಯೋಗಿಸಲಾಗಿದೆ. ಬೆಂಗಳೂರಿನಲ್ಲಿ ನಡೆದ ಅರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯಾ ಪ್ರಕರಣದ ಆರೋಪಿಗಳ ಮೇಲೆ ಯುಎಪಿಎ ಕೇಸು ದಾಖಲಿಸಿರುವುದು ಕಾನೂನಿನ ತಾರತಮ್ಯಕ್ಕೆ ಸ್ಪಷ್ಟ ನಿದರ್ಶನವಾಗಿದೆ. ರಾಜ್ಯ ಹೈಕೋರ್ಟ್ ಕೂಡ ಇದನ್ನು ಪ್ರಶ್ನಿಸಿದೆ. ಒಂದು ಸಮುದಾಯದ ಜನರನ್ನು ಶೋಷಣೆ ಮಾಡುವುದಕ್ಕಾಗಿಯೇ ಇಂತಹಾ ಕಾನೂನನ್ನು ರೂಪಿಸಿ ನ್ಯಾಯಾಂಗ ವ್ಯವಸ್ಥೆಯ ದುರ್ಬಳಕೆ ಮಾಡುತ್ತಿರುವುದನ್ನು ಪಕ್ಷವು ಖಂಡಿಸುತ್ತದೆ ಎಂದು ಹನೀಫ್ ಖಾನ್ ನುಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಸಂಘಪರಿವಾರದ ಕಾರ್ಯಕರ್ತರು ತಲೆಮರೆಸಿಕೊಂಡಿದ್ದರೂ, ಅವರ ಬಗ್ಗೆ ಯಾವುದೇ ಮಾಹಿತಿಗಳು ಅಥವಾ ಫೋಟೊಗಳು ಪೊಲೀಸ್ ಠಾಣೆಗಳಲ್ಲಿಲ್ಲ. ಆದರೆ ಕೆಲವು ಆರೋಪ ಹೊಂದಿರುವ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳ ಫೋಟೊ, ಹೆಸರುಗಳು ಪೊಲೀಸ್ ಠಾಣೆಗಳ ಎದುರು ರಾರಾಜಿಸುತ್ತಿವೆ. ಅದಲ್ಲದೆ ಹಲವರ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿದೆ. ಇದು ಪೊಲೀಸರು ನಡೆಸುವ ಕಾನೂನಿನ ತಾರತಮ್ಯ ನೀತಿಯಾಗಿದೆ ಎಂದವರು ಹೇಳಿದರು.

ಇಷ್ಟೆಲ್ಲಾ ನಡೆಯುವಾಗಲೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಮೌನ ವಹಿಸಿದೆ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕವಾಗಿ ಮುಸ್ಲಿಂ ವಿರೋಧಿ ನೀತಿಗಳು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಾಂಗ್ರೆಸ್‌ನ ಮುಸ್ಲಿಂ ನಾಯಕರ ಹತ್ತೆ ನಡೆದಾಗಲೂ ಅದರ ವಿರುದ್ಧ ಸ್ಪಷ್ಟ ತನಿಖೆ ನಡೆಸಿ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗದಿರುವುದು ಅದರ ಮುಂದುವರಿದ ಭಾಗವಾಗಿದೆ ಎಂದು ಹನೀಫ್ ಖಾನ್ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ಜಲೀಲ್ ಕಷ್ಣಾಪುರ, ಎಂ.ಕೂಸಪ್ಪ, ದ.ಕ.ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಕೋಶಾಧಿಕಾರಿ ಇಕ್ಬಾಲ್ ಗೂಡಿನಬಳಿ, ಮಂಗಳೂರು ವಿಧಾನ ಸಬಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಹಾರಿಸ್ ಮಲಾರ್ ಉಪಸ್ಥಿತರಿದ್ದರು.