ಯುನೈಟೆಡ್ ಮುಸ್ಲಿಂ ಫ್ರಂಟ್ ನಾಯಕರಿಂದ ಗೃಹ ಸಚಿವರ ಭೇಟಿ

Mon, 05/22/2017 - 11:34 -- web editor

ಬೆಂಗಳೂರು: ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರನ್ನು ಅವರ ನಿವಾಸದಲ್ಲಿ ಇಂದು ಭೇಟಿ ಮಾಡಿದ ಯುನೈಟೆಡ್ ಮುಸ್ಲಿಂ ಫ್ರಂಟ್ ನ ನಾಯಕರು, ಇತ್ತೀಚೆಗೆ ಮಂಗಳೂರು ಸಿಸಿಬಿ ಪೊಲೀಸರಿಂದ ಹಲ್ಲೆ ಮತ್ತು ದೌರ್ಜನ್ಯಕ್ಕೊಳಗಾದ ಅಹ್ಮದ್ ಖುರೇಷಿ ಪ್ರಕರಣದ ಸಿಐಡಿ ತನಿಖೆಯ ಪ್ರಾಥಮಿಕ ವರದಿಯನ್ನು ಶೀಘ್ರವೇ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಿದರು.

ಹಿಂದುತ್ವದ ದುಷ್ಕರ್ಮಿಗಳಿಂದ ಕೊಲೆಗೈಯಲ್ಪಟ್ಟ ಜಲೀಲ್ ಕರೋಪಾಡಿಯ ಕೊಲೆಗಾರರೊಂದಿಗೆ ಸಂಬಂಧವಿರುವ ದಿನೇಶ್ ಶೆಟ್ಟಿ ಮತ್ತು ಗೂಂಡಾಗಗಳೊಂದಿಗೆ ಶಾಮೀಲಾಗಿರುವರೆಂದು ನಂಬಲಾದ ಪ್ರವೀಣ್ ರೈಯನ್ನು ಬಂಧಿಸಿ ಸೂಕ್ತ ತನಿಖೆ ನಡೆಸಬೇಕೆಂದು ಇದೇ ವೇಳೆ ಆಗ್ರಹಿಸಲಾಯಿತು. ಜೈಲಿನಲ್ಲಿ ಹತ್ಯೆಯಾದ ಮುಸ್ತಫಾ ಕಾವೂರ್ ರವರಿಗೆ ಸರಕಾರದ ವತಿಯಿಂದ ಸಿಗಬೇಕಾದ ಸೂಕ್ತ ಪರಿಹಾರ ಮೊತ್ತವನ್ನು ಕೂಡಲೇ ನೀಡಬೇಕೆಂದು ಮನವಿ ಸಲ್ಲಿಸಲಾಯಿತು.

ಯುನೈಟೆಡ್ ಮುಸ್ಲಿಂ ಫ್ರಂಟ್ ನ ಅಧ್ಯಕ್ಷ ಮುಸ್ತಫಾ ಕೆಂಪಿ, ಪ್ರಧಾನ ಕಾರ್ಯದರ್ಶಿ ನವಾಝ್ ಉಳ್ಳಾಲ್, ಉಪಾಧ್ಯಕ್ಷರಾದ ರಫಿಉದ್ದೀನ್ ಕುದ್ರೋಳಿ ಮತ್ತು ಎಸ್ ಡಿಪಿಐನ ಹನೀಫ್ ಖಾನ್ ಕೊಡಾಜೆ ನಿಯೋಗದಲ್ಲಿದ್ದರು.