ಖಮರುಲ್ ಇಸ್ಲಾಂ ನಿಧನ :ಪಾಪ್ಯುಲರ್ ಫ್ರಂಟ್ ಸಂತಾಪ

Wed, 09/27/2017 - 11:55 -- web editor

ಬೆಂಗಳೂರು: ಕರ್ನಾಟಕ ರಾಜ್ಯದ ಮಾಜಿ ಸಚಿವರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೂ ಆಗಿರುವ ಖಮರುಲ್ ಇಸ್ಲಾಂ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷರಾದ ಮುಹಮ್ಮದ್ ಶಾಕಿಬ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಆರು ಬಾರಿ ಶಾಸಕರಾಗಿ ಹಾಗೂ ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದ ಖಮರುಲ್ ಇಸ್ಲಾಂ ಪೌರಾಡಳಿತ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವರಾಗಿ ಸೇವೆ ಸಲ್ಲಿಸಿದ್ದರು. ದುರ್ಬಲ ಜನ ಸಮುದಾಯದ ಬಗ್ಗೆ ತೀವ್ರ ಕಳಕಳಿಯನ್ನು ಹೊಂದಿದ್ದ ಖಮರುಲ್ ಇಸ್ಲಾಂ ಅತ್ಯಂತ ಜನಪ್ರಿಯ ಜನ ನಾಯಕರಾಗಿದ್ದರು. ಖಮರುಲ್ ಇಸ್ಲಾಂ ಹಠಾತ್ ನಿಧನವು ಸಮಾಜಕ್ಕೆ ದೊಡ್ಡ ನಷ್ಟವಾಗಿದೆ. ಮೃತರ ಕುಟುಂಬದ ದುಃಖದಲ್ಲಿ ನಾವೂ ಭಾಗಿಯಾಗಿರುತ್ತೇವೆ. ಸೃಷ್ಟಿಕರ್ತನು ಮೃತರ ಸತ್ಕರ್ಮಗಳನ್ನು ಸ್ವೀಕರಿಸಿ ಪರಲೋಕ ಯಾತ್ರೆಯನ್ನು ಸುಖಮಯಗೊಳಿಸಲೆಂದು ಈ ಮೂಲಕ ಪ್ರಾರ್ಥಿಸುತ್ತೇವೆ.

ಮುಹಮ್ಮದ್ ಶಾಕಿಬ್
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ
ಕರ್ನಾಟಕ