ಸಂವಿಧಾನ ಮತ್ತು ರಾಷ್ಟ್ರ ರಕ್ಷಣೆಗಾಗಿ ವಿಶಾಲ ಮೈತ್ರಿಗೆ ಕರೆ ನೀಡಿದ ನ್ಯಾಯ ಮತ್ತು ಶಾಂತಿಗಾಗಿ ರಾಷ್ಟ್ರೀಯ ಸಮಾವೇಶ

Thu, 10/19/2017 - 07:56 -- web editor

ಭಾರತದಾದ್ಯಂತದ ಹೋರಾಟಗಾರರು ಮುಂಬೈಯಲ್ಲಿ ಅಕ್ಟೋಬರ್ 15,16ರಂದು ನಡೆಸಿದ ನ್ಯಾಯ ಮತ್ತು ಶಾಂತಿ ಮೈತ್ರಿಯ ಎರಡು ದಿನಗಳ ರಾಷ್ಟ್ರೀಯ ಸಮಾವೇಶವು, ಬ್ರಾಹ್ಮಣ್ಯ ಫ್ಯಾಶಿಸ್ಟ್ ಪಡೆಗಳ ಹಿಡಿತದಿಂದ ಸಂವಿಧಾನ ಮತ್ತು ರಾಷ್ಟ್ರವನ್ನು ರಕ್ಷಿಸಲು ವಿಶಾಲ ಮೈತ್ರಿಯನ್ನು ನಿರ್ಮಿಸಲು ಕರೆ ನೀಡುವ ಮೂಲಕ ಮುಕ್ತಾಯಗೊಂಡಿತು.

ತುಳಿತಕ್ಕೊಳಗಾದ ಆದಿವಾಸಿಗಳು, ಪರಿಶಿಷ್ಟ ಜಾತಿಗಳು, ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಎಲ್ಲಾ ಜಾತ್ಯತೀತ ಹಾಗೂ ಪ್ರಜಾಪ್ರಭುತ್ವ ಶಕ್ತಿಗಳ ನಡುವೆ ವಿಶಾಲ ಮೈತ್ರಿ ರಚನೆಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಸಮಾವೇಶದ ಸಮಾರೋಪದ ಅವಧಿಯಲ್ಲಿ ಚರ್ಚಿಸಲಾಯಿತು. ಸಮಾವೇಶದ ಕೊನೆಯಲ್ಲಿ ‘‘ಮುಂಬೈ ಡಿಕ್ಲರೇಷನ್’’ ಎಂಬ ಹೆಸರಿನ ಒಂದು ನಿರ್ಣಯವನ್ನು ಕೈಗೊಳ್ಳಲಾಯಿತು. ಈ ನಿರ್ಣಯವು ಭವಿಷ್ಯದ ಉಪಕ್ರಮಗಳಿಗೆ ಪರಿಕಲ್ಪನಾ ಅಡಿಪಾಯದ ಜೊತೆಗೆ ಅನುಷ್ಠಾನದ ರಚನೆಯಂತೆ ಕಾರ್ಯನಿರ್ವಹಿಸಲಿದೆ.

ವಿವಿಧ ರಾಜ್ಯಗಳಿಂದ ಆಗಮಿಸಿದ ವಿವಿಧ ರಾಜಕೀಯ ಮತ್ತು ಸಾಮಾಜಿಕ ಗುಂಪುಗಳ 150 ಮಂದಿ ಪ್ರತಿನಿಧಿಗಳು ದೀರ್ಘಾವಧಿ ಮತ್ತು ಅಲ್ಪಾವಧಿ ಸಮಯದ ಕಾರ್ಯಗಳ ಜೊತೆಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೂ ಸಹಮತ ವ್ಯಕ್ತಪಡಿಸಿದರು. ಈ ಸಭೆಯು ನ್ಯಾಯಮೂರ್ತಿ ಪಿ.ಬಿ.ಸಾವಂತ್, ವೌಲಾನ ಖಲೀಲುರ್ರಹ್ಮಾನ್ ಸಜ್ಜಾದ್ ನೂಮಾನಿ ಮತ್ತು ಜಸ್ಟೀಸ್ ಕೋಲ್ಸೆ ಪಾಟೀಲ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಇ.ಎಂ.ಅಬ್ದುಲ್ ರಹಿಮಾನ್ ಮತ್ತು ಮತ್ತು ಗೋಪಾಲ್ ಮೆನನ್‌ರವರ ಮೂಲಕ ಈ ಸಮಾವೇಶವನ್ನು ನಿರ್ವಹಿಸಿದರು. ವಿ.ಟಿ.ರಾಜಶೇಖರ್, ವಾಮನ್ ಮೆಶ್ರಾಮ್, ಡಾ.ತಸ್ಲೀಮ್ ರೆಹ್ಮಾನಿ, ಟೀಸ್ತಾ ಸೆಟಲ್‌ವಾಡ್, ಇಲ್ಯಾಸ್ ಮುಹಮ್ಮದ್ ತುಂಬೆ ಮುಂತಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಅಮ್ಜದ್ ಶೈಖ್‌ರವರು ವಂದಿಸಿದರು. ವಿವಿಧ ರಾಜ್ಯಗಳ ವಿವಿಧ ರಾಜಕೀಯ ಮತ್ತು ಸಾಮಾಜಿಕ ಗುಂಪುಗಳ 150 ಪ್ರತಿನಿಧಿಗಳು ದೀರ್ಘಕಾಲೀನ ಮತ್ತು ಕಡಿಮೆ ಸಮಯಗಳ ಕ್ರಮಗಳೊಂದಿಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಬೆಲೆ ಏರಿಕೆ, ಕಷಿ ಬಿಕ್ಕಟ್ಟು ನಿಯಂತ್ರಣ, ಯುಎಪಿಎ, ಎಎಫ್‌ಎಸ್‌ಪಿಎ ಕಠಿಣ ಕಾನೂನನ್ನು ರದ್ದುಪಡಿಸುವುದು, ಎನ್‌ಐಎಯನ್ನು ರದ್ದುಪಡಿಸುವುದು, ಎಲ್ಲಾ ಗುಪ್ತಚರ ಮತ್ತು ಏಜೆನ್ಸಿಗಳನ್ನು ಸಂಸದೀಯ ಪರಿಶೀಲನೆಗೆ ಒಳಪಡಿಸುವುದು, ಮಹಿಳೆಯರ ರಕ್ಷಣೆ ಮುಂತಾದ ಕೆಲವು ಮುಖ್ಯ ಸಮಸ್ಯೆಗಳ ಕುರಿತೂ ನಿರ್ಣಯಗಳನ್ನು ಕೈಗೊಳ್ಳಲಾಯಿತು.