"ಇಂಡಿಯಾ ಟುಡೆ ಚಾನೆಲ್ ಪ್ರಸಾರ ಮಾಡಿದ ಕಾರ್ಯಕ್ರಮವು ಸಂಪೂರ್ಣ ಕಟ್ಟುಕತೆ"

Mon, 11/06/2017 - 08:43 -- web editor

ನಿರಾಧಾರ ಆರೋಪಗಳ ಬಗ್ಗೆ ಎ.ಎಸ್.ಝೈನಬಾ ಸ್ಪಷ್ಟೀಕರಣ

ಇಂಡಿಯಾ ಟುಡೆ ಚಾನೆಲ್ ಪ್ರಸಾರ ಮಾಡಿದ ಕಾರ್ಯಕ್ರಮವು ಸಂಪೂರ್ಣ ಕಟ್ಟುಕತೆಯಾಗಿದ್ದು, ಮಾಧ್ಯಮದ ಒಂದು ವರ್ಗವು ನನಗೆ ಕೆಟ್ಟ ಹೆಸರು ತರಲು ಆರಂಭಿಸಿದ್ದ ಅಭಿಯಾನದ ಮುಂದುವರಿದ ಭಾಗವಾಗಿದೆ ಎ.ಎಸ್.ಝೈನಬಾ ಸ್ಪಷ್ಟೀಕರಣ ನೀಡಿದ್ದಾರೆ.

ಇದು ಒಂದು ತಿಂಗಳ ಹಿಂದೆ ನಡೆದ ಮಾತುಕತೆಯ ಕಾಪಿ, ಪೇಸ್ಟ್ ಆವತ್ತಿಯಾಗಿದೆ. ಸ್ನೇಹಿತರಿಂದ ಪರಿಚಯಿಸಲ್ಪಟ್ಟ ಈ ವ್ಯಕ್ತಿ ನನ್ನ ಬಳಿ ಬಂದು ಇಸ್ಲಾಮಿಕ್ ಶಿಕ್ಷಣ ಕೇಂದ್ರವನ್ನು ಪ್ರಾರಂಭಿಸಬೇಕೆಂದು ಬಯಸಿದ್ದೇನೆ ಎಂದರು. ಇದು ಸಂಘಟನೆ, ಹಾದಿಯಾ ಕೇಸ್ ಮತ್ತು ಸತ್ಯಸರಣಿ ಬಗ್ಗೆ ನಡೆದ ಮಾತುಕತೆಯಾಗಿತ್ತು. ನನಗೆ ಕೆಟ್ಟ ಹೆಸರು ತರಲು ಮತ್ತು ಕೇರಳದಲ್ಲಿ ನಡೆಯುತ್ತಿರುವ ಭಯಾನಕ ಘಟನೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಉದ್ದೇಶಪೂರ್ವಕವಾಗಿ ಪ್ರಶ್ನೋತ್ತರಗಳನ್ನು ಎಡಿಟ್ ಮಾಡಿ ಪ್ರಸಾರ ಮಾಡಲಾಗಿದೆ ಎಂದು ಝೈನಬಾ ಹೇಳಿದ್ದಾರೆ.

ನನ್ನ ಎಲ್ಲಾ ಕಾರ್ಯಚಟುವಟಿಕೆಗಳನ್ನು ಬೇರೆ ಬೇರೆ ಮಾಧ್ಯಮಗಳಿಗೆ ಹಾಗೂ ಎನ್‌ಐಎ ಸೇರಿದಂತೆ ಇತರ ಮೂರು ತನಿಖಾ ಸಂಸ್ಥೆಗಳಿಗೆ ತಿಳಿಸಿದ್ದೇನೆ. ಅದನ್ನು ಬಹಿರಂಗವಾಗಿ ಅಥವಾ ಗುಪ್ತವಾಗಿ ಚಿತ್ರಿಕರಿಸಿದರೂ ಮರೆಮಾಚುವಂತಹ ಯಾವುದೇ ವಿಷಯ ನನ್ನ ಬಳಿ ಇಲ್ಲ. ಸತ್ಯ ಸರಣಿ ಒಂದು ಶೈಕ್ಷಣಿಕ ಕೇಂದ್ರವಾಗಿದ್ದು, ಇದು ಮತಾಂತರ ಕೇಂದ್ರವಲ್ಲವೆಂದು ನಾನು ಸತ್ಯವನ್ನೆ ಹೇಳಿದ್ದೇನೆ. ಬೇರೆ ರಾಜ್ಯಗಳಲ್ಲಿ ಇಂತಹ ಒಂದು ಸಂಸ್ಥೆಯನ್ನು ಪ್ರಾರಂಬಿಸುವ ಪ್ರಕ್ರಿಯೆಯ ಕುರಿತ ಪ್ರಶ್ನೆಗೆ ಸಂಸ್ಥೆಯ ರಚನೆ ಹಾಗೂ ಟ್ರಸ್ಟ್‌ನ ಸ್ವರೂಪ ಮತ್ತು ನನ್ನ ಜ್ಞಾನದ ಮಿತಿಯೊಳಗೆ ಕಾನೂನಿನ ವಿಧಿವಿಧಾನಗಳ ಬಗ್ಗೆ ವಿವರಿಸಿದ್ದೇನೆ. ಅಂಕಿಅಂಶಗಳು ಕೋರ್ಸ್ ಪೂರ್ತಿಗೊಳಿಸಿದ ವಿದ್ಯಾರ್ಥಿಗಳದ್ದಾಗಿದೆ. ಅದರಲ್ಲಿ ಕಳೆದ 10 ವರ್ಷಗಳಿಂದ ಸಾಂಪ್ರದಾಯಿಕ ಮುಸ್ಲಿಮರು ಮತ್ತು ನವಮುಸ್ಲಿಮ್ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೂಡಾ ಸೇರಿದ್ದಾರೆ. ಇದು ಸತ್ಯಸರಣಿಯ ವೆಬ್‌ಸೈಟ್‌ನಲ್ಲಿ ದಾಖಲಿಸಲಾದ ಮಾಹಿತಿಯಾಗಿದ್ದು, ಇದಕ್ಕೆ ಯಾವುದೇ ಗುಪ್ತ ಕಾರ್ಯಾಚರಣೆಯ ಅವಶ್ಯಕತೆಯಿರಲಿಲ್ಲ. ವಿದೇಶಿ ನಿಧಿ ಸೇರಿದಂತೆ ಇತರ ಎಲ್ಲಾ ಆರೋಪಗಳು ಶುದ್ಧ ಸುಳ್ಳು ಮಾಹಿತಿಗಳಾಗಿದೆ. ನನಗೂ ಮತ್ತು ನನ್ನ ಸಂಘಟನೆಗೆ ಕೆಟ್ಟಹೆಸರು ತರಲು ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ ಎಂದು ಈ ಸ್ಟಿಂಗ್ ಆಪರೇಷನ್‌ನಿಂದ ಸ್ಪಷ್ಟವಾಗಿದೆ. ಸಂಘಪರಿವಾರದ ಸಂಘಟನೆಗಳು ನಡೆಸುತ್ತಿರುವ ಪೀಡನಾ ಕೇಂದ್ರಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಈ ನಿರಾಸೆಗೊಂಡ ದುಷ್ಟಶಕ್ತಿಗಳು ಒಂದರ ನಂತರ ಒಂದು ಕಥೆಯನ್ನು ಸಷ್ಟಿಸುತ್ತಿದ್ದಾರೆ. ಈ ಪೀಡನಾ ಕೇಂದ್ರಗಳ ವಿರುದ್ಧ ಈಗಾಗಲೇ ಬಹಳಷ್ಟು ಬಲಿಪಶುಗಳು ಪೊಲೀಸ್ ಠಾಣೆಯಲ್ಲಿ ಕೇಸುಗಳನ್ನು ದಾಖಲಿಸಿದ್ದಾರೆ. ಇನ್ನೂ ಯಾರಾದರೂ ಎಡಿಟ್ ಮಾಡಿರದ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿದರೆ ಇದರ ಹಿಂದೆ ಅಡಗಿದ ಷಡ್ಯಂತ್ರವನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದು ವಿವರಿಸಿರುವ ಎ.ಎಸ್.ಝೈನಬಾ, ನಾನು ಈ ಎಲ್ಲಾ ಆರೋಪಗಳನ್ನು ಕಾನೂನಾತ್ಮಕವಾಗಿ ಪ್ರಶ್ನಿಸಲಿದ್ದೇನೆ ಎಂದು ಹೇಳಿದ್ದಾರೆ.