ಜನಾರೋಗ್ಯವೇ ರಾಷ್ಟ್ರಶಕ್ತಿ ಅಭಿಯಾನದ ಅಂಗವಾಗಿ ಸಿಂದಗಿಯಲ್ಲಿ ಮ್ಯಾರಥಾನ್

Fri, 12/29/2017 - 06:57 -- web editor

ಸಿಂದಗಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ‘ಜನಾರೋಗ್ಯವೇ ರಾಷ್ಟ್ರಶಕ್ತಿ’ ಘೋಷಣೆಯಡಿ ನಡೆಸಿದ ಆರೋಗ್ಯ ಜಾಗತಿ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಪಾಪ್ಯುಲರ್ ಫ್ರಂಟ್ ಸಿಂದಗಿ ತಾಲೂಕು ಸಮಿತಿಯ ವತಿಯಿಂದ ಡಿ.24ರಂದು ಸಿಂದಗಿ ನಗರದ ಹಝ್‌ರತ್ ಗಾಜಿ ಹುಸೇನಿ ದರ್ಗಾದಿಂದ ಶಹೀದ ಟಿಪ್ಪುಸುಲ್ತಾನ ವೃತ್ತದ ಮಾರ್ಗವಾಗಿ ಡಾ. ಬಾಬಾ ಸಾಹೇಬ ಅಂಬೇಡ್ಕರ ವೃತ್ತದ ವರೆಗೆ ಮ್ಯಾರಾಥಾನ್ ನಡಿಗೆಯನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಆರೋಗ್ಯ ಮತ್ತು ಶುಚಿತ್ವದ ಕುರಿತು ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್ ಜಿಲ್ಲಾ ಸಮಿತಿ ಸದಸ್ಯ ಸಲೀಮ್ ಎಂ.ಆಲ್ದಿ, ಎಚ್. ಮೈನುದ್ದೀನ್, ಜಾಫರ್ ಇನಾಮಾದಾರ, ಮಾಜಿ ಸೈನಿಕರಾದ ಶಬ್ಬೀರ್ ಪಟೇಲ ಬಿರಾದಾರ, ಕರ್ನಾಟಕ ಎಜುಕೇಷನ್ ಸೊಸೈಟಿಯ ಚೆಯರ್‌ಮೆನ್ ನಾಸಿರುದ್ದೀನ್ ಶೇಖ್, ಉಪನ್ಯಾಸಕ ಮುನೀರ್ ಅತ್ತಾರ, ಅಲ್ತಾಫ ಮರ್ತುರ್, ನಝೀರ್ ಅಹ್ಮದ್ ಪಡೇಕನೂರ್, ರಫೀಕ್ ಹವಾಲ್ದಾರ್ ಮೊದಲಾದವರು ಪಾಲ್ಗೊಂಡಿದ್ದರು. ಇದೇ ವೇಳೆ ಯೋಗ ಮತ್ತು ವ್ಯಾಯಾಮದ ಕೈಪಿಡಿಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.