ಪಶ್ಚಿಮ ಬಂಗಾಳದಲ್ಲಿ ಅಫ್ರಾಝುಲ್ ಕುಟುಂಬವನ್ನು ಭೇಟಿ ಮಾಡಿದ ಪಾಪ್ಯುಲರ್ ಫ್ರಂಟ್ ಚೆಯರ್‌ಮೆನ್

Fri, 12/29/2017 - 07:03 -- web editor

ರಾಜಸ್ಥಾನದಲ್ಲಿ ಇತ್ತೀಚೆಗೆ ಅತ್ಯಂತ ಕ್ರೂರವಾಗಿ ಕೊಲೆಗೀಡಾದ ಮುಹಮ್ಮದ್ ಅಫ್ರಾಝುಲ್ ಕುಟುಂಬವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್‌ಮೆನ್ ಇ.ಅಬೂಬಕರ್‌ರವರು ಪಶ್ಚಿಮ ಬಂಗಾಳ ರಾಜ್ಯಾಧ್ಯಕ್ಷ, ಮುಹಮ್ಮದ್ ಶಹಾಬುದ್ದೀನ್, ಝೋನ್ ಕಾರ್ಯದರ್ಶಿ ಆರಿಫ್ ಖಾನ್ ಮತ್ತು ಇತರ ನಾಯಕರೊಂದಿಗೆ ಡಿಸೆಂಬರ್ 21ರಂದು ಭೇಟಿ ಮಾಡಿದರು.

ಮುಹಮ್ಮದ್ ಅಫ್ರಾಝುಲ್‌ರನ್ನು ಡಿಸೆಂಬರ್ 6ರಂದು ಹಿಂದೂ ಮತಾಂಧ ಶಂಭುಲಾಲ್ ರೇಗರ್ ಲವ್ ಜಿಹಾದ್ ಆರೋಪ ಹೊರಿಸಿ ಅತ್ಯಂತ ಕ್ರೂರವಾಗಿ ಹತ್ಯೆಗೈದಿದ್ದನು. 50 ವರ್ಷ ಪ್ರಾಯದ ಅಫ್ರಾಝುಲ್ ಪಶ್ಚಿಮ ಬಂಗಾಲದ ಮಾಲ್ದ ಜಿಲ್ಲೆಯ ಜಲಾಲ್‌ಪುರ್ ಠಾಣಾ ವ್ಯಾಪ್ತಿಯ ಸೆಯ್ಯದ್‌ಪುರ್ ಗ್ರಾಮದಲ್ಲಿ ವಾಸವಾಗಿದ್ದರು. ಈ ಅಘಾತಕಾರಿ ಘಟನೆಯು ಮಾಧ್ಯಮದ ಮೂಲಕ ತಿಳಿದ ನಂತರ ಪಾಪ್ಯುಲರ್ ಫ್ರಂಟ್ ಪಶ್ಚಿಮ ಬಂಗಾಳ ನೇತತ್ವದಲ್ಲಿ ಡಾ. ಮುಹಮ್ಮದ್ ಮಿನಾರುಲ್ ಹಕ್‌ರನ್ನು ಒಳಗೊಂಡ 7 ಮಂದಿಯ ತಂಡವು ಡಿಸೆಂಬರ್ 8ರಂದು ಅಫ್ರಾಝುಲ್ ಕುಟುಂಬವನ್ನು ಭೇಟಿ ಮಾಡಿದ್ದರು.

ಭೇಟಿಯಲ್ಲಿ ಸಂತ್ರಸ್ತರ ಕುಟುಂಬ ಮತ್ತು ಗ್ರಾಮದ ನಿವಾಸಿಗಳೊಂದಿಗೆ ಮಾತುಕತೆಯನ್ನು ನಡೆಸಿದ ಇ.ಅಬೂಬಕರ್ ಅವರು, ದುಃಖತಪ್ತ ಕುಟುಂಬವನ್ನು ಸಂತೈಸಿದರು. 1 ಲಕ್ಷ ಸಹಾಯ ಧನವನ್ನು ನೀಡುವ ಮತ್ತು ನ್ಯಾಯ ಪಡೆಯುವವರೆಗೂ ಕುಟುಂಬದೊಂದಿಗೆ ನಿಲ್ಲುವ ಭರವಸೆಯನ್ನು ಚೆಯರ್‌ಮೆನ್ ಈ ಸಂದರ್ಭದಲ್ಲಿ ನೀಡಿದರು. ಅಪರಾಧಿಗೆ ಶಿಕ್ಷೆಯಾಗಬೇಕು ಮತ್ತು ಕುಟುಂಬಕ್ಕೆ ಪರಿಹಾರವನ್ನು ನೀಡಬೇಕೆಂದು ತಂಡವು ಸರಕಾರವನ್ನು ಒತ್ತಾಯಿಸಿತು. ಅಲ್ಲಿ ಸೇರಿದ್ದ 300ಕ್ಕಿಂತಲೂ ಅಧಿಕ ಜನರು ಚೆಯರ್‌ಮೆನ್‌ರ ಮಾತನ್ನು ಬಹಳ ಉತ್ಸಾಹದಿಂದ ಅಲಿಸಿದರು.
ಹತ್ಯೆಗೀಡಾದ ಅಫ್ರಾಝುಲ್‌ರವರ ಮತದೇಹವನ್ನು ಮಾಲ್ದಾಗೆ ತಲುಪಿಸುವಲ್ಲಿ ಪಾಪ್ಯಲರ್ ಫ್ರಂಟ್ ರಾಜ್ಯ ನಾಯಕರು ಕುಟುಂಬಕ್ಕೆ ನೆರವಾಗಿದ್ದರು. ಚೆಯರ್‌ಮೆನ್ ಮತ್ತು ತಂಡದ ಭೇಟಿಯು ಅಂತಿಮವಾಗಿ ನ್ಯಾಯವು ದೊರಕಲಿದೆ ಎಂಬ ಭರವಸೆಯನ್ನು ಗ್ರಾಮಸ್ಥರಲ್ಲಿ ಮೂಡಿಸಿದೆ.