ಪಾಪ್ಯುಲರ್ ಫ್ರಂಟ್ ವತಿಯಿಂದ ಬಡ ಕುಟುಂಬಕ್ಕೆ ಮನೆ ಕೊಡುಗೆ

Tue, 04/17/2018 - 06:51 -- web editor

ಪುತ್ತೂರು: ಸಾಲ್ಮರ ಕೆರೆಮೂಲೆ ಎಂಬಲ್ಲಿ ಅನಾಥರಾಗಿರುವ ಹಾಜಿರಾ ತಾರಿಗುಡ್ಡೆ ಎಂಬವರ ಕುಟುಂಬಕ್ಕೆ ಆಸರೆಯಾಗಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲೆ ಹಾಗೂ ಸಾಲ್ಮರ ವಲಯದ ವತಿಯಿಂದ ಇತ್ತೀಚೆಗೆ ನೂತನ ಮನೆಯನ್ನು ನಿರ್ಮಿಸಿಕೊಡಲಾಯಿತು. ಪಾಪ್ಯುಲರ್ ಫ್ರಂಟ್ ಕೋಸ್ಟಲ್ ರೆನ್ ಅಧ್ಯಕ್ಷ ಅಬ್ದುಲ್ ಖಾದರ್ ಹಾಗೂ ಪುತ್ತೂರು ಜಿಲ್ಲಾಧ್ಯಕ್ಷ ಅಬೂಬಕರ್ ರಿಝ್ವುನ್ ಮನೆಯ ಕೀಲಿಕೈಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಾಲ್ಮರ ಜಮಾಅತಿನ ಖತೀಬ್ ಉಮರ್ ದಾರಿಮಿ, ಶರ್ಫುದ್ದೀನ್ ತಂಙಳ್ ಸಾಲ್ಮರ, ಹಮೀದ್ ಸಾಲ್ಮರ, ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷಕೆ.ಎ. ಸಿದ್ದೀಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಪುತ್ತೂರು ಸಿಟಿ ಡಿವಿಷನ್ ಅಧ್ಯಕ್ಷ ಅಝೀಝ್ ಕಬಕ, ಸಯ್ಯದ್ ಮಲೆ ಜುಮಾ ಮಸೀದಿಯ ಅಧ್ಯಕ್ಷಅಬೂಬಕರ್ ಮುಸ್ಲಿಯಾರ್, ಎಪಿಎಂಸಿ ಮಸೀದಿಯ ಅಧ್ಯಕ್ಷಯಹ್ಯಾ ಸಾಲ್ಮರ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಾಲ್ಮರ ವಲಯಾಧ್ಯಕ್ಷಆಸೀಫ್ ಸಾಲ್ಮರ, ಅಲೀ ಸಾಲ್ಮರ, ರಝಾಕ್ ಕೆರೆಮೂಲೆ ಮುಂತಾದವರು ಉಪಸ್ಥಿತರಿದ್ದರು.

ಉಸ್ಮಾನ್ ಸಾಲ್ಮರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.