ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮರುಮೌಲ್ಯಮಾಪನದ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಬೆಳಗಾವಿಯ ಸೇಂಟ್ ಕ್ಸೇವಿಯರ್ ಪ್ರೌಢ ಶಾಲೆಯ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿ ಮುಹಮ್ಮದ್ ಕೈಫ್ ಮುಲ್ಲಾರನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳಗಾವಿ ಜಿಲ್ಲಾ ಸಮಿತಿ ಅಭಿನಂದಿಸಿ ಸನ್ಮಾನಿಸಿದೆ.
ಮುಹಮ್ಮದ್ ಕೈಫ್ 625ರಲ್ಲಿ 624 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಮತ್ತು ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದರು. ಪ್ರಥಮ ಭಾಷೆ ಇಂಗ್ಲಿಷ್ನಲ್ಲಿ 125ರಲ್ಲಿ 125, ದ್ವಿತೀಯ ಭಾಷೆ ಕನ್ನಡ ಸೇರಿದಂತೆ ಇತರ ಎಲ್ಲ ವಿಷಯಗಳಲ್ಲೂ 100ರಲ್ಲಿ 100 ಅಂಕಗಳನ್ನು ಪಡೆದಿದ್ದು, ವಿಜ್ಞಾನದಲ್ಲಿ 99 ಅಂಕ ಗಳಿಸಿದ್ದರು. ವಿಜ್ಞಾನದಲ್ಲಿ 1 ಅಂಕ ಕಡಿಮೆ ಬಂದಿದೆ ಎಂದು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಮರುಮೌಲ್ಯಮಾಪನದ ಬಳಿಕ 625ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಎನ್ನುವ ದಾಖಲೆಯನ್ನು ಮುಹಮ್ಮದ್ ಕೈಫ್ ಮುಡಿಗೇರಿಸಿಕೊಂಡಿದ್ದಾರೆ.
ಬೆಳಗಾವಿಯ ಮುಹಮ್ಮದ್ ಕೈಫ್ ಮುಲ್ಲಾರವರ ನಿವಾಸಕ್ಕೆ ಭೇಟಿ ನೀಡಿದ ನಿಯೋಗವು ಧನ ಸಹಾಯ ಹಾಗೂ ಫಲಕವನ್ನು ನೀಡಿ ಅಭಿನಂದಿಸಿ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದೆ.
ನಿಯೋಗದಲ್ಲಿ ಪಾಪ್ಯುಲರ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಆಸ್ಲಮ್ ಹಸನ್, ಜಿಲ್ಲಾಧ್ಯಕ್ಷ ಮೋಹಿನುದ್ದೀನ್ ಮಜಾವರ್, ಜಿಲ್ಲಾ ಕಾರ್ಯದರ್ಶಿ ಅಬಿದ್ ಖಾನ್ ಪಠಾಣ್, ಉದ್ಯಮಿ ಅಬ್ದುಲ್ ಬಾಸಿತ್, ಹಿರಿಯರಾದ ಇಸ್ಮಾಯಿಲ್ ಉಪಸ್ಥಿತರಿದ್ದರು.