ಪಾಪ್ಯುಲರ್ ಫ್ರಂಟ್‌ನಿಂದ ‘ಉನ್ನತ ಶಿಕ್ಷಣ ಸ್ಕಾಲರ್‌ಶಿಪ್ -2018’ ಘೋಷಣೆ

Wed, 08/01/2018 - 05:42 -- web editor

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ತನ್ನ ಸ್ಕಾಲರ್‌ಶಿಪ್ ಯೋಜನೆ-2018 ಅನ್ನು ದೆಹಲಿಯಲ್ಲಿ ಇಂದು ಘೋಷಿಸಿತು. ಈ ಯೋಜನೆಯು ಹೈಯರ್ ಸೆಕೆಂಡರಿ(12ನೇ ತರಗತಿ)ಯನ್ನು ಪೂರ್ಣಗೊಳಿಸಿ ಉನ್ನತ ಶಿಕ್ಷಣವನ್ನು ಪಡೆಯಲಿಚ್ಛಿಸುವ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವಾಗಲಿದೆ. 2018-19ರ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪಾಪ್ಯುಲರ್ ಫ್ರಂಟ್ ಉನ್ನತ ಶಿಕ್ಷಣಕ್ಕಾಗಿನ ತನ್ನ ಈ ರಾಷ್ಟ್ರೀಯ ಸ್ಕಾಲರ್‌ಶಿಪ್ ಯೋಜನೆಯನ್ನು ಸತತ 8 ವರ್ಷಗಳಿಂದ ಕಾರ್ಯಗತಗೊಳಿಸುತ್ತಿದೆ.

ಸ್ನಾತಕೋತ್ತರ ಕೋರ್ಸ್‌ಗಳು, ಪದವಿ, ಡಿಪ್ಲೋಮಾ ಅಥವಾ ಇತರ ಉನ್ನತ ಶಿಕ್ಷಣ ಪಡೆಯುತ್ತಿರುವ ಹಾಗೂ ಒಂದು ವರ್ಷದ ಅವಧಿಗಿಂತ ಕಡಿಮೆಯಲ್ಲದ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗೆ ಅರ್ಹರಾಗಿರುತ್ತಾರೆ. ಪತ್ರಿಕೋದ್ಯಮ, ಕಾನೂನು ಮತ್ತು ಸಮಾಜ ಸೇವೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಅರ್ಜಿಯನ್ನು www.popularfrontindia.org ನಲ್ಲಿ ಸಲ್ಲಿಸಬಹುದಾಗಿದೆ. ಅರ್ಜಿಯು 2018ರ ಜುಲೈ 31ರಿಂದ ಆನ್‌ಲೈನಲ್ಲಿ ಲಭ್ಯವಿರುತ್ತದೆ ಮತ್ತು 2018ರ ಆಗಸ್ಟ್ 31 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿರುತ್ತದೆ.

ಪಾಪ್ಯುಲರ್ ಫ್ರಂಟ್ 2011-12ರ ಶೈಕ್ಷಣಿಕ ಸಾಲಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸ್ಕಾಲರ್‌ಶಿಪ್ ವಿತರಣೆಯನ್ನು ಪ್ರಾರಂಭಿಸಿತ್ತು. ಈ ವರೆಗೆ 6.4 ಕೋಟಿ ರೂಪಾಯಿ ವೆಚ್ಚದ ಸ್ಕಾಲರ್‌ಶಿಪ್ ಅನ್ನು 7366 ವಿದ್ಯಾರ್ಥಿಗಳಿಗೆ (4114 ಹುಡುಗರು ಮತ್ತು 3252 ಹುಡುಗಿಯರು) ಭಾರತದ 13 ರಾಜ್ಯಗಳಾದ್ಯಂತ ವಿತರಿಸಿತ್ತು. ಶಿಕ್ಷಣ ಪೂರ್ಣಗೊಳಿಸಿ, ಉದ್ಯೋಗ ಪಡೆದಕ್ಷಣ ಸಮಾಜ ಸೇವೆಯ ಮೂಲಕ ಸಮಾಜಕ್ಕೆ ಕಾಣಿಕೆ ನೀಡುವ ನಿಟ್ಟಿನಲ್ಲಿ ಪಾಪ್ಯುಲರ್ ಫ್ರಂಟ್ ಈ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಿದೆ.

ಮಾಧ್ಯಮ ಸಂಯೋಜಕರು
ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ
ಕರ್ನಾಟಕ ರಾಜ್ಯ