ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಝೋನಲ್ ಅಧ್ಯಕ್ಷ ಹಾಗೂ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಎ.ಎಸ್.ಇಸ್ಮಾಯೀಲ್ರವರ ನೇತೃತ್ವದಲ್ಲಿ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಝಾದ್ರನ್ನು ಉತ್ತರ ಪ್ರದೇಶದ ಸಹಾರಾನ್ಪುರದಲ್ಲಿರುವ ಚುಟ್ಮಲ್ಪುರ್ನಲ್ಲಿನ ಅವರ ನಿವಾಸದಲ್ಲಿ ಭೇಟಿ ಮಾಡಲಾಯಿತು. ಎ.ಎಸ್.ಇಸ್ಮಾಯೀಲ್ರೊಂದಿಗೆ ಝೋನಲ್ ಕಾರ್ಯದರ್ಶಿ ಅನೀಸ್ ಅನ್ಸಾರಿ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ನ ರಾಜ್ಯಾಧ್ಯಕ್ಷ ಮೌಲಾನಾ ಮುಹಮ್ಮದ್ ಶಾದಾಬ್ ಮತ್ತಿತರ ರಾಜ್ಯ ನಾಯಕರು ನಿಯೋಗದಲ್ಲಿದ್ದರು. ದಲಿತ ಹಕ್ಕುಗಳಿಗಾಗಿ ಮತ್ತು ಸರಕಾರದ ದೌರ್ಜನ್ಯಗಳ ವಿರುದ್ಧ ಚಂದ್ರಶೇಖರ್ ಅಝಾದ್ರ ದೀರ್ಘ ಹೋರಾಟಕ್ಕೆ ನಿಯೋಗವು ಅಭಿನಂದನೆಯನ್ನು ಸಲ್ಲಿಸಿತು.
ಉತ್ತರ ಪ್ರದೇಶ ಸರಕಾರವು ಎನ್ಎಸ್ಎಅಡಿಯಲ್ಲಿ ಅಝಾದ್ರನ್ನು ಬಂಧಿಸಿತ್ತು ಮತ್ತು ಹಲವು ತಿಂಗಳ ಜೈಲುವಾಸದ ನಂತರ ಅವರಿಗೆ ಈ ವಾರ ಬಂಧನದಿಂದ ಮುಕ್ತಿ ದೊರಕಿದೆ. ಭೀಮ್ ಆರ್ಮಿಯ ಸಹೋದರರು ಮತ್ತು ಸಹೋದರಿಯರ ಮೇಲೆ ನಡೆಸಲಾದ ಕಿರುಕುಳವು ಫ್ಯಾಶಿಸ್ಟ್ ಹಾಗೂ ಜಾತೀಯವಾದಿ ಶಕ್ತಿಗಳನ್ನು ಸೋಲಿಸಿ ಸದ್ಯೋಭವಿಷ್ಯದಲ್ಲಿ ಅಧಿಕಾರವನ್ನು ದಮನಿತರ ಕೈಗೆ ದೊರಕಿಸಲಿದೆ ಎಂದು ಇಸ್ಮಾಯೀಲ್ ಹೇಳಿದರು. ಅಝಾದ್ರವರು ಜೈಲಿನಲ್ಲಿದ್ದ ವೇಳೆ, ದೇಶದ್ರೋಹದ ಆರೋಪವನ್ನು ಹೇರಿರುವುದರ ವಿರುದ್ಧ ಪಾಪ್ಯುಲರ್ ಫ್ರಂಟ್ಆಫ್ ಇಂಡಿಯಾದ ವತಿಯಿಂದ ನಡೆಸಲಾದ ಅಭಿಯಾನಕ್ಕಾಗಿ ಸಂಘಟನೆಗೆ ಅವರು ಧನ್ಯವಾದ ಸಲ್ಲಿಸಿದರು.