ವಾಮನ್ ಮೆಶ್ರಮ್ ಬಂಧನಕ್ಕೆ ಪಾಪ್ಯುಲರ್ ಫ್ರಂಟ್ ಖಂಡನೆ

Thu, 10/25/2018 - 08:55 -- web editor

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ. ಮುಹಮ್ಮದ್ ಅಲಿ ಜಿನ್ನಾ ಇಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಅಹ್ಮದಾಬಾದ್‌ನಲ್ಲಿ ನಡೆದ ಭಾರತ್ ಮುಕ್ತಿ ಮೋರ್ಚಾ ಮತ್ತು ಬಿಎಎಂಸಿಇಎಫ್ ನಾಯಕ ವಾಮನ್ ಮೆಶ್ರಮ್ ರ ಅಕ್ರಮ ಬಂಧನವನ್ನು ತೀವ್ರವಾಗಿ ಖಂಡಿಸಿದ್ದಾರೆ. ಬಹುಜನ ಕ್ರಾಂತಿ ಮೋರ್ಚಾ ನೇತೃತ್ವದಲ್ಲಿ ಪರಿವರ್ತನಾ ಯಾತ್ರೆಯ ಭಾಗವಾಗಿ ರಾಲಿ ನಡೆಸಲು ಅನುಮತಿ ನಿರಾಕರಿಸಿದ್ದು ಮಾತ್ರವಲ್ಲದೇ, ನಂತರ ರಾಜ್ಯದ ಪೊಲೀಸರು ಅದರ ನಾಯಕನನ್ನೂ ಬಂಧಿಸಿದ್ದಾರೆ. ಇದು ಸಂವಿಧಾನದಲ್ಲಿ ಪ್ರತಿಷ್ಠಾಪಿಸಲಾದ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂಘಟಿಸುವ ಸ್ವಾತಂತ್ರ್ಯದ ನೇರ ಉಲ್ಲಂಘನೆಯಾಗಿದೆ. ಈ ಘಟನೆಯು ಬಹುಜನ ಸಮಾಜದ ವಿರುದ್ಧ ಬಿಜೆಪಿ ನಡೆಸುತ್ತಿರುವ ಹಿಂದುತ್ವ ದ್ವೇಷ ರಾಜಕೀಯದ ಮತ್ತೊಂದು ದೃಷ್ಟಾಂತವಾಗಿದೆ.

ವಾಮನ್ ಮೆಶ್ರಮ್ ಅವರ ಪರಿವರ್ತನಾ ಯಾತ್ರೆಯೊಂದಿಗಿನ ಧ್ಯೇಯದೊಂದಿಗೆ ಮುಹಮ್ಮದ್ ಅಲಿ ಜಿನ್ನಾ ಐಕಮತ್ಯ ವ್ಯಕ್ತಪಡಿಸಿದ್ದಾರೆ. ಗುಜರಾತ್ ನಲ್ಲಾಗಲೀ, ಇತರ ಕಡೆಗಳಲ್ಲಾಗಲೀ ತುಳಿತಕ್ಕೊಳಗಾದ ವರ್ಗಗಳ ಮೇಲೇಳುವಿಕೆಯನ್ನು ಯಾವುದೇ ದಮನಕಾರಿ ವಿಧಾನಗಳ ಮೂಲಕ ತಡೆಯಲು ಸಾಧ್ಯವಿಲ್ಲ ಎಂದು ಅವರು ಬಿಜೆಪಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮ ಸಂಯೋಜಕರು
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ
ಕರ್ನಾಟಕ