ಪ್ರಮುಖ ಸುದ್ದಿ

ಪಾಪ್ಯುಲರ್ ಫ್ರಂಟ್ ಶೈಕ್ಷಣಿಕ ಸಬಲೀಕರಣ ಕಾರ್ಯಕ್ರಮ ವಿಸ್ತರಣೆ

Sun, 10/14/2018 - 14:07 -- web editor

ಸಮಾಜದ ಎಲ್ಲ ದಮನಿತ ವರ್ಗಗಳ ಸಬಲೀಕರಣವನ್ನೊಳಗೊಂಡ ಒಟ್ಟು ದೇಶದ ಸಮಗ್ರ ಸಬಲೀಕರಣಕ್ಕಾಗಿ ಪಾಪ್ಯುಲರ್ ಫ್ರಂಟ್ ಕಾರ್ಯಾಚರಿಸುತ್ತಿದೆ. ಇಂತಹ ಕಾರ್ಯಚಟುವಟಿಕೆಗಳ ಪೈಕಿ ಶೈಕ್ಷಣಿಕ ಸಬಲೀಕರಣವು ಅತಿ ಮಹತ್ವದ ಹೆಜ್ಜೆಗಳಲ್ಲೊಂದು. ಈ ನಿಟ್ಟಿನಲ್ಲಿ ಶಿಕ್ಷಣದ ಹಕ್ಕು ಕಾಯ್ದೆಯ ಪ್ರಕಾರ ಪ್ರತಿಯೊಂದು ಮಗು 10ನೇ ತರಗತಿ ವರೆಗಿನ ಪ್ರಾಥಮಿಕ ಶಿಕ್ಷಣದ ಅವಕಾಶ ಪಡೆದು, ಸಂಪೂರ್ಣ ಸಾಕ್ಷರತೆ ಸಾಧಿಸಿದ ರಾಷ್ಟ್ರ ನಿರ್ಮಾಣಕ್ಕಾಗಿ ಪಾಪ್ಯುಲರ್ ಫ್ರಂಟ್ ಕಾರ್ಯೋನ್ಮುಖವಾಗಿದೆ. ಮಾತ್ರವಲ್ಲದೆ, ದುರ್ಬಲ ವರ್ಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವಂತಾಗಲು ನೆರವಾಗುತ್ತದೆ.

ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಝಾದ್‌ರನ್ನು ಭೇಟಿಯಾದ ಪಾಪ್ಯುಲರ್ ಫ್ರಂಟ್

Mon, 09/17/2018 - 11:48 -- web editor
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್‌ರೊಂದಿಗೆ ಪಾಪ್ಯುಲರ್ ಫ್ರಂಟ್ ನಾಯಕರು

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಝೋನಲ್ ಅಧ್ಯಕ್ಷ ಹಾಗೂ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಎ.ಎಸ್.ಇಸ್ಮಾಯೀಲ್‌ರವರ ನೇತೃತ್ವದಲ್ಲಿ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಝಾದ್‌ರನ್ನು ಉತ್ತರ ಪ್ರದೇಶದ ಸಹಾರಾನ್‌ಪುರದಲ್ಲಿರುವ ಚುಟ್‌ಮಲ್‌ಪುರ್‌ನಲ್ಲಿನ ಅವರ ನಿವಾಸದಲ್ಲಿ ಭೇಟಿ ಮಾಡಲಾಯಿತು. ಎ.ಎಸ್.ಇಸ್ಮಾಯೀಲ್‌ರೊಂದಿಗೆ ಝೋನಲ್ ಕಾರ್ಯದರ್ಶಿ ಅನೀಸ್‌ ಅನ್ಸಾರಿ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ನ ರಾಜ್ಯಾಧ್ಯಕ್ಷ ಮೌಲಾನಾ ಮುಹಮ್ಮದ್ ಶಾದಾಬ್ ಮತ್ತಿತರ ರಾಜ್ಯ ನಾಯಕರು ನಿಯೋಗದಲ್ಲಿದ್ದರು. ದಲಿತ ಹಕ್ಕುಗಳಿಗಾಗಿ ಮತ್ತು ಸರಕಾರದ ದೌರ್ಜನ್ಯಗಳ ವಿರುದ್ಧ ಚಂದ್ರಶೇಖರ್ ಅಝಾದ್‌ರ ದೀರ್ಘ ಹೋರಾಟಕ್ಕೆ ನಿಯೋಗವು ಅಭಿನಂದನೆಯನ್ನು ಸಲ್ಲಿಸಿತು.

ಕೇರಳ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ - ದೇಶಾದ್ಯಂತ ನೆರವಿಗಾಗಿ ಪಾಪ್ಯುಲರ್ ಫ್ರಂಟ್ ಮನವಿ

Fri, 08/24/2018 - 09:56 -- web editor

ಕೇರಳದಲ್ಲಿ ಸಂಭವಿಸಿದ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಸೆಕ್ರೇಟರಿಯೇಟ್ ಸಭೆಯು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ ಮತ್ತು ರಾಜ್ಯವನ್ನು ಪುನರ್‌ನಿರ್ಮಿಸುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲಾ ನೆರವನ್ನು ನೀಡಬೇಕೆಂದು ದೇಶಾದ್ಯಂತ ಜನರಲ್ಲಿ ಅದು ಮನವಿ ಮಾಡಿದೆ.

ಅಸ್ಸಾಂ ಎನ್‌ಆರ್‌ಸಿ: ಮಾನವೀಯ ದುರಂತ ತಪ್ಪಿಸುವಂತೆ ಎಚ್ಚರಿಕೆ ನೀಡಿದ ಪಾಪ್ಯುಲರ್ ಫ್ರಂಟ್

Wed, 08/01/2018 - 12:29 -- web editor

ನಾಗರಿಕರ ರಾಷ್ಟ್ರೀಯ ನೋಂದಣಿ(ಎನ್‌ಆರ್‌ಸಿ)ಯ ಎರಡನೇ ಅಂತಿಮ ಕರಡಿನ ಕುರಿತು ಪ್ರತಿಕ್ರಿಯಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್‌ಮೇನ್ ಇ.ಅಬೂಬಕರ್, ಅಸ್ಸಾಂನಲ್ಲಿ ಉದ್ಭವಿಸಿರುವ ಅತ್ಯಂತ ದೊಡ್ಡ ಮಾನವೀಯ ದುರಂತದ ಕುರಿತು ಎಚ್ಚರಿಸಿದ್ದಾರೆ. ಅಸ್ಸಾಂನಲ್ಲಿ ದೊಡ್ಡ ಜನಸಂಖ್ಯೆಯ ಬಂಗಾಳಿ ಭಾಷೆ ಮಾತನಾಡುವ ಭಾರತೀಯ ನಾಗರಿಕರು ತಮ್ಮ ಸ್ವಂತ ತಾಯ್ನೆಡಿನಲ್ಲಿ ನಿರಾಶ್ರಿತರಾಗುವುದನ್ನು ತಡೆಯಲು ಸರಕಾರ, ನ್ಯಾಯಾಂಗ, ರಾಷ್ಟ್ರೀಯ ರಾಜಕೀಯ ಪಕ್ಷಗಳು ಮತ್ತು ಮಾನವ ಹಕ್ಕುಗಳ ಏಜೆನ್ಸಿಗಳು ಕೂಡಲೇ ಮಧ್ಯಪ್ರವೇಶಿಸಬೇಕೆಂದು ಅವರು ಕರೆ ನೀಡಿದ್ದಾರೆ.

ಪಾಪ್ಯುಲರ್ ಫ್ರಂಟ್‌ನಿಂದ ‘ಉನ್ನತ ಶಿಕ್ಷಣ ಸ್ಕಾಲರ್‌ಶಿಪ್ -2018’ ಘೋಷಣೆ

Wed, 08/01/2018 - 05:42 -- web editor

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ತನ್ನ ಸ್ಕಾಲರ್‌ಶಿಪ್ ಯೋಜನೆ-2018 ಅನ್ನು ದೆಹಲಿಯಲ್ಲಿ ಇಂದು ಘೋಷಿಸಿತು. ಈ ಯೋಜನೆಯು ಹೈಯರ್ ಸೆಕೆಂಡರಿ(12ನೇ ತರಗತಿ)ಯನ್ನು ಪೂರ್ಣಗೊಳಿಸಿ ಉನ್ನತ ಶಿಕ್ಷಣವನ್ನು ಪಡೆಯಲಿಚ್ಛಿಸುವ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವಾಗಲಿದೆ. 2018-19ರ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪಾಪ್ಯುಲರ್ ಫ್ರಂಟ್ ಉನ್ನತ ಶಿಕ್ಷಣಕ್ಕಾಗಿನ ತನ್ನ ಈ ರಾಷ್ಟ್ರೀಯ ಸ್ಕಾಲರ್‌ಶಿಪ್ ಯೋಜನೆಯನ್ನು ಸತತ 8 ವರ್ಷಗಳಿಂದ ಕಾರ್ಯಗತಗೊಳಿಸುತ್ತಿದೆ.

Pages

Subscribe to ಪ್ರಮುಖ ಸುದ್ದಿ