ಪ್ರಮುಖ ಸುದ್ದಿ

ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳ ಏಕಕಾಲದ ಚುನಾವಣೆಯು ಅಧಿಕಾರಗಳ ಹೆಚ್ಚು ಕೇಂದ್ರೀಕರಣಕ್ಕೆ ಕಾರಣವಾಗುತ್ತದೆ: ಪಾಪ್ಯುಲರ್ ಫ್ರಂಟ್

Mon, 07/30/2018 - 12:26 -- web editor

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪದ ಬಗ್ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ(ಎನ್‌ಇಸಿ) ಸಭೆಯು ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿದೆ. ಸಭೆಯಲ್ಲಿ ತೆಗೆದುಕೊಂಡ ಒಂದು ನಿರ್ಣಯದಂತೆ, ಒಕ್ಕೂಟ ವ್ಯವಸ್ಥೆಯ ಸ್ಪೂರ್ತಿಗೆ ವಿರುದ್ಧವಾಗಿರುವ ಹೊಸ ವ್ಯವಸ್ಥೆಯು ಅಧಿಕಾರಗಳ ಹೆಚ್ಚಿನ ಕೇಂದ್ರೀಕರಣದೊಂದಿಗೆ ಅಂತಿಮವಾಗಿ ದೇಶವನ್ನು ರಾಷ್ಟ್ರಪತಿ ವ್ಯವಸ್ಥೆಯತ್ತ ಕೊಂಡೊಯ್ಯಲು ದಾರಿ ಮಾಡಿಕೊಡುತ್ತದೆ. ಇದು ಸಾರ್ವಜನಿಕ ಹಣವನ್ನು ಉಳಿಸುತ್ತದೆ ಮತ್ತು ಚುನಾವಣಾ ವ್ಯವಸ್ಥೆಯನ್ನು ಸ್ಥಿರವಾಗಿಸುತ್ತದೆ ಎಂಬಂತಹ ವಾದಗಳು ಸಾರ್ವಜನಿಕರ ಗಮನದಿಂದ ಸನ್ನಿಹಿತ ಅಪಾಯವನ್ನು ಮರೆಮಾಚುವ ಉದ್ದೇಶವನ್ನು ಮಾತ್ರವೇ ಹೊಂದಿದೆ.

ಬಿಜೆಪಿಯ ನಾಲ್ಕು ವರ್ಷದ ಆಡಳಿತ ದೇಶವನ್ನು ಬಡತನಕ್ಕೆ ತಳ್ಳಿದೆ ಮತ್ತು ಭಯಭೀತಿಗೊಳಿಸಿದೆ: ಪಾಪ್ಯುಲರ್ ಫ್ರಂಟ್

Thu, 06/28/2018 - 09:26 -- web editor

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ನಾಲ್ಕು ವರ್ಷಗಳ ಆಡಳಿತವು ಆರ್ಥಿಕತೆ ಹಾಗೂ ಅಭಿವೃದ್ಧಿ ಕ್ಷೇತ್ರಗಳಲ್ಲಿ ಮತ್ತು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದು ದೇಶದ ಆರ್ಥಿಕತೆಯನ್ನು ನಾಮಾವಶೇಷಗೊಳಿಸಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ(ಎನ್‌ಇಸಿ)ಯು ತನ್ನ ನಿರ್ಣಯವೊಂದರಲ್ಲಿ ಅಭಿಪ್ರಾಯಿಸಿದೆ.

ರಿಪಬ್ಲಿಕ್ ಟಿವಿ, ಟೈಮ್ಸ್ ನೌ, ಇಂಡಿಯಾ ಟುಡೆ ಮತ್ತು ಆಜ್‌ತಕ್‌ಗೆ ಎನ್‌ಬಿಎಸ್‌ಎ ಎಚ್ಚರಿಕೆ - ಪಾಪ್ಯುಲರ್ ಫ್ರಂಟ್ ವಿರುದ್ಧದ ಅವಮಾನಕಾರಿ ಸುದ್ದಿ ತೆಗೆದುಹಾಕಲೂ ಆದೇಶ

Fri, 06/08/2018 - 10:20 -- web editor

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವಿರುದ್ಧ ಸುಳ್ಳು ಸುದ್ದಿ ಹರಡುವುದರ ವಿರುದ್ಧ ಸಂಘಟನೆಯು ದಾಖಲಿಸಿದ್ದ ದೂರಿಗೆ ಪ್ರತಿಕ್ರಿಯಿಸಿರುವ ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರ (ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಸ್ಟಾಂಡರ್ಡ್ಸ್ ಅಥಾರಿಟಿ - ಎನ್‌ಬಿಎಸ್‌ಎ)ವು ರಿಪಬ್ಲಿಕ್ ಟಿವಿ, ಟೈಮ್ಸ್ ನೌ, ಇಂಡಿಯಾ ಟುಡೆ ಮತ್ತು ಆಜ್‌ತಕ್‌ನಂತಹ ನ್ಯೂಸ್ ಚಾನೆಲ್‌ಗಳಿಗೆ ಸ್ಪಷ್ಟ ಎಚ್ಚರಿಕೆಯನ್ನು ನೀಡುವ ಮಹತ್ವದ ಆದೇಶವೊಂದನ್ನು ನೀಡಿದೆ.

ಜಾರ್ಖಂಡ್ ನಲ್ಲಿ ನಿಷೇಧ ಹಿಂಪಡೆಯಲು ಪ್ರಗತಿಪರ ಹೋರಾಟಗಾರರ ಒತ್ತಾಯ

Fri, 04/06/2018 - 15:17 -- web editor

ಬೆಂಗಳೂರು: ಜಾರ್ಖಂಡ್ ಸರಕಾರದ ಪಾಪ್ಯುಲರ್ ಫ್ರಂಟ್ ಮೇಲಿನ ನಿಷೇಧವನ್ನು ಹಿಂಪಡೆಯಲು ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ಪ್ರಗತಿಪರ ಹೋರಾಟಗಾರರ ಚರ್ಚಾಕೂಟವನ್ನು ಬೆಂಗಳೂರಿನ ಎಸ್‍ಸಿಎಂ ಹೌಸ್‍ನಲ್ಲಿ ಎಪ್ರಿಲ್ 4ರಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಿಷಯ ಮಂಡನೆ ಮಾಡಿದ ಪಾಪ್ಯುಲರ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್, ಜಾರ್ಖಂಡ್ ಸರಕಾರದ ಸಂಪೂರ್ಣ ಬೆಂಬಲದೊಂದಿಗೆ ಈ ಖನಿಜ ಸಂಪನ್ನ ರಾಜ್ಯವು ಬಹುರಾಷ್ಟ್ರೀಯ ಕಾರ್ಪೊರೇಡ್ ಗಳಿಂದ ದುರ್ಬಳಕೆಗೆ ಒಳಗಾಗಿದೆ. ಅರಣ್ಯ ಪ್ರದೇಶದಿಂದ ಬುಡಕಟ್ಟು ಜನರನ್ನು ಬಲವಂತವಾಗಿ ಸ್ಥಳಾಂತರಿಸಲಾಗಿದೆ. ಮತ್ತು ಸಮಾಜದ ದುರ್ಬಲ ವರ್ಗಗಳ ವಿರುದ್ಧದ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳು ಹಲವು ಬಾರಿ ವರದಿಯಾಗಿದೆ‌ ಎಂದು ಹೇಳಿದರು.

ಮೌಲಾನ ಸಜ್ಜಾದ್ ನೂಮಾನಿಯವರ ವಿರುದ್ಧ ಸುಳ್ಳು ಪ್ರಕರಣ: ದೇಶಾದ್ಯಂತ ಪ್ರತಿಭಟನೆ

Fri, 04/06/2018 - 10:32 -- web editor

ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ ವಕ್ತಾರ ವೌಲಾನ ಸಜ್ಜಾದ್ ನೂಮಾನಿ ವಿರುದ್ಧ ಲಕ್ನೋದ ಹಝ್ರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸುಳ್ಳು ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಭಾರತ್ ಮುಕ್ತಿ ಮೋರ್ಚಾ ಜಂಟಿಯಾಗಿ ದೇಶಾದ್ಯಂತ ಪ್ರತಿಭಟನೆ ನಡೆಸಿತು. ಮಹಿಳೆಯರು ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜಾರ್ಖಂಡ್‌ನಲ್ಲಿ ನಿಷೇಧದ ವಿರುದ್ಧ ಪ್ರಕಟವಾಗುತ್ತಿರುವ ಜನಾಭಿಪ್ರಾಯಗಳು ಪ್ರಶಂಸಾರ್ಹ: ಪಾಪ್ಯುಲರ್ ಫ್ರಂಟ್

Fri, 03/16/2018 - 13:56 -- web editor

ಜಾರ್ಖಂಡ್‌ನಲ್ಲಿ ಬಿಜೆಪಿ ಸರಕಾರವು ಸಂಘಟನೆಯ ಮೇಲೆ ಹೇರಿರುವ ಪ್ರಜಾಪ್ರಭುತ್ವ ವಿರೋಧಿ ನಿಷೇಧದ ವಿರುದ್ಧ ಮೂಡಿಬರುತ್ತಿರುವ ಜನಾಭಿಪ್ರಾಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯು ಸ್ವಾಗತಿಸಿದೆ. ನಿಷೇಧದ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಿದ ಎಲ್ಲಾ ಸಂಘಟನೆಗಳು ಮತ್ತು ನಾಯಕರಿಗೆ ಸಭೆಯು ಕೃತಜ್ಞತೆಯನ್ನು ಸಲ್ಲಿಸಿದೆ. ಮಾನವ ಹಕ್ಕು ಕಾರ್ಯಕರ್ತರು, ಮುಸ್ಲಿಮ್ ಸಂಘಟನೆಗಳು ಮತ್ತು ರಾಜಕೀಯ ನಾಯಕರ ಒಂದು ದೊಡ್ಡ ವಿಭಾಗವು, ಯಾವುದೇ ರೀತಿಯ ಭಿನ್ನಾಭಿಪ್ರಾಯದ ವಿರುದ್ಧ ಸಂಘಪರಿವಾರ ಅಳವಡಿಸಿಕೊಂಡಿರುವ ಅಸಹಿಷ್ಣುತೆ ಮತ್ತು ದಮನಕಾರಿ ತಂತ್ರಗಳನ್ನು ಗುರುತಿಸಿಕೊಂಡಿದೆ ಮತ್ತು ಅವುಗಳು ಪಾಪ್ಯುಲರ್ ಫ್ರಂಟ್‌ಗೆ ತಮ್ಮ ಬೆಂಬಲವನ್ನು ವಿಸ್ತರಿಸಲು ಸಿದ್ಧವಾಗಿರುವುದು ತುಂಬಾ ಆಶಾದಾಯಕವಾಗಿದೆ.

Pages

Subscribe to ಪ್ರಮುಖ ಸುದ್ದಿ