ಪ್ರಮುಖ ಸುದ್ದಿ

ಜಾರ್ಖಂಡ್‌ನಲ್ಲಿ ಪಾಪ್ಯುಲರ್ ಫ್ರಂಟ್ ಮೇಲಿನ ನಿಷೇಧ ಹಿಂಪಡೆಲು ವಿವಿಧ ನಾಯಕರ ಆಗ್ರಹ

Sat, 03/03/2018 - 11:52 -- web editor

ಪಾಪ್ಯುಲರ್ ಫ್ರಂಟ್‌ನ ಚಟುವಟಿಕೆಗಳನ್ನು ನಿಷೇಧಿಸಿ ಜಾರ್ಖಂಡ್ ಸರಕಾರ ಅಧಿಕೃತ ಪ್ರಕಟಣೆಯನ್ನು ಬಿಡುಗಡೆಗೊಳಿಸಿದ ಬೆನ್ನಿಗೆ ಮನೆಗಳ ಮೇಲೆ ದಾಳಿ ನಡೆಸಿ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಈ ಮಧ್ಯೆ ರಾಷ್ಟ್ರೀಯ ಮತ್ತು ರಾಜ್ಯದ ಪ್ರತಿಪರರು ಮತ್ತು ಹೋರಾಟಗಾರರ ಗುಂಪು ನಿಷೇಧವನ್ನು ಅಪ್ರಜಾಸತ್ತಾತ್ಮಕ ಎಂದು ಕರೆದಿದೆ ಮತ್ತು ನಿಷೇಧವನ್ನು ಹಿಂದೆಗೆಯುವಂತೆ ಹೇಳಿಕೆಯಲ್ಲಿ ಒತ್ತಾಯಿಸಿದೆ.

ಜಾರ್ಖಂಡ್‌ನಲ್ಲಿ ಪಾಪ್ಯುಲರ್ ಫ್ರಂಟ್ ನಿಷೇಧದ ವಿರುದ್ಧ ದೇಶಾದ್ಯಂತ ಪ್ರತಿಭಟನೆ; ದೆಹಲಿಯಲ್ಲಿ ಜಾರ್ಖಂಡ್ ಭವನಕ್ಕೆ ಮಾರ್ಚ್

Sun, 02/25/2018 - 16:26 -- web editor

ಜಾರ್ಖಂಡ್‌ನಲ್ಲಿ ಪಾಪ್ಯುಲರ್ ಫ್ರಂಟ್ ನಿಷೇಧದ ವಿರುದ್ಧ ದೇಶಾದ್ಯಂತ ತೀವ್ರ ಪ್ರತಿಭಟನೆ ಮತ್ತು ರ್ಯಾಲಿಗಳು ನಡೆದವು. ವಿವಿಧ ರಾಜ್ಯಗಳಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮಗಳಲ್ಲಿ ಪಾಪ್ಯುಲರ್ ಫ್ರಂಟ್‌ನ ಕಾರ್ಯಕರ್ತರಲ್ಲದೇ, ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು. ಮಣಿಪುರ, ಪಶ್ಚಿಮ ಬಂಗಾಲ, ಬಿಹಾರ, ಅಸ್ಸಾಂ, ಹೊಸದಿಲ್ಲಿ, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಕರ್ನಾಟಕ, ಪಾಂಡಿಚೇರಿ, ತಮಿಳುನಾಡು, ಕೇರಳ ಮೊದಲಾದ ಪ್ರದೇಶದ ನೂರಾರು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಿತು.

ಜಾರ್ಖಂಡ್‌ನಲ್ಲಿ ಪಾಪ್ಯುಲರ್ ಫ್ರಂಟ್ ನಿಷೇಧ: ಕೇಂದ್ರೀಯ ಸೆಕ್ರೇಟರಿಯೇಟ್ ಹೇಳಿಕೆ

Thu, 02/22/2018 - 10:37 -- web editor

ಜಾರ್ಖಂಡ್ ಸರಕಾರವು ಸಿ.ಎಲ್.ಎ. ಕಾಯ್ದೆ 1908ರ ಪರಿಚ್ಛೇದ 16ರ ಪ್ರಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲೆ ನಿಷೇಧವನ್ನು ಹೇರಿದೆ ಎಂಬ ಸುದ್ದಿ ಬಂದಿದೆ. ನಿಷೇಧಕ್ಕೆ ಕಾರಣ ನೀಡಿರುವ ಜಾರ್ಖಂಡ್ ಮುಖ್ಯಮಂತ್ರಿ, ಪಿಎಫ್‌ಐ ಸದಸ್ಯರು ಈಗ ನಿಷ್ಕ್ರಿಯವಾಗಿರುವ ಐಸ್‌ಐಸ್ ಸಂಘಟನೆಯಿಂದ ಪ್ರಭಾವಿತರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯ ಸರಕಾರವು ಸಿರಿಯಾದತ್ತ ತೆರಳಿದ್ದಾರೆನ್ನಲಾಗಿರುವ ಜನರ ಕುರಿತಂತೆ ಕೆಲವು ದೃಢೀಕರಿಸಲಾಗದ ವರದಿಗಳನ್ನು ಉಲ್ಲೇಖಿಸಿರುವುದು ಅಚ್ಚರಿದಾಯಕವಾಗಿದೆ.

ವಿವಿಧ ರಾಜ್ಯಗಳಲ್ಲಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿದ ಪಾಪ್ಯುಲರ್ ಫ್ರಂಟ್

Thu, 02/22/2018 - 10:19 -- web editor

ರಾಷ್ಟ್ರೀಯ ಸಂಘಟನೆಯಾಗಿ ರೂಪುಗೊಂಡ ತನ್ನ 11 ವರ್ಷಾಚರಣೆಯ ಸಂದರ್ಭದಲ್ಲಿ ಫೆಬ್ರವರಿ 17ರಂದು ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ದಿನಾಚರಣೆಯನ್ನು ಆಚರಿಸಲಾಯಿತು. 18 ರಾಜ್ಯಗಳ ವಿವಿಧ ಕಡೆಗಳಲ್ಲಿ ಯುನಿಟಿ ಮಾರ್ಚ್, ಸಾರ್ವಜನಿಕ ಸಮಾವೇಶಗಳು, ಕಾರ್ನರ್ ಮೀಟಿಂಗ್‌ಗಳು ಮತ್ತು ಧ್ವಜಾರೋಹಣದಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಣಿಪುರ, ಅಸ್ಸಾಂ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ದಿಲ್ಲಿ, ಹರ್ಯಾಣ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಗೋವಾ, ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳದಲ್ಲಿ ಸಂಸ್ಥಾಪನಾ ದಿನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಪಾಪ್ಯುಲರ್ ಫ್ರಂಟ್ ಡೇ ಪ್ರಯುಕ್ತ ಸುಳ್ಯದಲ್ಲಿ ಯುನಿಟಿ ಮಾರ್ಚ್ ಹಾಗು ಸಾರ್ವಜನಿಕ ಸಭೆ

Sun, 02/18/2018 - 05:56 -- web editor

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಸ್ಥಾಪನಾ ದಿನಾಚರಣೆ(ಪಾಪ್ಯುಲರ್ ಫ್ರಂಟ್ ಡೇ)ಯ ಪ್ರಯುಕ್ತ ಯುನಿಟಿ ಮಾರ್ಚ್ ಹಾಗು ಸಾರ್ವಜನಿಕ ಸಭೆಯು ಫೆ.17 ರಂದು ಸುಳ್ಯದಲ್ಲಿ ನಡೆಯಿತು.

ಮಹಾ ಯಶಸ್ಸು ಕಂಡ ಪಾಪ್ಯುಲರ್ ಫ್ರಂಟ್ ಜನಸಂಪರ್ಕ ಅಭಿಯಾನ

Wed, 02/14/2018 - 07:31 -- web editor

ಸಾರ್ವಜನಿಕ ಸಂಪರ್ಕ ದಿನ(ಫೆಬ್ರವರಿ, 11)ದಂದು ಯುನಿಟ್ ಮಟ್ಟದಿಂದ ರಾಷ್ಟ್ರೀಯ ಮಟ್ಟದ ವರೆಗಿನ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಾಯಕರು ಮತ್ತು ಕಾರ್ಯಕರ್ತರು ದೇಶಾದ್ಯಂತ ಹಳ್ಳಿ, ನಗರಗಳಲ್ಲಿರುವ ಮನೆಗಳಿಗೆ ಭೇಟಿ ನೀಡುವ ಮೂಲಕ ಜನರನ್ನು ಸಂಪರ್ಕಿಸಿ, ಸಂಘಟನೆಯ ಸಂದೇಶವನ್ನು ಮನವರಿಗೆ ಮಾಡಿಕೊಟ್ಟರು. ವಿವಿಧ ಕ್ಷೇತ್ರಗಳಲ್ಲಿರುವ ಜನರೊಂದಿಗೆ ಸಂವಹನ ನಡೆಸಿದ ಅವರು ಸಂಘಟನೆಯನ್ನು ಪರಿಚಯಿಸಿಕೊಟ್ಟರು.

Pages

Subscribe to ಪ್ರಮುಖ ಸುದ್ದಿ