ಪ್ರಮುಖ ಸುದ್ದಿ

ಗೌರಿ ಹತ್ಯೆ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಲು ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷರ ಮನವಿ

Mon, 09/11/2017 - 11:01 -- web editor

ಬೆಂಗಳೂರಿನ ಹಿರಿಯ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್‌ರನ್ನು ಸೆಪ್ಟಂಬರ್ 5ರಂದು ಹತ್ಯೆ ನಡೆಸಲಾಯಿತು. ಇದು ‘ಅಸಮ್ಮತಿಯನ್ನು ಸಹಿಸಲಾಗುವುದಿಲ್ಲ’ ಎಂದು ಪ್ರತಿಯೋರ್ವ ಭಾರತೀಯನಿಗೂ ನೀಡಿದ ಸ್ಪಷ್ಟ ಸಂದೇಶವಾಗಿದೆ. ಈಕೆ ಸಮಾನ ಮಾದರಿಯಲ್ಲಿ ಹತ್ಯೆಗೈಯ್ಯಲ್ಪಟ್ಟ ಹೋರಾಟಗಾರರಲ್ಲಿ ನಾಲ್ಕನೇಯವರಾಗಿದ್ದಾರೆ.

ಈ ನಾಲ್ವರೂ ವಿಚಾರವಾದಿಗಳಾಗಿದ್ದರು ಮತ್ತು ಹಿಂದುತ್ವ ವಿರೋಧಿ ಲೇಖಕರಾಗಿದ್ದರು. ರಾಷ್ಟ್ರಪಿತನನ್ನು ಕೊಂದವರೇ ಗೌರಿ ಲಂಕೇಶ್‌ರವರ ಹತ್ಯೆಯ ಹಿಂದಿರುವ ಶಕ್ತಿಗಳಾಗಿದ್ದಾರೆ. ಹಿಂದುತ್ವ ನಿಲುವುಗಳ ವಿರುದ್ಧ ಧ್ವನಿ ಎತ್ತುವವರನ್ನು ವೌನವಾಗಿಸಲು ಯಾವುದೇ ಮಟ್ಟಕ್ಕೂ ಇಳಿಯಲು ಸಿದ್ಧರಿದ್ದಾರೆ ಎಂಬುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಗೌರಿ ಲಂಕೇಶ್ ಹತ್ಯೆಗೆ ಪಾಪ್ಯುಲರ್ ಫ್ರಂಟ್ ಚೆಯರ್‌ಮ್ಯಾನ್ ಖಂಡನೆ

Mon, 09/11/2017 - 05:57 -- web editor

ಹೊಸದಿಲ್ಲಿ: ಅನುಭವಿ ಕನ್ನಡ ಪತ್ರಕತೆರ್ ಮತ್ತು ಗೌರಿ ಲಂಕೇಶ್ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್‌ರವರ ಬರ್ಬರ ಹತ್ಯೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್‌ಮ್ಯಾನ್ ಇ.ಅಬೂಬಕರ್ ತೀವ್ರವಾಗಿ ಖಂಡಿಸಿದ್ದಾರೆ. ಪ್ರಾಮಾಣಿಕ ಮತ್ತು ದಿಟ್ಟ ಮಹಿಳಾ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿಯಾಗಿದ್ದ ಗೌರಿ ಲಂಕೇಶ್ ಕೋಮುವಾದಿ ಫ್ಯಾಶಿಸ್ಟ್ ಏಜೆಂಟರ ಗುಂಡೇಟಿಗೆ ಬಲಿಯಾಗಿರುವುದು ಆಘಾತಕಾರಿ ಮತ್ತು ತೀರಾ ದುಃಖದ ವಿಷಯವಾಗಿದೆ. ಹಂತಕರು ಮತ್ತು ತೆರೆಮರೆಯ ರೂವಾರಿಗಳು ತಮ್ಮ ವಿರೋಧಿಗಳನ್ನು ಬೆದರಿಸುವ ಮೂಲಕ ಅವರನ್ನು ಮೌನಗೊಳಿಸಲು ಬಯಸಿದ್ದರು. ಆದರೆ ಅವರು ಇದರಲ್ಲಿ ವಿಫಲರಾಗಿದ್ದಾರೆ.

ಇದು ನ್ಯಾಯ ಮತ್ತು ಸತ್ಯದ ದೊಡ್ಡ ಉದ್ದೇಶಕ್ಕಾಗಿ ಒಂದಾಗಲು ಮಹತ್ವದ ಸಮಯ: ಮುಹಮ್ಮದ್ ಸಾಕಿಬ್

Fri, 09/08/2017 - 06:54 -- web editor

ಆಕೆಯ ಅಸಾಮಾನ್ಯ ಜೀವನವು ಕಠಿಣ ಪರಿಶ್ರಮ ಮತ್ತು ನಿಸ್ವಾರ್ಥ ತ್ಯಾಗದೊಂದಿಗೆ ತುಂಬಿಕೊಂಡಿತ್ತು. ಹೌದು, ನನ್ನಂತಹ ಹಲವು ಕಾರ್ಯಕರ್ತರಿಗೆ ಆಕೆ ಪ್ರೇರಣೆಯಾಗಿದ್ದಾರೆ.

ಆಕೆಯು ಹೊಂದಿದ್ದ ಸೈದ್ಧಾಂತಿಕ ನಿಲುವುಗಳ ಕಾರಣದಿಂದಲೇ ಆಕೆ ಹೇಡಿಗಳ ಗುಂಡೇಟು ಎದುರಿಸುವಂತಾಯಿತು. ನಾವು ತಿಳಿದಂತೆ ಆಕೆಯ ಹತ್ಯೆಯು ಮೊದಲಲ್ಲ, ಯಾಕೆಂದರೆ, ದ್ವೇಷದ ಗುಂಡುಗಳು ಹಲವು ಮಹಾನ್ ಹೋರಾಟಗಾರರನ್ನು ಕೊಂದು ಹಾಕಿವೆ.

ದುಷ್ಟಶಕ್ತಿಗಳ ವಿರುದ್ಧ ಹೋರಾಟವೇ ಈದ್ ಉಲ್ ಹಜ್‌ನ ಸ್ಫೂರ್ತಿ

Thu, 08/31/2017 - 11:06 -- web editor

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್‌ಮ್ಯಾನ್ ಇ.ಅಬೂಬಕರ್'ರಿಂದ ಈದ್ ಸಂದೇಶ

ಪಾಪ್ಯುಲರ್ ಫ್ರಂಟ್‌ನ ರಕ್ಷಣಾ ಮತ್ತು ಪರಿಹಾರ ಸ್ವಯಂಸೇವಕರ ತಂಡ ಚೆನ್ನೆೃಯಲ್ಲಿ ಉದ್ಘಾಟನೆ

Tue, 08/29/2017 - 09:45 -- web editor

ಚೆನ್ನೈ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಕ್ಷಣಾ ಮತ್ತು ಪರಿಹಾರ ಸ್ವಯಂಸೇವಕರ ತಂಡವನ್ನು ಆಗಸ್ಟ್ 27, 2017ರಂದು ಮದ್ರಾಸ್ ವಿಶ್ವವಿದ್ಯಾನಿಲಯದ ಸೆಂಟಿನರಿ ಆಡಿಟೋರಿಯಮ್‌ನಲ್ಲಿ ಉದ್ಘಾಟಿಸಲಾಯಿತು.

ರಕ್ಷಣಾ ಮತ್ತು ಪರಿಹಾರ ಸ್ವಯಂಸೇವಕರ ತಂಡವನ್ನು ಉದ್ಘಾಟಿಸಿ ಮುಖ್ಯ ಭಾಷಣ ಮಾತನಾಡಿದ ಪಾಪ್ಯುಲರ್ ಫ್ರಂಟ್ ಚೆಯರ್‌ಮೆನ್ ಇ.ಅಬೂಬಕರ್, ಪ್ರಾಕತಿಕ ವಿಕೋಪ ಅಥವಾ ಸಾಂಕ್ರಾಮಿಕ ರೋಗದ ಸಂದರ್ಭದ ಅನಿರೀಕ್ಷಿತ ಮತ್ತು ನಿರ್ಣಾಯಕ ಪರಿಸ್ಥಿತಿಯಲ್ಲಿ ಪಾಪ್ಯುಲರ್ ಫ್ರಂಟ್‌ನ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಮತ್ತು ಮತಭೇದವನ್ನು ಮರೆತು ಸಮಾಜದ ಎಲ್ಲಾ ವಿಭಾಗಗಳ ಸಂತ್ರಸ್ತರಿಗೆ ತ್ವರಿತಗತಿಯಲ್ಲಿ ಸಹಾಯ ಮಾಡಲು ಇದು ಸಹಕಾರಿಯಾಗಿದೆ ಎಂದರು.

ಪಾಪ್ಯುಲರ್ ಫ್ರಂಟ್ ಚಾಮರಾಜನಗರ ಜಿಲ್ಲಾಧ್ಯಕ್ಷ ಖಲೀಲ್ ಉಲ್ಲಾರವರ ಬಂಧನ ರಾಜಕೀಯ ಪ್ರೇರಿತ: ಪಾಪ್ಯುಲರ್ ಫ್ರಂಟ್

Fri, 08/18/2017 - 08:36 -- web editor

ಚಾಮರಾಜನಗರ: ಇದೇ ಕಳೆದ ಜುಲೈ 4ರಂದು ಮಂಗಳೂರಿನ ಬಿ.ಸಿ.ರೋಡಿನಲ್ಲಿ ನಡೆದ ಶರತ್ ಮಡಿವಾಳರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಚಾಮರಾಜನಗರ ಜಿಲ್ಲಾಧ್ಯಕ್ಷ ಖಲೀಲುಲ್ಲಾರವರ ಬಂಧನ ಖಂಡನೀಯ ಮತ್ತು ಈ ಬಂಧನವು ರಾಜಕೀಯ ಪ್ರೇರಿತವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಹೇಳಿದ್ದಾರೆ.

Pages

Subscribe to ಪ್ರಮುಖ ಸುದ್ದಿ