ಪ್ರಮುಖ ಸುದ್ದಿ

ನಮ್ಮ ದೇಶವನ್ನಾಳುತ್ತಿರುವ ಜನರಿಗಿಂತಲೂ ನಮ್ಮ ಗಣರಾಜ್ಯವು ಬಲಿಷ್ಠವಾಗಿದೆ: ಪ್ರೊಫೆಸರ್ ಪಿ.ಕೋಯ

Thu, 08/17/2017 - 10:40 -- web editor

ಹೊಸದಿಲ್ಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ಸ್ವಾತಂತ್ರೋತ್ಸವ ಆಚರಣೆಯನ್ನು ಹೊಸದಿಲ್ಲಿಯ ಮುಖ್ಯ ಕಾರ್ಯಾಲಯದಲ್ಲಿ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ.ಪಿ.ಕೋಯ, ಆತ್ಮೀಯ ಮಿತ್ರರೇ ಸ್ವಾತಂತ್ರದ 71ನೇ ವರ್ಷಾಚರಣೆ ಆಚರಿಸುತ್ತಿರುವ ಈ ಅದ್ಭುತ ಕ್ಷಣವು ನಿಜಕ್ಕೂ ಸಂತೋಷ ಮತ್ತು ಉತ್ಸಾಹದಾಯಕವಾಗಿದೆ ಎಂದರು.

ಪಾಪ್ಯುಲರ್ ಫ್ರಂಟ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Wed, 08/16/2017 - 11:28 -- web editor

ಬೆಂಗಳೂರು: 71ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ಬೆಂಗಳೂರಿನ ಅಮನ್ ಹೌಸ್‌ನಲ್ಲಿ ಆಯೋಜಿಸಲಾಗಿತ್ತು.

ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷರಾದ ಮುಹಮ್ಮದ್ ಶಾಕೀಬ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯದರ್ಶಿಗಳಾದ ಮಜೀದ್ ತುಂಬೆ, ಅಬ್ದುರ್ರಝಾಕ್ ಕೆಮ್ಮಾರ, ರಾಜ್ಯ ಸಮಿತಿ ಸದಸ್ಯರಾದ ಶಾಫಿ ಬೆಳ್ಳಾರೆ, ಮುಹಮ್ಮದ್ ವಳವೂರು ಮೊದಲಾದವರು ಉಪಸ್ಥಿತರಿದ್ದರು.

ವಿವೇಕ ಮತ್ತು ಧೈರ್ಯದಿಂದ ಅಡೆತಡೆಗಳನ್ನು ಎದುರಿಸಿ ನ್ಯಾಯಕ್ಕಾಗಿ ಎದ್ದೇಳಿರಿ: ಮೌಲಾನ ಖಲೀಲುರ್ರಹ್ಮಾನ್ ಸಜ್ಜಾದ್ ನುಮಾನಿ

Sat, 08/12/2017 - 11:18 -- web editor

ಹೊಸದಿಲ್ಲಿ: ದೇಶದಲ್ಲಿ ಭಯ ಮತ್ತು ಅಭದ್ರತೆ ನೆಲೆಗೊಳ್ಳುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಮುಸ್ಲಿಮ್ ಸಮುದಾಯವು ವಿವೇಚನೆ ಮತ್ತು ಧೈರ್ಯದಿಂದ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಳ್ಳಬೇಕು ಎಂದು ಪ್ರಭಾವೀ ವಿದ್ವಾಂಸ, ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ನ ಕಾರ್ಯಕಾರಿ ಸಮಿತಿಯ ಸದಸ್ಯ ಮೌಲಾನ ಖಲೀಲುರ್ರಹ್ಮಾನ್ ಸಜ್ಜಾದ್ ನುಮಾನಿ ಕರೆ ನೀಡಿದ್ದಾರೆ.

ಅವರು ಹೊಸದಿಲ್ಲಿಯಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಧಾನ ಕಚೇರಿಯಲ್ಲಿ ನಡೆಯುವ ಮಾಸಿಕ ತರಗತಿ( ಪಾಪ್ಯುಲರ್ ಲೆಕ್ಚರ್) ಯಲ್ಲಿ ಉಪನ್ಯಾಸ ನೀಡುತ್ತಿದ್ದರು. "ಇಸ್ಲಾಮಿನ ದೃಷ್ಟಿಕೋನದಲ್ಲಿ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ" ಎಂಬ ವಿಷಯದಡಿ ಆಯೋಜಿಸಲಾದ ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಮಹಿಳೆಯರು ಸೇರಿದಂತೆ ಹಲವು ಮಂದಿ ಆಹ್ವಾನಿತರು ಭಾಗವಹಿಸಿದ್ದರು.

ಗುಂಪು ಹತ್ಯೆ ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿಯಾದ ಪಾಪ್ಯುಲರ್ ಫ್ರಂಟ್ ಚೆಯರ್‍ಮ್ಯಾನ್ ಇ.ಅಬೂಬಕರ್ ನೇತೃತ್ವದ ರಾಷ್ಟ್ರೀಯ ತಂಡ

Fri, 07/28/2017 - 12:40 -- web editor

ತಥಾಕಥಿಕ ಗೋರಕ್ಷಕರ ಅನಿಯಂತ್ರಿತ ಗುಂಪಿನ ವಿವಿಧ ದಾಳಿಗಳಲ್ಲಿ ಹತ್ಯೆಗೀಡಾದ ಮತ್ತು ಗಂಭೀರ ಗಾಯಗೊಂಡ ಜನರ ಕುಟುಂಬಸ್ಥರ ಭೇಟಿಗಾಗಿ ಜಾರ್ಖಂಡ್, ಹರ್ಯಾಣ, ಉತ್ತರ ಪ್ರದೇಶದ ವಿವಿಧ ಪ್ರದೇಶಗಳಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್‍ಮ್ಯಾನ್ ಇ.ಅಬೂಬಕರ್‍ರವರ ನೇತತ್ವದಲ್ಲಿ ರಾಷ್ಟ್ರೀಯ ನಾಯಕರ ತಂಡವು ಪ್ರವಾಸ ಕೈಗೊಂಡಿತು. ಪಾಪ್ಯುಲರ್ ಫ್ರಂಟ್ ಕಾರ್ಯದರ್ಶಿ ಅಬ್ದುಲ್ ವಾಹಿದ್ ಸೇಠ್, ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಈ ತಂಡದಲ್ಲಿದ್ದರು. ಎಲ್ಲಾ ಪ್ರದೇಶಗಳಲ್ಲೂ ಸಂಘಟನೆಯ ಸ್ಥಳೀಯ ಮತ್ತು ಝೋನಲ್ ನಾಯಕರು ತಂಡದ ಜೊತೆಗಿದ್ದರು.

ಪಾಪ್ಯುಲರ್ ಫ್ರಂಟ್‌ನಿಂದ ‘ಉನ್ನತ ಶಿಕ್ಷಣ ಸ್ಕಾಲರ್‌ಶಿಪ್ -2017’ ಘೋಷಣೆ

Fri, 07/21/2017 - 09:38 -- web editor

ಹೊಸದಿಲ್ಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ 2017 ಸ್ಕಾಲರ್‌ಶಿಪ್ ಕಾರ್ಯಕ್ರಮ ವನ್ನು ಘೋಷಿಸಿದೆ. ಈ ಯೋಜನೆಯು ಪಿಯುಸಿ(ಹೈಯರ್ ಸೆಕೆಂಡರಿ) ಪೂರ್ಣಗೊಳಿಸಿ ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುವ ಬಡ ಮತ್ತು ಅರ್ಹ ವಿದ್ಯಾರ್ಥಿಗಳನ್ನು ಬೆಂಬಲಿಸುವ ಸದುದ್ದೇಶವನ್ನು ಹೊಂದಿದೆ. 2017-18ನೇ ಶೈಕ್ಷಣಿಕ ಸಾಲಿನಲ್ಲಿ ತಮ್ಮ ಕೋರ್ಸನ್ನು ಮುಂದುವರಿಸುತ್ತಿರುವ ವಿದ್ಯಾರ್ಥಿಗಳಿಂದ ಈ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಉನ್ನತ ಶಿಕ್ಷಣಕ್ಕಾಗಿರುವ ಈ ರಾಷ್ಟ್ರೀಯ ಸ್ಕಾಲರ್‌ಶಿಪ್ ಯೋಜನೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಸತತ 7ನೇ ವರ್ಷದಲ್ಲಿ ಕಾರ್ಯಗತಗೊಳಿಸುತ್ತಿದೆ.

Pages

Subscribe to ಪ್ರಮುಖ ಸುದ್ದಿ