ಪ್ರಮುಖ ಸುದ್ದಿ

ಕೇರಳದ ನಾರಾತ್ ಪ್ರಕರಣ: ಪಾಪ್ಯುಲರ್ ಫ್ರಂಟ್‍ ವಿರುದ್ಧ ಭಯೋತ್ಪಾದನ ಆರೋಪ ಸಾಧ್ಯವಿಲ್ಲ; ಸುಪ್ರೀಂ ಕೋರ್ಟ್

Thu, 07/20/2017 - 08:21 -- web editor

ಹೊಸದಿಲ್ಲಿ: ಕಣ್ಣೂರಿನ ನಾರಾತ್ ಆಯುಧ ತರಬೇತಿ ಪ್ರಕರಣದಲ್ಲಿ ಭಯೋತ್ಪಾದನೆಯ ಆರೋಪವನ್ನು ಹೊರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟಿನ ನ್ಯಾಯಾಧೀಶರುಗಳಾದ ಜಸ್ಟಿಸ್ ಎ.ಕೆ. ಗೋಯಲ್, ಯು.ಯು. ಲಲಿತ್‍ ಅವರಿದ್ದ ಪೀಠ ತೀರ್ಪು ನೀಡಿದೆ. ನಾರಾತ್ ಪ್ರಕರಣದಲ್ಲಿ ಭಯೋತ್ಪಾದನಾ ಕಲಂ ಮತ್ತು ಧರ್ಮ ವಿದ್ವೇಷ ಕಲಂನ್ನು ರದ್ದುಪಡಿಸಿದ ಕೇರಳ ಹೈಕೋರ್ಟಿನ ತೀರ್ಪನ್ನು ಪ್ರಶ್ನಿಸಿ ಎನ್‍ಐಎ ಸಲ್ಲಿಸಿದ ಅರ್ಜಿಯನ್ನು ತಳ್ಳಿಹಾಕಿದೆ. ಇದು ಮೋದಿ ಸರಕಾರ ಮತ್ತು ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‍ಐಎ)ಗೆ ತಿರುಗೇಟಾಗಿ ಪರಿಣಮಿಸಿದೆ.

ಹತ್ಯೆಯ ರಾಜಕೀಯದ ವಿರುದ್ಧ ಜನರ ಪ್ರತಿರೋಧ ಹಾಗೂ ವಿಶಾಲ ಮೈತ್ರಿಗೆ ಕರೆ ನೀಡಿದ ಪಾಪ್ಯುಲರ್ ಫ್ರಂಟ್ ನಾಯಕರ ಸಭೆ

Thu, 07/13/2017 - 08:14 -- web editor

ಮಲಪ್ಪುರಂ: ಗುಂಪಿನ ಮೂಲಕ ಜನರ ನಿರ್ದಯ ಹತ್ಯೆ ಮತ್ತು ಇತರ ದುರ್ಬಲ ವರ್ಗಗಳ ಮೇಲೆ ಹೆಚ್ಚುತ್ತಿರುವ ದಾಳಿಯ ಘಟನೆಗಳ ವಿರುದ್ಧ ಜನರು ಎಲ್ಲಾ ಪ್ರಜಾತಾಂತ್ರಿಕ ಮತ್ತು ಕಾನೂನು ಪ್ರಕ್ರಿಯೆಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡು ಪ್ರತಿರೋಧ ತೋರಬೇಕೆಂದು ಮಲಪ್ಪುರಂ ಜಿಲ್ಲೆಯ ಮಲಬಾರ್ ಹೌಸ್‌ನಲ್ಲಿ ಜುಲೈ 11ರಂದು ನಡೆದ ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ನಾಯಕರ ಸಭೆಯು ಕರೆ ನೀಡಿದೆ. ತಮ್ಮೆಲ್ಲಾ ಪರಸ್ಪರ ಭೇದಭಾವ ಮತ್ತು ವಿವಾದಗಳನ್ನು ಮರೆತು ವಿವಿಧ ಹಂತಗಳಲ್ಲಿ ವಿಶಾಲ ಮೈತ್ರಿಯನ್ನು ರಚಿಸುವುದು ಕಾಲದ ಅತ್ಯಂತ ದೊಡ್ಡ ಬೇಡಿಕೆಯಾಗಿದೆ ಎಂದು ಕೋಮುವಾದ ಹಾಗೂ ಜಾತೀವಾದದ ಆಕ್ರಮಣಗಳ ಮೊದಲ ಬಲಿಪಶುಗಳಾಗಿರುವ ಮುಸ್ಲಿಮರು ಮತ್ತು ದಲಿತರು ಅಲ್ಲದೇ, ಜಾತ್ಯತೀಯ ನಾಗರಿಕ ಸಮಾಜವನ್ನು ಸಭೆಯು ನೆನಪಿಸಿದೆ.

ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಡಲು ಕರೆ ನೀಡುವ ಮೋದಿ ಮೊದಲು ತನ್ನ ದೇಶದ ಕೇಸರಿ ಭಯೋತ್ಪಾದನೆ ತಡೆಯಲಿ: ಪಾಪ್ಯುಲರ್ ಫ್ರಂಟ್‌

Fri, 06/30/2017 - 11:49 -- web editor

ಜಾರ್ಖಂಡ್: ಗಿರಿಡೀಹ್‌ನಲ್ಲಿ ಸತ್ತ ದನದ ವದಂತಿ ಹಬ್ಬಿಸಿ ಉಸ್ಮಾನ್ ಅನ್ಸಾರಿಗೆ ಮಾರಣಾಂತಿಕವಾಗಿ ಥಳಿಸಿ ಅವರ ಮನೆಯನ್ನು ಸುಟ್ಟು ಹಾಕಲಾಯಿತು, ಜಮ್ಶೆಡ್‌ಪುರ್‌ನಲ್ಲಿ ಮಕ್ಕಳ ಅಪಹರಣದ ವದಂತಿ ಹಬ್ಬಿಸಿ ನಾಲ್ವರು ಮುಸ್ಲಿಮರನ್ನು ಹತ್ಯೆಗಯ್ಯಲಾಯಿತು, ಮಾಂಸದ ಹೆಸರಿನಲ್ಲಿ ಹರಿಯಾಣದ ಹಾಫಿಝ್ ಜುನೈದ್ ಮತ್ತು ಪಶ್ಚಿಮ ಬಂಗಾಳದಲ್ಲಿ ಸಮೀರುದ್ದೀನ್ ಮತ್ತು ನಸೀರ್ ಉಲ್ ಹಖ್‌ರನ್ನು ಹತ್ಯೆಗೈದಿರುವುದು ಕೇಸರಿ ಭಯೋತ್ಪಾದನೆಯ ತಾಜಾ ಉದಾಹರಣೆಗಳಾಗಿವೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಾರ್ಖಂಡ್ ರಾಜ್ಯಾಧ್ಯಕ್ಷ ಅಬ್ದುಲ್ ಕಬೀರ್ ಹೇಳಿದ್ದಾರೆ.

ವಾಣಿಜ್ಯ ಹಿತಾಸಕ್ತಿಯ ನಿಯಂತ್ರಣದಲ್ಲಿ ಮಾಧ್ಯಮಗಳು: ಅನೀಲ್ ಚಮಾಡಿಯಾ

Mon, 05/22/2017 - 07:38 -- web editor

ಹೊಸದಿಲ್ಲಿ: ‘‘ಭಾರತದ ಪ್ರಮುಖ ಮಾಧ್ಯಮಗಳು ವಾಣಿಜ್ಯ ಹಿತಾಸಕ್ತಿಯ ನಿಯಂತ್ರಣದಲ್ಲಿರುವುದರಿಂದ, ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ನಾವು ಅವುಗಳಿಂದ ಯಾವುದೇ ಸಕಾರಾತ್ಮಕ ಪಾತ್ರವನ್ನು ನಿರೀಕ್ಷಿಸುವಂತಿಲ್ಲ.’’ ಖ್ಯಾತ ಅಂಕಣಕಾರ ಹಾಗೂ ಪತ್ರಕರ್ತ ಅನೀಲ್ ಚಮಾಡಿಯಾರವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದಿಲ್ಲಿಯ ತನ್ನ ಮುಖ್ಯ ಕಚೇರಿಯಲ್ಲಿ ‘ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಮಾಧ್ಯಮಗಳ ಪಾತ್ರ’ ಎಂಬ ವಿಷಯದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಪಾಪ್ಯುಲರ್ ಉಪನ್ಯಾಸ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ವ್ಯಕ್ತಪಡಿಸಿದರು.

ಬಾಬಾ ಬುಡನ್‌ಗಿರಿ ವಿವಾದ ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಿ: ಪಾಪ್ಯುಲರ್ ಫ್ರಂಟ್

Fri, 05/19/2017 - 13:19 -- web editor

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸಭೆಯು ಮೇ 14, 15ರಂದು ಬೆಂಗಳೂರಿನ ಡೆಕ್ಕನ್ ಹೌಸ್‌ನಲ್ಲಿ ನಡೆಯಿತು. ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಬಾಬಾಬುಡನ್‌ಗಿರಿ ಪ್ರಕರಣವನ್ನು ಕಳೆದ ಒಂದೂವರೆ ದಶಕಗಳಿಂದ ಸಂಘಪರಿವಾರದ ಶಕ್ತಿಗಳು ವಿವಾದ ಕೇಂದ್ರವನ್ನಾಗಿಸಲು ಪ್ರಯತ್ನಿಸುತ್ತಿವೆ. ವಿವಾದವನ್ನು ಆಲಿಸಿದ ಸುಪ್ರೀಂಕೋರ್ಟ್ ರಾಜ್ಯ ಸರಕಾರ ಮಧ್ಯಸ್ಥಿಕೆ ವಹಿಸಿ ತ್ವರಿತ ಗತಿಗಲ್ಲಿ ವಿವಾದವನ್ನು ಬಗೆಹರಿಸಬೇಕೆಂದು ತೀರ್ಪು ನೀಡಿದೆ. ಆದರೆ ಸುಪ್ರೀಂ ಕೋರ್ಟ್ ರಾಜ್ಯ ಸರಕಾರಕ್ಕೆ ನೀಡಿದ ಗಡುವು ಈಗಾಗಲೇ ಮೀರಿದ್ದು, ಈ ವಿವಾದವನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಬೇಕೆಂದು ರಾಜ್ಯ ಸರಕಾರದೊಂದಿಗೆ ಪಾಪ್ಯುಲರ್ ಫ್ರಂಟ್ ಆಗ್ರಹಿಸಿದೆ.

ಪಾಪ್ಯುಲರ್ ಫ್ರಂಟ್ ಆನ್‌ಲೈನ್ ಸದಸ್ಯತ್ವ ನೋಂದಣಿಗೆ ಚಾಲನೆ

Wed, 05/17/2017 - 05:26 -- web editor

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಆನ್‌ಲೈನ್ ಸದಸ್ಯತ್ವ ನೋಂದಣಿಗೆ ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್‌ರವರು ಬೆಂಗಳೂರಿನಲ್ಲಿ ಚಾಲನೆ ನೀಡಿದರು.

Pages

Subscribe to ಪ್ರಮುಖ ಸುದ್ದಿ