ಪ್ರಮುಖ ಸುದ್ದಿ

ಚಾರ್ಮಾಡಿ ಅಪಘಾತ: ಪರಿಹಾರ ಕಾರ್ಯಾಚರಣೆ ಕುರಿತು ಎಸ್ಪಿಯವರೊಂದಿಗೆ ಮಾತುಕತೆ ನಡೆಸಿದ ಪಾಪ್ಯುಲರ್ ಫ್ರಂಟ್ ನಾಯಕರು

Tue, 05/16/2017 - 17:00 -- web editor

ಬೆಳ್ತಂಗಡಿ: ಖಾಸಗಿ ಬಸ್ಸೊಂದು ಕಮರಿಗೆ ಉರುಳಿಬಿದ್ದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಇಂದು ನಡೆದಿರುವುದು ವರದಿಯಾಗಿದೆ.

ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ಈ ಅಪಘಾತ ಸಂಭವಿಸಿದ್ದು ಕೇರಳ ಮೂಲದ ಕೆ.ಎಲ್. 16 2617 ಎಂಬ ನೋಂದಣಿ ಸಂಖ್ಯೆಯನ್ನು ಹೊಂದಿದೆ. ಬಸ್‌ನಲ್ಲಿ ಸುಮಾರು 40ರಷ್ಟು ಪ್ರಯಾಣಿಕರಿದ್ದು, ಇವರು ಚಿಕ್ಕಮಗಳೂರು ಕಡೆಯಿಂದ ಮಂಗಳೂರಿನತ್ತ ತೆರಳುತ್ತಿದ್ದರೆಂದು ತಿಳಿದುಬಂದಿದೆ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯರು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗುಲ್ಬರ್ಗಾ: ಪೊಲೀಸರ ಕ್ರೌರ್ಯದ ವಿರುದ್ಧ ಬೃಹತ್ ಪ್ರತಿಭಟನಾ ರಾಲಿ

Thu, 02/23/2017 - 04:24 -- web editor

ಗುಲ್ಬರ್ಗಾ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಗುಲ್ಬರ್ಗಾ ಜಿಲ್ಲಾಧ್ಯಕ್ಷ ಮೊಹಮ್ಮದ್ ಮುಹ್ಸಿನ್ ಮತ್ತು ಇತರ ಆರು ಮಂದಿಯ ಮೇಲೆ ಪೊಲೀಸರು ನಡೆಸಿದ ಕ್ರೌರ್ಯದ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಇತರ ಮುಸ್ಲಿಮ್ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನಾ ರಾಲಿಯನ್ನು ಫೆಬ್ರವರಿ 20ರಂದು ಗುಲ್ಬರ್ಗಾದಲ್ಲಿ ಹಮ್ಮಿಕೊಳ್ಳಲಾಗಿತ್ತು.

ದಲಿತರು, ಮುಸಲ್ಮಾನರು ಅಧಿಕಾರ ಪಡೆಯಲಿ: ಭಾಸ್ಕರ ಪ್ರಸಾದ್‌

Tue, 02/21/2017 - 15:59 -- web editor

ಉಪ್ಪಿನಂಗಡಿ: ಶೇಕಡಾ 3ರಷ್ಟು ಸಂಖ್ಯೆಯಲ್ಲಿರುವ ಬ್ರಾಹ್ಮಣರ ಕೈಯಲ್ಲಿ ಈ ದೇಶದ ಆಡಳಿತವಿದ್ದು, ಮುಸಲ್ಮಾನರನ್ನು ಹಾಗೂ ಇಲ್ಲಿನ ಮೂಲ ನಿವಾಸಿಗಳಾದ ದಲಿತರನ್ನು ಇವರು ಎರಡನೇ ದರ್ಜೆಯ ನಾಗರಿಕನ್ನರಾಗಿ ನೋಡುತ್ತಿದ್ದಾರೆ, ಇದು ಕೊನೆಗಾಣಬೇಕು, ದಲಿತರು ಮತ್ತು ಮುಸಲ್ಮಾನರು ಒಂದಾಗಿ ದೇಶದ ಅಧಿಕಾರ ಹಿಡಿದಾಗ ಮಾತ್ರ ನಮಗೆ ವಿಮೋಚನೆ ಸಿಗಲು ಸಾಧ್ಯ ಎಂದು ದಲಿತ-ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಸಂಚಾಲಕ ಬಿ.ಆರ್.ಭಾಸ್ಕರ ಪ್ರಸಾದ್ ಹೇಳಿದ್ದಾರೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಸ್ಥಾಪನಾ ದಿನಾಚರಣೆ ‘ಪಾಪ್ಯುಲರ್ ಫ್ರಂಟ್ ಡೇ’ ಹಾಗೂ ಹತ್ತನೇ ವರ್ಷಾಚರಣೆ ಅಂಗವಾಗಿ ಉಪ್ಪಿನಂಗಡಿಯ ಶಹೀದ್ ಇಕ್ಬಾಲ್ ವೇದಿಕೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

‘‘ಶೋಷಿತ ವರ್ಗಗಳು ಎದುರಿಸುವ ಸಮಸ್ಯೆ, ಸವಾಲು, ಬೆದರಿಕೆಗಳಿಗೆ ಪ್ರತ್ಯುತ್ತರವಾಗಿ ಹುಟ್ಟಿಕೊಂಡ ಸಂಘಟನೆ ಪಾಪ್ಯುಲರ್ ಫ್ರಂಟ್’’

Mon, 02/20/2017 - 05:41 -- web editor

ಪಾಪ್ಯುಲರ್ ಫ್ರಂಟ್ ಡೇ ಪ್ರಯುಕ್ತ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಕೆ.ಎಂ.ಶರೀಫ್‌

ಮಂಗಳೂರು: ಪಾಪ್ಯುಲರ್ ಫ್ರಂಟ್ ಡೇ ಹಾಗೂ 10ನೇ ವರ್ಷಾಚರಣೆಯ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ‘ಯುನಿಟಿ ಮಾರ್ಚ್ ಮತ್ತು ಸಾರ್ವಜನಿಕ ಸಮಾವೇಶ’ವನ್ನು ಫೆಬ್ರವರಿ 17ರಂದು ಮಂಗಳೂರಿನ ನೆಹರೂ ಮೈದಾನದ ಶಹೀದ್ ಮುಸ್ತಫಾ ವೇದಿಕೆಯಲ್ಲಿ ಆಯೋಜಿಸಲಾಗಿತ್ತು.

ಪಾಪ್ಯುಲರ್ ಫ್ರಂಟ್ ಡೇ ಪ್ರಯುಕ್ತ ಉಳ್ಳಾಲದಲ್ಲಿ ಯುನಿಟಿ ಮಾರ್ಚ್: ಅಬ್ದುಲ್ ರಝಾಕ್ ಕೆಮ್ಮಾರ

Wed, 02/15/2017 - 13:54 -- web editor

ಮಂಗಳೂರು: ಸಾಮಾಜಿಕ ರಂಗಗಳಲ್ಲಿ ಕಳೆದ ಒಂದು ದಶಕದಿಂದ ಸಕ್ರಿಯವಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದೀಗ ತನ್ನ 10ನೇ ವರ್ಷಾಚರಣೆಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದು, ಈ ಪ್ರಯುಕ್ತ ಉಳ್ಳಾಲದ ರಾಣಿ ಅಬ್ಬಕ್ಕ ವೃತ್ತದಿಂದ ಯುನಿಟಿ ಮಾರ್ಚ್ ಆರಂಭಗೊಂಡು, ಸಂಜೆ 4 ಗಂಟೆಗೆ ಸಾರ್ವಜನಿಕ ಸಮಾವೇಶವು ನಡೆಯಲಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ ತಿಳಿಸಿದ್ದಾರೆ.

ಅವರು ನಗರದ ವುಡ್‌ಲ್ಯಾಂಡ್ ಹೊಟೇಲ್‌ನಲ್ಲಿ ಫೆ.15ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ನಾವು ಇನ್ನಷ್ಟು ದೂರ ಕ್ರಮಿಸಬೇಕಾಗಿದೆ: ಇ. ಅಬೂಬಕರ್

Mon, 02/06/2017 - 09:40 -- web editor

ಹೊಸದಿಲ್ಲಿ: ಪಾಫ್ಯುಲರ್ ಫ್ರಂಟ್ ಆಫ್ ಇಂಡಿಯಾದ ನೂತನ ರಾಷ್ಟ್ರೀಯ ಸಾರಥಿಗಳಾದ ಚೆಯರ್‌ಮ್ಯಾನ್ ಇ. ಅಬೂಬಕರ್ ಹಾಗೂ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಜಿನ್ನಾರವರಿಗೆ ಪಾಪ್ಯುಲರ್ ಫ್ರಂಟ್ ದಿಲ್ಲಿ ರಾಜ್ಯ ಸಮಿತಿ ವತಿಯಿಂದ ಅಭಿನಂದನಾ ಸಮಾರಂಭವನ್ನು ದಿಲ್ಲಿಯ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಇ. ಅಬೂಬಕರ್, ನಾವು ನಮ್ಮ ದೇಶದ ಇತಿಹಾಸದಲ್ಲಿ ಒಂದು ಮಹತ್ವದ ತಿರುವಿನ ಮೂಲಕ ಸಾಗುತ್ತಿದ್ದೇವೆ. ಕೇವಲ ಮುಸ್ಲಿಮರು ಮಾತ್ರವಲ್ಲದೆ, ಇಡೀ ಭಾರತ ದೇಶವೇ ಅದರ ಅತ್ಯಂತ ವಿನಾಶಕಾರಿ ಸಮಯದೊಂದಿಗೆ ಮುಂದೆ ಚಲಿಸುತ್ತಿದೆ. ಜಗತ್ತಿನ ಅತಿದೊಡ್ಡ ಫ್ಯಾಶಿಸ್ಟ್ ಸಂಘಟನೆಯು ದೇಶದಲ್ಲಿ ತಾನು ಏಕಾಂಗಿ ಎಂಬಂತೆ ಆಡಳಿತ ನಡೆಸುತ್ತಿದೆ. ಮುಸ್ಲಿಮರು ಭಯಪೀಡಿತರಾಗಿದ್ದಾರೆ ಎಂದು ಹೇಳಿದರು.

Pages

Subscribe to ಪ್ರಮುಖ ಸುದ್ದಿ