ಅಂಬೇಡ್ಕರ್ ಜಯಂತಿ: ಎಸ್‌ಡಿಪಿಐಯಿಂದ ಹಣ್ಣು ಹಂಪಲು ವಿತರಣೆ

Wed, 04/29/2015 - 08:06 -- web editor

ಸಿದ್ದಾಪುರ: ಸಂವಿಧಾನ ಶಿಲ್ಪಿಡಾ. ಬಿ.ಆರ್ ಅಂಬೇಡ್ಕರ್ ಅವರ 124ನೇ ಹುಟ್ಟು ಹಬ್ಬದ ಅಂಗವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಸಿದ್ದಾಪುರ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ಈ ಸಂದರ್ಭ ಪಕ್ಷದ ಸಿದ್ದಾಪುರ ಘಟಕ ಅಧ್ಯಕ್ಷ ಹುಸೈನ್, ವೈದ್ಯಾಧಿಕಾರಿ ರಾಘವೇಂದ್ರ, ನೆಲ್ಯಹುದಿಕೇರಿ ಘಟಕದ ಅಧ್ಯಕ್ಷ ಸಂಶೀರ್, ಪಕ್ಷದ ಪ್ರಮುಖರಾದ ಶೌಕತ್ ಅಲಿ, ಅಫ್ಸಲ್, ಮನಾಫ್, ಹಸ್ಸನ್, ಅಶ್ರಫ್ ಸೇರಿದಂತೆ ಮತ್ತಿತರರು ಇದ್ದರು.