ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷರಾಗಿ ಡಾ ಮೆಹಬೂಬ್ ಶರೀಫ್ ಅವಾದ್ ಆಯ್ಕೆ

Wed, 05/06/2015 - 05:48 -- web editor

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯ 2015-18ರ ಸಾಲಿಗೆ ನೂತನ ರಾಜ್ಯಾಧ್ಯಕ್ಷರಾಗಿ ಡಾ ಮೆಹಬೂಬ್ ಶರೀಫ್ ಅವಾದ್ ಆಯ್ಕೆಯಾಗಿದ್ದಾರೆ.

ಎಪ್ರಿಲ್ 30ರಂದು ಪುತ್ತೂರಿನ ಫ್ರೀಡಂ ಹಾಲ್ ನಲ್ಲಿ ನಡೆದ ರಾಜ್ಯ ಪ್ರತಿನಿಧಿಗಳ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಫ್ರೋ.ಶಬ್ಬಿರ್ ಮುಸ್ತಫಾ ಮೈಸೂರು, ದೇವನೂರು ಪುಟ್ಟನಂಜಯ್ಯ ಮೈಸೂರು, ಪ್ರ.ಕಾರ್ಯದರ್ಶಿಯಾಗಿ ಅಬ್ದುಲ್ ಹನ್ನಾನ್ ರಾಮನಗರ, ಅಬ್ದುಲ್ ಲತೀಫ್ ಪುತ್ತೂರು, ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಕಾರ್ಯದರ್ಶಿಯಾಗಿ ಅಕ್ರಂ ಹಸನ್ ಮಂಗಳೂರು, ಅಬ್ದುಲ್ ರಹೀಂ ಪೇಲ್ ಗುಲ್ಬರ್ಗಾ, ಅಫ್ಸರ್ ಕೊಡ್ಲಿಪೇಟೆ, ಅಲ್ಫಾನ್ಸೋ ಫ್ರಾಂಕೋ ಬೆಳ್ತಂಗಡಿ ಹಾಗೂ ಕೋಶಾಧಿಕಾರಿಯಾಗಿ ಶೈಕ್ ಸಿರಾಜ್ ಬೆಂಗಳೂರು ರವರನ್ನು ಆಯ್ಕೆ ಮಾಡಲಾಯಿತು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹೇಮಲತಾ ಬೆಂಗಳೂರು, ಅಬ್ರಾರ್ ಅಹ್ಮದ್ ಚಾಮರಾಜನಗರ, ಜಾವೆದ್ ಅಝಾಂ ಬೆಂಗಳೂರು, ನೂರುಲ್ಲಾ ಬೆಂಗಳೂರು, ಎಂ ಕೂಸಪ್ಪ ಪುತ್ತೂರು, ಅಡ್ವಕೇಟ್ ಮಜೀದ್ ಖಾನ್ ಪುತ್ತೂರು, ಅನ್ವರ್ ಸದಾತ್ ಬಂಟ್ವಾಳ, ಜಲೀಲ್ ಕೃಷ್ಣಾಪುರ, ಶಹೀದ್ ನಾಸಿರ್ ಗುಲ್ಬಾರ್ಗ ಹಾಗೂ ಹನೀಫ್ ಖಾನ್ ಕೊಡಾಜೆ ಆಯ್ಕೆಯಾದರು.

ಚುನಾವಣೆ ಪ್ರಕ್ರಿಯೆಯನ್ನು ರಾಷ್ಟ್ರೀಯ ಸಮಿತಿ ಸದಸ್ಯರಾದ ಇಲ್ಯಾಸ್ ಮಹಮ್ಮದ್ ತುಂಬೆ, ಅಡ್ವಕೇಟ್ ಮುಹಮ್ಮದ್ ಅಶ್ರಫ್, ಎಂ.ಯೂ ಅಬ್ದುಲ್ ಸಲಾಂ ನಡೆಸಿಕೊಟ್ಟರು.