ಎಸ್‌ಡಿಪಿಐ ವತಿಯಿಂದ ‘ಪ್ರಜಾಪ್ರಭುತ್ವ ಮತ್ತು ಪ್ರಜಾಹಿತ ರಾಜ್ಯ’ ಪುಸ್ತಕ ಬಿಡುಗಡೆ

Sat, 05/16/2015 - 11:19 -- web editor

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದ ವತಿಯಿಂದ ‘ಸಾಮಾಜಿಕ ಪ್ರಜಾಪ್ರಭುತ್ವ ಮತ್ತು ಪ್ರಜಾಹಿತ ರಾಜ್ಯ’ ಪುಸ್ತಕ ಬಿಡುಗಡೆ ಮಾಡಲಾಯಿತು.

ಮಿತ್ತೂರಿನಲ್ಲಿ ಎಸ್‌ಡಿಪಿಐ ಪಕ್ಷದ ರಾಜ್ಯ ಮತ್ತು ಜಿಲ್ಲಾ ನಾಯಕರ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎ.ಸಯೀದ್‌ರವರು ಪುಸ್ತಕ ಬಿಡುಗಡೆ ಗೊಳಿಸಿದರು.

ಈ ಸಂದರ್ಭದಲ್ಲಿ ಇಲ್ಯಾಸ್ ಮುಹಮ್ಮದ್ ತುಂಬೆ, ಅಲ್ಫಾನ್ಸೊ ಪ್ರಾಂಕೊ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ರಿಯಾಝ್ ಫರಂಗಿಪೇಟೆ, ಎಂ.ಕೂಸಪ್ಪ, ಮಜೀದ್ ಖಾನ್, ಜಲೀಲ್ ಕೆ., ಅನ್ವರ್ ಸಾದಾತ್ ಮೊದಲಾದವರು ಉಪಸ್ಥಿತರಿದ್ದರು.

ಹಿರಿಯ ಚಿಂತಕ ಇ.ಎಂ.ಅಬ್ದುಲ್ ರಹ್ಮಾನ್ ಪುಸ್ತಕದ ಮೂಲ ಲೇಖಕರಾಗಿದ್ದಾರೆ. ಇದರ ಕನ್ನಡಾನುವಾದವನ್ನು ಇಲ್ಯಾಸ್ ಮುಹಮ್ಮದ್ ತುಂಬೆ ಮತ್ತು ಅಲ್ಫಾನ್ಸೊ ಪ್ರಾಂಕೊ ಮಾಡಿದ್ದಾರೆ.