ಎನ್‌ಡಬ್ಲುಎಫ್ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮ

Sat, 05/16/2015 - 11:37 -- web editor

ಪುತ್ತೂರು: ನ್ಯಾಷನಲ್ ವುಮೆನ್ಸ್ ಫ್ರಂಟ್ ಉಪ್ಪಿನಂಗಡಿ ಡಿವಿಜನ್ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಮೇ13ರಂದು ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್‌ನ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಪೌಝಿಯಾ ಹಾರೂನ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಎಕ್ಸೆಸ್ ಇಂಡಿಯಾದ ರಾಷ್ಟ್ರೀಯ ನಿದೇರ್ಶಕರಾದ ಡಾ.ಸಿ.ಟಿ ಸುಲೈಮಾನ್, ಹ್ಯಾಪಿ ಫ್ಯಾಮಿಲಿ ವಿಷಯದಲ್ಲಿ ಮಾತನಾಡಿದರು. ಕ್ರಿಯೇಟಿವ್ ಫೌಂಡೇಶನ್ ಸದಸ್ಯ ಅನ್ವರ್ ಸಾದಾತ್, ಕುಟುಂಬ ಪ್ರಾಧಾನ್ಯತೆ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಎನ್‌ಡಬ್ಲುಎಫ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ, ಬೆಳ್ತಂಗಡಿ ಜಿಲ್ಲಾಧ್ಯಕ್ಷೆ ರಹ್ಮತ್ ಆತೂರ್, ಸಮಿತಿ ಸದಸ್ಯೆ ಮೈಮೂನ, ಕಾರ್ಯಕ್ರಮದ ನಿರ್ದೇಶಕ ಮುಸ್ತಫಾ ಜಿ.ಎಂ ಉಪಸ್ಥಿತರಿದ್ದರು.