ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾಗಿ ಎ.ಸಯೀದ್ ಪುನರಾಯ್ಕೆ

Wed, 06/03/2015 - 12:09 -- web editor

ಬೆಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಷ್ಟೀಯ ಪ್ರತಿನಿಧಿ ಸಭೆಯು ಕೇರಳದ ಎರ್ನಾಕುಲಂ ಜಿಲ್ಲೆಯ ಆಳುವಾದಲ್ಲಿ ಇತ್ತೀಚೆಗೆ ನಡೆಯಿತು.

ಪ್ರಥಮ ದಿನದಲ್ಲಿ ಕಳೆದ ಎರಡು ವರ್ಷಗಳಲ್ಲಿ ಪಕ್ಷದ ಚಟುವಟಿಕೆಗಳ ಬಗ್ಗೆ ಚರ್ಚಿಸಿ, ಮುಂಬರುವ ದಿನಗಳಲ್ಲಿ ಪಕ್ಷವು ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

ರಾಷ್ಟ್ರೀಯ ಪ್ರತಿನಿಧಿ ಸಭೆಯ ದ್ವಿತೀಯ ದಿನದಂದು ಪಕ್ಷದ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ನಾಯಕರ ಆಯ್ಕೆಯ ಆಂತರಿಕ ಚುನಾವಣೆ ನಡೆದು, ರಾಷ್ಟ್ರೀಯ ಅಧ್ಯಕ್ಷರಾಗಿ ಎ.ಸಯೀದ್ ಪುನರಾಯ್ಕೆಯಾದರು.

ಉಪಾಧ್ಯಕ್ಷರಾಗಿ ಪ್ರ.ನಾಝ್ನೀನ್ ಬೇಗಂ ಬೆಂಗಳೂರು, ಸಾಮ್ ಕುಟ್ಟಿ ಜೇಕಬ್ ಕೇರಳ, ಅಡ್ವೊಕೇಟ್ ಶರಫುದ್ದೀನ್ ಲಕ್ನೋ, ಪ್ರಧಾನ ಕಾರ್ಯದರ್ಶಿಯಾಗಿ ಅಫ್ಸರ್ ಪಾಶ ಬೆಂಗಳೂರು, ಮುಹಮ್ಮದ್ ಶಾಫಿ ರಾಜಸ್ಥಾನ್, ಇಲ್ಯಾಸ್ ಮಹಮ್ಮದ್ ತುಂಬೆ ಮಂಗಳೂರು, ಕಾರ್ಯದರ್ಶಿಯಾಗಿ ಮಜೀದ್ ಫೈಝಿ ಕೇರಳ, ಎಂ.ಕೆ ಫೈಝಿ ಕೇರಳ, ಯಾಸ್ಮೀನ್ ಫಾರೂಕ್ ರಾಜಸ್ಥಾನ್, ರಫೀಕ್ ಜಬ್ಬಾರ್ ಮುಲ್ಲಾ ರಾಯಚೂರು, ಅಬ್ದುಲ್ ವಾರಿಸ್ ಆಂದ್ರ ಪ್ರದೇಶ್, ಹಾಗೂ ಕೋಶಾಧಿಕಾರಿಯಾಗಿ ಶಹಾಬುದ್ದೀನ್ ಪಶ್ಚಿಮ ಬಂಗಾಳರವರು ಆಯ್ಕೆಯಾದರು.

ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ 34 ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಚುನಾವಣಾ ಪ್ರಕ್ರಿಯೆಯು ರಾಷ್ಟ್ರೀಯ ಸಮಿತಿ ಸದಸ್ಯರಾದ ಇ.ಎಂ ಅಬ್ದುಲ್ ರಹ್ಮಾನ್ ನೇತೃತ್ವದಲ್ಲಿ ನಡೆಯಿತು