ಬಿಬಿಎಂಪಿ ಚುನಾವಣೆ: ಎಸ್‌ಡಿಪಿಐ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Wed, 08/19/2015 - 09:11 -- web editor

ಬೆಂಗಳೂರು: ಭ್ರಷ್ಟಾಚಾರ ಮುಕ್ತ ಜನಪರ ಕಾರ್ಪೊರೇಟರ್ ಎಂಬ ಘೋಷಣೆಯೊಂದಿಗೆ ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ 18 ನಾಮಪತ್ರಗಳು ಸಲ್ಲಿಕೆಯಾಗಿವೆ.

ಭಾರೀ ಸಂಖ್ಯೆಯ ಬೆಂಬಲಿಗರೊಂದಿಗೆ ರ್ಯಾಲಿ ನಡೆಸಿ ಮನೋರಾಯನ ಪಾಳ್ಯ ವಾರ್ಡಿನ ಅಭ್ಯರ್ಥಿ ಅಡ್ವಕೇಟ್ ಮುಹಮ್ಮದ್ ತ್ವಾಹಿರ್ ನಾಮಪತ್ರ ಸಲ್ಲಿಸಿದ್ದು, ನಾಮ ಪತ್ರ ಸಲ್ಲಿಕೆ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹೀಂ ಪಟೇಲ್ ಹಾಗೂ ಇನ್ನಿತರ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಕೆ.ಜೆ ಹಳ್ಳಿ ವಾರ್ಡಿನಿಂದ ಪಕ್ಷದ ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಜಾವೆದ್ ಅಝಾಂ ನಾಮಪತ್ರ ಸಲ್ಲಿಸಿದ್ದು, ಈ ಸಂದರ್ಭ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಹಾಗೂ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಉಪಸ್ಥಿತರಿದ್ದರು.

ಥಣಿಸಂದ್ರ ವಾರ್ಡ್ ನಿಂದ ಪಕ್ಷದ ರಾಜ್ಯ ಸಮಿತಿ ಸದಸ್ಯೆ ಹೇಮಲತಾ.ಎ ನಾಮಪತ್ರ ಸಲ್ಲಿಸಿದ್ದಾರೆ.

ಪಾದರಾಯನಪುರ ವಾರ್ಡಿನಿಂದ ಸೆಯ್ಯದ್ ಇರ್ಫಾನ್ ಬಾರಿ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದು, ಈ ಸಂದರ್ಭ ಪಕ್ಷದ ರಾಜ್ಯಾಧ್ಯಕ್ಷ ಡಾ.ಮೆಹಬೂಬ್ ಅವಾದ್ ಶರೀಫ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಪಾಶಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು, ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಜಲೀಲ್ ಕಷ್ಣಾಪುರ, ಎಂ. ಕೂಸಪ್ಪಹಾಗೂ ಇನ್ನಿತರ ಪಕ್ಷದ ನಾಯಕರು ಉಪಸ್ಥಿತರಿದ್ದರು.

ರಾಮಸ್ವಾಮಿ ಪಾಳ್ಯದಿಂದ ಫಾಸಿಯ ಅಬ್ಬಾಸಿಯಾ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆ ಸಂದರ್ಭ ರಾಜ್ಯ ಸಮಿತಿ ಸದಸ್ಯರಾದ ಅಡ್ವಕೇಟ್ ಮಜೀದ್ ಖಾನ್, ಶಹೀದ್ ನಾಸಿರ್ ಗುಲ್ಬರ್ಗಾ ಉಪಸ್ಥಿತರಿದ್ದರು.

ಇನ್ನುಳಿದಂತೆ ರಾಯಪುರಂ, ಸಗಾಯ ಪುರಂ, ಮನೋರಮ ಪಾಳ್ಯ, ಎಸ್.ಕೆ. ಗಾರ್ಡನ್, ಎಚ್ಬಿಆರ್ ಲೇಔಟ್, ಕೆಜೆ ಹಳ್ಳಿ ಮೊದಲಾದ ಕಡೆಗಳಲ್ಲಿ ಎಸ್‌ಡಿಪಿಐ ಸ್ಪರ್ಧಿಸುತ್ತಿದೆ.