ಎಸ್‌ಡಿಪಿಐ ವತಿಯಿಂದ ಸ್ವಾತಂತ್ರ ದಿನಾಚರಣೆ ಅಂಗವಾಗಿ ಹಣ್ಣು ಹಂಪಲು ವಿತರಣೆ

Fri, 08/28/2015 - 09:03 -- web editor

ಮಂಗಳೂರು: ಎಸ್‌ಡಿಪಿಐ ಅಡ್ಡೂರು ವಲಯ ಸಮಿತಿಯ ವತಿಯಿಂದ 69ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮವು ಪಕ್ಷದ ಕಛೇರಿಯ ಮುಂಭಾಗದಲ್ಲಿ ವಲಯಾಧ್ಯಕ್ಷ ಎಂ.ಕೆ.ಮುಸ್ತಫಾ ನೆರವೇರಿಸಿದರು.

ನಂತರ ಕೈಕಂಬದಲ್ಲಿರುವ ಸ್ನೇಹ ಸದನ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಂಜಿಲಕೋಡಿ ಜುಮಾ ಮಸೀದಿ ಅಧ್ಯಕ್ಷ ಹಾಜಿ ಎಂ.ಎಚ್.ಮಯ್ಯದ್ದಿ, ಬಿ.ಜೆ.ಎಂ ಮಸೀದಿಯ ಗೌರವಾಧ್ಯಕ್ಷ ಹಾಜಿ ಎಸ್.ಬಾವುಂಞಿ, ಗ್ರಾಮ ಪಂಚಾಯತ್ ಸದಸ್ಯ ಎಂ.ಕೆ.ರಿಯಾಝ್, ಐಎಫ್ಎಫ್ ಮುಖಂಡ ರಝಾಕ್ ಪಾಂಡೆಲ್, ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಕಾಯದರ್ಶಿ ಅಸ್ತಾರ್ ಅಡ್ಡೂರು, ಅನ್ವರ್ ಗೋಳಿಪಡ್ಪು, ಜಬ್ಬಾರ್, ಇಮ್ತಿಯಾಝ್, ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.