ಎಸ್‌ಡಿಪಿಐಯಿಂದ 69ನೇ ಸ್ವಾತಂತ್ರೋತ್ಸವ ಆಚರಣೆ

Fri, 08/28/2015 - 09:07 -- web editor

ಮಂಗಳೂರು: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿಯ ವತಿಯಿಂದ ಪಕ್ಷದ ಜಿಲ್ಲಾ ಕಛೇರಿಯ ಮುಂಭಾಗದಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆಯವರು ಧ್ವಜಾರೋಹಣಗೈದರು.

ಧ್ವಜಾರೋಹಗೈದು ಮಾತನಾಡಿದ ಅವರು, ನಮ್ಮ ಪೂರ್ವಿಕರು ಬಲಿದಾನಗೈದು ಗಳಿಸಿಕೊಟ್ಟಂತಹ ಸ್ವಾತಂತ್ರವು ಇಂದು ಕೇವಲ ಶ್ರೀಮಂತರ ಹಾಗೂ ರಾಜಕಾರಣಿಗಳ ಪರವಾಗಿದೆ. ದೇಶದಲ್ಲಿ ಬದುಕುವ ತಳ ಸಮುದಾಯದ ಜನರು ಇಂದು ಅಭದ್ರತೆಯಿಂದ ಜೀವಿಸುತ್ತಿದ್ದಾರೆಂದು ಖೇದ ವ್ಯಕ್ತಪಡಿಸಿದರು. ಈ ದೇಶದ ಜನರು ಭಯದಿಂದ ಹಾಗೂ ಹಸಿವಿನಿಂದ ಮುಕ್ತಿ ದೊರೆತರೆ ಮಾತ್ರ ಸ್ವಾತಂತ್ರವು ಅರ್ಥಪೂರ್ಣವಾಗಿರುತ್ತದೆಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಕಾರ್ಯದರ್ಶಿ ಸುಹೈಲ್ ಫಳ್ನೀರ್, ಸದಸ್ಯರಾದ ಇಕ್ಬಾಲ್ ಕಲ್ಲಡ್ಕ, ಹಸನ್ ಅಡ್ಕಲ್, ಮೆಹಫೂಝ್ ಉಪಸ್ಥಿತರಿದ್ದರು.