ಎಸ್‌ಡಿಪಿಐಯಿಂದ ಶ್ರಮದಾನ ನಡೆಸುವ ಮೂಲಕ ವಿನೂತನ ಪ್ರತಿಭಟನೆ

Fri, 08/28/2015 - 09:16 -- web editor

ಬಂಟ್ವಾಳ: ಬಂಟ್ವಾಳ ಪುರಸಭೆಗೆ ಒಳಪಟ್ಟ ಪರ್ಲಿಯಾ ನರ್ಸಿಂಗ್ ಹೋಮ್ನಿಂದ ಮದ್ದಕ್ಕೆ ಹೋಗುವ ರಸ್ತೆ, ಕೈಕಂಬ ಮೀನು ಮಾರುಕಟ್ಟೆಯಿಂದ ಮದ್ದಕ್ಕೆ ಹಾದುಹೋಗುವ ರಸ್ತೆ ಹಾಗೂ ಪರ್ಲಿಯಾ ನರ್ಸಿಂಗ್ ಹೋಮ್ನಿಂದ ಪರ್ಲಿಯಕ್ಕೆ ಹೋಗುವ ಮುಖ್ಯ ರಸ್ತೆಗಳು ಕಳೆದ ಹಲವಾರು ವರ್ಷಗಳಿಂದ ಸಂಪೂರ್ಣವಾಗಿ ಕೆಟ್ಟು ಹೋಗಿದ್ದು ಸಾರ್ವಜನಿಕರಿಗೆ ಸಂಚರಿಸಲು ಅಯೋಗ್ಯವಾಗಿತ್ತು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು ಈ ವಿಚಾರವಾಗಿ ಹಲವಾರು ಬಾರಿ ಪುರಸಭೆಗೆ ಮನವಿ ನೀಡಿದ್ದರೂ ಕೂಡ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. ಈ ನಿಟ್ಟಿನಲ್ಲಿ ವಿನೂತನ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ, ಸಾರ್ವಜನಿಕರೊಡಗೂಡಿ ಈ ಮೂರು ರಸ್ತೆಗಳನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಿತು.

ಈ ಶ್ರಮದಾನದಲ್ಲಿ ಎಸ್‌ಡಿಪಿಐ ಬಂಟ್ವಾಳ ಪುರಸಭಾ ಅಧ್ಯಕ್ಷ ಮುಷ್ತಾಕ್ ತಲಪಾಡಿ, ಅಬ್ದುಲ್ ರಹಿಮಾನ್, ಬಶೀರ್, ಮುಸ್ತಫಾ, ಅಕ್ಬರ್ ಸ್ಟಾರ್ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.