ಅತ್ತಾವರದಲ್ಲಿ ನಡೆದ ಕೃತ್ಯ ಅಮಾನವೀಯ: ಎಸ್‌ಡಿಪಿಐ

Fri, 08/28/2015 - 09:34 -- web editor

ಮಂಗಳೂರು: ಆಗಸ್ಟ್ 24ರಂದು ಸಾಯಂಕಾಲ ಸಹೋದ್ಯೋಗಿ ಜೋಡಿಗಳು ಕೆಲಸ ಮುಗಿಸಿ ಕಾರಿನಲ್ಲಿ ತೆರಳುತ್ತಿದ್ದಾಗ ಯುವಕನನ್ನು ಸಂಘ ಪರಿವಾರ ಮತ್ತು ಬಜರಂಗದಳದ ಗೂಂಡಾಗಳು ಹಲ್ಲೆ ನಡೆಸಿ, ಅರೆ ಬೆತ್ತಲೆಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿರುವುದು ಅಮಾನವೀಯ ಕತ್ಯವಾಗಿರುತ್ತದೆ. ಸಕಾಲದಲ್ಲಿ ಪೊಲೀಸರ ಆಗಮನದಿಂದ ದೊಡ್ಡ ಅನಾಹುತವೊಂದು ತಪ್ಪಿಹೋಗಿದೆ. ಸಂಘಪರಿವಾರದ ಈ ಅಮಾನವೀಯ ಕೃತ್ಯವನ್ನು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿಯು ಖಂಡಿಸುತ್ತದೆ.

ಕರಾವಳಿ ಜಿಲ್ಲೆಯಲ್ಲಿ ನಿರಂತರವಾಗಿ ಇಂತಹ ಕುಕೃತ್ಯಗಳು ನಡೆಯುತ್ತಿದ್ದು, ಇತ್ತೀಚೆಗೆ ಫೋರಂ ಪಿಝಾ ಮಾಲ್ನಲ್ಲಿ ಸೇಲ್ಸ್ ಗರ್ಲ್ನ ಕೈತಾಗಿದ್ದನ್ನೇ ನೆಪಮಾಡಿ ಥಳಿಸಿರುವುದು, ದನ ಸಾಗಾಟದ ನೆಪವೊಡ್ಡಿ ಅಲ್ಲಲ್ಲಿ ಹಲ್ಲೆ ನಡೆಸುವ ಪ್ರಕರಣಗಳು ನಿರಂತರವಾಗಿವೆ. ಈ ಬಗ್ಗೆ ಜಿಲ್ಲಾ ಆಡಳಿತದ ನಿರ್ಲಕ್ಷವು ಎದ್ದು ಕಾಣುತ್ತಿದೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಕೂಡಲೇ ತನ್ನ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕು, ತಪ್ಪಿತಸ್ಥರನ್ನು ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.