ಯಾಕೂಬ್ ಅಫ್ಝಲ್ ಗಲ್ಲು ರಾಜಕೀಯ ಪ್ರೇರಿತ

Fri, 09/04/2015 - 13:54 -- web editor

ನವದೆಹಲಿ: ಸಂಸತ್ ದಾಳಿಯ ಅಪರಾಧಿ ಅಫ್ಜಲ್ ಗುರು ಹಾಗೂ 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್‌ಗೆ ಗಲ್ಲು ಶಿಕ್ಷೆ ರಾಜಕೀಯ ಪ್ರೇರಿತವೇ? ಹೌದು ಎನ್ನುತ್ತಾರೆ ದೆಹಲಿ ಹೈಕೋರ್ಟ್ ನಿವೃತ್ತ ಮುಖ್ಯ ನಾಯಮೂರ್ತಿ ಎ.ಪಿ.ಶಾಹ್.

ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನ್ಯಾ. ಎ. ಪಿ ಶಾಹ್ ಅಫ್ಜಲ್ ಗುರುಗೆ ಗಲ್ಲು ನೀಡಿದ್ದು ನಿರಾಸೆ ತಂದಿತ್ತು ಎಂದು ಹೇಳಿದ್ದಾರೆ. ಯಾಕೂಬ್ ಮೆಮೊನ್‌ಗೆ ಗಲ್ಲು ಶಿಕ್ಷೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮಧ್ಯೆಯೇ ಭಿನ್ನಾಭಿಪ್ರಾಯವಿತ್ತು. ಅದನ್ನು ಮತ್ತೊಂದು ಪೀಠಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಕ್ಷಮಾದಾನ ಅರ್ಜಿ ತಿರಸ್ಕಾರಗೊಂಡ ನಂತರ 14 ದಿನಗಳ ಕಾಲಾವಕಾಶ ನೀಡಬೇಕೆಂಬ ಕಾನೂನನ್ನು ಸಹ ಇಲ್ಲಿ ಪಾಲಿಸಲಾಗಿಲ್ಲ ಎಂದ್ ಶಾಹ್ ಹೇಳಿದ್ದಾರೆ.

ಅಪ್ಝಲ್ ಮತ್ತು ಯಾಕೂಬ್ ಮೆಮೊನ್ ಈ ಎರಡೂ ಪ್ರಕರಣಗಳಲ್ಲಿ ಸರ್ಕಾರ ತುಂಬಾ ಆತುರದ ನಿರ್ಧಾರ ತೆಗೆದುಕೊಂಡಿದೆ. ಇದು ರಾಜಕೀಯ ಪ್ರೇರಿತ ನಿರ್ಧಾರಗಳಾಗಿವೆ ಎಂದು ಕಾನೂನು ಆಯೋಗದ ಮಾಜಿ ಅಧ್ಯಕ್ಷರೂ ಆಗಿರುವ ನ್ಯಾ. ಶಾಹ್ ಅಭಿಪ್ರಾಯಪಟ್ಟಿದ್ದಾರೆ. ಯಾಕೂಬ್ ಮೆಮೊನ್‌ ವಿಷಯದಲ್ಲಿ ಕಾನೂನಿನ ಪ್ರಕ್ರಿಯೆಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದಿರುವ ಶಾಹ್ ಆಗ ನಡೆಯುತ್ತಿರುವ ಅನ್ಯಾಯನಗಳನ್ನು ಕಂಡು ತಾನು ತುಂಬಾ ದುಗುಡಗೊಂಡಿದ್ದೆ ಎಂದು ಹೇಳಿದ್ದಾರೆ.

ಯಾಕೂಬ್ ಮೆಮೊನ್ ಮತ್ತು ಅಪ್ಝಲ್ ಗುರುಗೆ ಗಲ್ಲು ನೀಡಿದ್ದರ ಕುರಿತು ವಿವಿಧ ಗಣ್ಯರು ಮತ್ತು ಸಂಘಟನೆಗಳು ಅಪಸ್ವರ ಎತ್ತಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

http://karavalikarnataka.com/news/fullstory.aspx?story_id=4110&languagei...