ರಾಜ್ಯ ಸರಕಾರದ ತೀರ್ಮಾನಕ್ಕೆ ಇಮಾಮ್ಸ್ ಕೌನ್ಸಿಲ್ ಸ್ವಾಗತ

Thu, 10/22/2015 - 10:48 -- web editor

ಬೆಂಗಳೂರು: ಮೈಸೂರ ಹುಲಿ ಟಿಪ್ಪು ಸುಲ್ತಾನ್‌ರ ಜನ್ಮ ದಿನವಾದ ನವೆಂಬರ್ 10ನ್ನು ಸರಕಾರಿ ರಜಾ ದಿನವನ್ನಾಗಿ ಘೋಷಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರಕಾರದ ಆದೇಶವನ್ನು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕರ್ನಾಟಕ ರಾಜ್ಯ ಸಮಿತಿಯು ಸ್ವಾಗತಿಸಿದೆ.

ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಂದಿಗೆ ರಾಜಿರಹಿತ ಹೋರಾಟ ನಡೆಸಿ, ಯುದ್ಧ ರಣಾಂಗಣದಲ್ಲಿ ವೀರ ಹುತಾತ್ಮರಾದ ಏಕೈಕ ಅರಸ ಎಂಬ ಖ್ಯಾತಿವೆತ್ತ ಮೈಸೂರಿನ ಹುಲಿ ಹಝ್ರತ್ ಟಿಪ್ಪುಸುಲ್ತಾನ್‌ರವರ ಜನ್ಮದಿನವನ್ನು ಸರಕಾರಿ ರಜಾ ದಿನವನ್ನಾಗಿ ಘೋಷಿಸಬೇಕೆಂಬ ಕನ್ನಡಿಗರ ದೀರ್ಘಕಾಲದ ಬೇಡಿಕೆಯನ್ನು ಈ ಮೂಲಕ ಈಡೇರಿಸಿದಂತಾಗಿದೆ ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಮೌಲಾನಾ ಜಾಫರ್ ಸಾದಿಕ್ ಫೈಝಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.