ಆರೆಸ್ಸೆಸ್ ಪ್ರಮುಖ ಭಯೋತ್ಪಾದಕ ಸಂಘಟನೆ: ಮಹಾರಾಷ್ಟ್ರದ ಮಾಜಿ ಪೊಲೀಸ್ ಅಧಿಕಾರಿ

Sat, 11/28/2015 - 12:37 -- web editor

ಕೋಲ್ಕತಾ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಭಾರತದ ನಂಬರ್ ಒಂದು ಭಯೋತ್ಪಾದಕ ಸಂಘಟನೆಯಾಗಿದ್ದು, ದೇಶಾದ್ಯಂತದ 13 ಭಯೋತ್ಪಾದಕ ಪ್ರಕರಣಗಳಲ್ಲಿ ಅದರ ಕಾರ್ಯಕರ್ತರು ದೋಷಾರೋಪಣೆ ಗೊಳಗಾಗಿದ್ದಾರೆ ಎಂದು ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾ ನಿರೀಕ್ಷಕ ಎಸ್.ಎಂ. ಮುಶ್ರಿಫ್ ಗುರುವಾರ ಹೇಳಿದ್ದಾರೆ.

‘‘ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ಕನಿಷ್ಠ 13 ಭಯೋತ್ಪಾದನೆ ಪ್ರಕರಣಗಳಲ್ಲಿ ದೋಷಾರೋಪಪಟ್ಟಿ ಹೊರಿಸಲಾಗಿದೆ. ಈ ಭಯೋತ್ಪಾದಕ ಪ್ರಕರಣಗಳಲ್ಲಿ ಆರ್‌ಡಿಎಕ್ಸ್ ಬಳಸಲಾಗಿದೆ. ಬಜರಂಗ ದಳ ಮುಂತಾದ ಸಂಘಟನೆಗಳನ್ನು ಗಣನೆಗೆ ತೆಗೆದುಕೊಂಡರೆ ಇಂಥ ಪ್ರಕರಣಗಳ ಸಂಖ್ಯೆ 17ಕ್ಕೆ ಏರುತ್ತದೆ’’ ಎಂದು ಕೋಲ್ಕತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಶ್ರಿಫ್ ಹೇಳಿದರು.

‘‘ಆರೆಸ್ಸೆಸ್ ಭಾರತದ ನಂಬರ್ ಒಂದು ಭಯೋತ್ಪಾದಕ ಸಂಘಟನೆ. ಈ ಬಗ್ಗೆ ಸಂಶಯವೇ ಇಲ್ಲ’’ ಎಂದು ಮುಶ್ರಿಫ್ ನುಡಿದರು. 2007ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಮಕ್ಕಾ ಮಸೀದಿ ಬಾಂಬ್ ಸ್ಫೋಟ, 2006 ಮತ್ತು 2008ರಲ್ಲಿ ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ನಡೆದ ಬಾಂಬ್ ಸ್ಫೋಟಗಳು ಮತ್ತು 2007ರ ಸಂಜೋತಾ ಎಕ್ಸ್‌ಪ್ರೆಸ್ ಬಾಂಬ್ ಸ್ಫೋಟ ಅವುಗಳ ಪೈಕಿ ಕೆಲವು ಎಂದರು.

http://vbnewsonline.com/MainNews/204116/