ಮಕ್ಕಳು, ಮಹಿಳೆಯರ ಕಳ್ಳ ಸಾಗಾಣೆ ಜಾಲ ಭೇದಿಸಿದ ಪೊಲೀಸರ ಕಾರ್ಯವೈಖರಿಗೆ ಎನ್‌ಡಬ್ಲುಎಫ್ ಶ್ಲಾಘನೆ

Tue, 02/09/2016 - 06:58 -- web editor

ಬೆಂಗಳೂರು: ಮಕ್ಕಳು ಮತ್ತು ಮಹಿಳೆಯರನ್ನು ವಿದೇಶಕ್ಕೆ ಕಳ್ಳ ಸಾಗಣೆ ಮಾಡುತ್ತಿದ್ದ ಬಹುದೊಡ್ಡ ಜಾಲವನ್ನು ಭೇದಿಸಿರುವ ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರ್ ಮತ್ತು ಅವರ ತಂಡವನ್ನು ನ್ಯಾಷನಲ್ ವಿಮೆನ್ಸ್ ಫ್ರಂಟ್ ಕರ್ನಾಟಕ ಮುಕ್ತಕಂಠದಿಂದ ಶ್ಲಾಘಿಸುತ್ತದೆ ಮತ್ತು ಅವರ ಈ ಕಾರ್ಯವು ನಿಜಕ್ಕೂ ಅಭಿನಂದನಾರ್ಹವಾದದ್ದಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಮಂದಿ ಆರೋಪಿಗಳನ್ನು ಬಂಧಿಸಿರುವುದು ನಿಜಕ್ಕೂ ಸಂತದ ವಿಷಯ. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿರುವ ಈ ಕಾಲದಲ್ಲಿ ಇಂತಹ ಕಾರ್ಯಾಚರಣೆಗಳು ನಡೆಯಬೇಕಾದದ್ದು ಕಾಲದ ಅನಿವಾರ್ಯತೆಯಾಗಿದೆ. ಅಲ್ಲದೇ, ಆರೋಪಿಗಳು ಅಗತ್ಯ ದಾಖಲೆಗಳನ್ನು ನಕಲಿಯಾಗಿ ಸಷ್ಟಿಸುತ್ತಿದ್ದರು ಮತ್ತು ಒಂದು ವರ್ಷದಿಂದ ಈ ಮಕ್ಕಳ ಕಳ್ಳ ಸಾಗಣೆ ನಡೆಯುತ್ತಿತ್ತು ಎಂಬ ಸಂಗತಿಯೂ ಬಹಳ ಆತಂಕಕಾರಿಯಾದದ್ದು. 16 ಮಂದಿಗಳಲ್ಲದೆ, ಈ ಜಾಲದ ಹಿಂದೆ ಕೆಲವೊಂದು ಕಾಣದ ಸಮಾಜಘಾತುಕ ಶಕ್ತಿಗಳು ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಕೂಲಂಕಷ ತನಿಖೆ ನಡೆಸಿ ಇದರ ಹಿಂದಿರುವ ಕಾಣದ ಕೈಗಳನ್ನು ಪತ್ತೆಹಚ್ಚಬೇಕೆಂದು ನ್ಯಾಷನಲ್ ವಿಮೆನ್ಸ್ ಫ್ರಂಟ್ ಈ ಮೂಲಕ ಆಗ್ರಹಿಸುತ್ತದೆ.

ಪ್ರಧಾನ ಕಾರ್ಯದರ್ಶಿ
ಎನ್‌ಡಬ್ಲುಎಫ್
ಕರ್ನಾಟಕ