ಕೋಯಂಬತ್ತೂರಿನಲ್ಲಿ ಮಹಿಳಾ ಜಾಗತಿ ಸಮಾವೇಶದ ಅಂಗವಾಗಿ ವಸ್ತು ಪ್ರದರ್ಶನ

Thu, 12/18/2014 - 12:07 -- web editor

ಕೋಯಂಬತ್ತೂರು: ನ್ಯಾಶನಲ್ ವುಮೆನ್ಸ್ ಫ್ರಂಟ್ ಸಂಘಟಿಸುತ್ತಿರುವ ‘‘ಎದ್ದೇಳಿ’’ ಜಾಗತಿ ಸಮಾವೇಶದ ಅಂಗವಾಗಿ ನವೆಂಬರ್ 15ರಂದು ಎಕ್ಸಿಬಿಶನ್ ಉದ್ಘಾಟಿಸಲಾಯಿತು. ‘‘ಮಹಿಳಾ ಹಕ್ಕುಗಳು ಮತ್ತು ಸಮಸ್ಯೆಗಳು’’ ಎಂಬುದು ಎಕ್ಸಿಬಿಶನ್ ವಿಷಯವಾಗಿತ್ತು. ಎಕ್ಸಿಬಿಶನ್‌ನನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತಮಿಳುನಾಡು ರಾಜ್ಯಾಧ್ಯಕ್ಷ ಎ.ಎಸ್.ಇಸ್ಮಾಯೀಲ್ ಉದ್ಘಾಟಿಸಿದರು.

ನ್ಯಾಶನಲ್ ವುಮೆನ್ಸ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷೆ ಶಾಹಿದಾ ಅಸ್ಲಂ, ರಾಜ್ಯಾಧ್ಯಕ್ಷೆ ರಝಿಯಾ ಬಾನು, ರಾಜ್ಯ ಉಪಾಧ್ಯಕ್ಷೆ ಹಬೀಬ್ ನಿಸಾ, ಸಮಾವೇಶದ ಪ್ರಧಾನ ಸಂಚಾಲಕಿ ಎ.ಶಿಫಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಕ್ಸಿಬಿಶನನ್ನು ಹಲವು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಮೊದಲ ವಿಭಾಗದಲ್ಲಿ ಹಲವು ಪ್ರಮುಖ ಮಹಿಳಾ ಸಾಧಕಿಯರು ಮತ್ತು ಹೋರಾಟಗಾರ್ತಿಯರನ್ನು ಪ್ರದರ್ಶಿಸುತ್ತದೆ. ಈ ಧೈರ್ಯಶಾಲಿ ಮಹಿಳಾ ವ್ಯಕ್ತಿತ್ವಗಳ ಹೋರಾಟವನ್ನು ಪ್ರೇಕ್ಷಕರಿಗೆ ವಿವರಿಸಲಾಗುತ್ತದೆ.

ಎರಡನೆ ವಿಭಾಗವು ಭಾರತದ ಸ್ವಾತಂತ್ರ ಹೋರಾಟದಲ್ಲಿ ಮಹಿಳೆಯರ ಕೊಡುಗೆಯನ್ನು ತೋರಿಸುತ್ತದೆ. ಈ ಪ್ರದರ್ಶನವು ಸ್ವಾತಂತ್ರ ಹೋರಾಟದಲ್ಲಿ ಮಹಿಳೆಯರ ಕೊಡುಗೆಯನ್ನು ತೋರಿಸುತ್ತದೆ. ಭಾರತೀಯ ಮಹಿಳೆಯರ ಸುತ್ತಲಿರುವ ಹಲವು ಗಂಭೀರ ಸಮಸ್ಯೆಗಳು ಮತ್ತು ಬೆದರಿಕೆಗಳ ಕುರಿತೂ ಎಕ್ಸಿಬಿಶನ್ ಬೆಳಕು ಚೆಲ್ಲುತ್ತದೆ.

ಗಹ ಹಿಂಸೆ, ಅತ್ಯಾಚಾರ, ಕಡಿಮೆ ಪ್ರಾತಿನಿಧ್ಯ, ಸ್ತ್ರೀ ಭ್ರೂಣ ಹತ್ಯೆ, ಮಾನವ ಕಳ್ಳ ಸಾಗಣೆ ಮತ್ತು ಗಲಭೆ ಸಂತ್ರಸ್ತರು ಹೀಗೆ ವಿವಿಧ ದಶ್ಯಗಳನ್ನು ಎಕ್ಸಿಬಿಶನ್‌ನಲ್ಲಿ ವೀಕ್ಷಿಸಬಹುದಾಗಿತ್ತು.