ಶೈಕ್ಷಣಿಕ ಸಬಲೀಕರಣಕ್ಕಾಗಿ ಪಾಪ್ಯುಲರ್ ಫ್ರಂಟ್ನಿಂದ ‘ಸ್ಕೂಲ್ ಚಲೊ’
ದೇಶದಲ್ಲಿ ಮುಸ್ಲಿಮ್ ಸಮುದಾಯವು ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿರುವುದನ್ನು ಕೇಂದ್ರ ಹಾಗೂ ವಿವಿಧ ರಾಜ್ಯ ಸರಕಾರಗಳು ನೇಮಿಸಿದ ಹಲವು ಸಮಿತಿಗಳು ಹಾಗೂ ಆಯೋಗಗಳು ಮತ್ತೆ ಮತ್ತೆ ಪುನರುಚ್ಛರಿಸಿವೆ. ಸಾಮಾಜಿಕ, ರಾಜಕೀಯ, ಆರ್ಥಿಕ ರಂಗಗಳಲ್ಲಿ ಮುಸ್ಲಿಮರ ಹಿಂದುಳಿಯುವಿಕೆಗೆ ಪ್ರಧಾನ ಕಾರಣವಾಗಿ ಎಲ್ಲಾ ಆಯೋಗಗಳೂ ಸೂಚಿಸಿರುವುದು ಶೈಕ್ಷಣಿಕ ಹಿಂದುಳಿಯುವಿಕೆಯಾಗಿದೆ. ಇದನ್ನು ಮನಗಂಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಮುದಾಯವನ್ನು ಶೈಕ್ಷಣಿಕ ಸಬಲೀಕರಣದತ್ತ ಕೊಂಡೊಯ್ಯುವುದಕ್ಕಾಗಿ, ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ಶಿಕ್ಷಣದ ಕುರಿತು ಜಾಗತಿಯುಂಟುಮಾಡುವುದಕ್ಕಾಗಿ ರಾಷ್ಟ್ರಮಟ್ಟದಲ್ಲಿ ಪ್ರತೀ ವರ್ಷ ಸ್ಕೂಲ್ ಚಲೊ ಅಭಿಯಾನವನ್ನು ನಡೆಸುತ್ತಾ ಬಂದಿದೆ.