ಸಾಮಾನ್ಯ ಸುದ್ದಿ

ಇಮಾಮ್ಸ್ ಕೌನ್ಸಿಲ್ ವತಿಯಿಂದ ಪ್ರವಾದಿ ಸಂದೇಶ ಕಾರ್ಯಕ್ರಮ

Fri, 12/29/2017 - 07:00 -- web editor

ಮುಲ್ಕಿ: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ.ಕ.ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಪ್ರವಾದಿ ಸಂದೇಶ ಕಾರ್ಯಕ್ರಮವನ್ನು ಮುಲ್ಕಿ ಸಮೀಪದ ಪಕ್ಷೆಕೆರೆಯಲ್ಲಿ ಆಯೋಜಿಸಲಾಗಿತ್ತು.

ವೇದಿಕೆಯಲ್ಲಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ, ದ.ಕ.ಜಿಲ್ಲಾಧ್ಯಕ್ಷ ರಫೀಕ್ ದಾರಿಮಿ, ಪಾಪ್ಯುಲರ್ ಫ್ರಂಟ್ ರಾಜ್ಯ ಸಮಿತಿ ಸದಸ್ಯರಾದ ಶಾಫಿ ಬೆಳ್ಳಾರೆ, ಅನ್ವರ್ ಸಾದಾತ್, ಇಮ್ತಿಯಾಝ್ ತುಂಬೆ, ಪಕ್ಷಿಕೆರೆ ಬದ್ರಿಯಾ ಜುಮಾ ಮಸ್ಜಿದ್‌ನ ಅಧ್ಯಕ್ಷ ಮುಹಮ್ಮದ್ ನೂರಾನಿಯಾ, ಉಪಾಧ್ಯಕ್ಷ ಮೊದಿನ್ ಬಾವ, ಯಂಗ್‌ಮೆನ್ಸ್ ಅಧ್ಯಕ್ಷ ಶರೀಫ್ ಪಕ್ಷೆಕೆರೆ, ಮೂಸಬ್ಬ, ಪಾಪ್ಯುಲರ್ ಫ್ರಂಟ್ ಮುಲ್ಕಿ ವಲಯ ಕಾರ್ಯದರ್ಶಿ ಸಿದ್ದೀಕ್ ಮುಲ್ಕಿ ಉಪಸ್ಥಿತರಿದ್ದರು.

"ಇಂಡಿಯಾ ಟುಡೆ ಚಾನೆಲ್ ಪ್ರಸಾರ ಮಾಡಿದ ಕಾರ್ಯಕ್ರಮವು ಸಂಪೂರ್ಣ ಕಟ್ಟುಕತೆ"

Mon, 11/06/2017 - 08:43 -- web editor

ನಿರಾಧಾರ ಆರೋಪಗಳ ಬಗ್ಗೆ ಎ.ಎಸ್.ಝೈನಬಾ ಸ್ಪಷ್ಟೀಕರಣ

ಇಂಡಿಯಾ ಟುಡೆ ಚಾನೆಲ್ ಪ್ರಸಾರ ಮಾಡಿದ ಕಾರ್ಯಕ್ರಮವು ಸಂಪೂರ್ಣ ಕಟ್ಟುಕತೆಯಾಗಿದ್ದು, ಮಾಧ್ಯಮದ ಒಂದು ವರ್ಗವು ನನಗೆ ಕೆಟ್ಟ ಹೆಸರು ತರಲು ಆರಂಭಿಸಿದ್ದ ಅಭಿಯಾನದ ಮುಂದುವರಿದ ಭಾಗವಾಗಿದೆ ಎ.ಎಸ್.ಝೈನಬಾ ಸ್ಪಷ್ಟೀಕರಣ ನೀಡಿದ್ದಾರೆ.

ಸಂವಿಧಾನ ಮತ್ತು ರಾಷ್ಟ್ರ ರಕ್ಷಣೆಗಾಗಿ ವಿಶಾಲ ಮೈತ್ರಿಗೆ ಕರೆ ನೀಡಿದ ನ್ಯಾಯ ಮತ್ತು ಶಾಂತಿಗಾಗಿ ರಾಷ್ಟ್ರೀಯ ಸಮಾವೇಶ

Thu, 10/19/2017 - 07:56 -- web editor

ಭಾರತದಾದ್ಯಂತದ ಹೋರಾಟಗಾರರು ಮುಂಬೈಯಲ್ಲಿ ಅಕ್ಟೋಬರ್ 15,16ರಂದು ನಡೆಸಿದ ನ್ಯಾಯ ಮತ್ತು ಶಾಂತಿ ಮೈತ್ರಿಯ ಎರಡು ದಿನಗಳ ರಾಷ್ಟ್ರೀಯ ಸಮಾವೇಶವು, ಬ್ರಾಹ್ಮಣ್ಯ ಫ್ಯಾಶಿಸ್ಟ್ ಪಡೆಗಳ ಹಿಡಿತದಿಂದ ಸಂವಿಧಾನ ಮತ್ತು ರಾಷ್ಟ್ರವನ್ನು ರಕ್ಷಿಸಲು ವಿಶಾಲ ಮೈತ್ರಿಯನ್ನು ನಿರ್ಮಿಸಲು ಕರೆ ನೀಡುವ ಮೂಲಕ ಮುಕ್ತಾಯಗೊಂಡಿತು.

ಅಮೀರೆ ಶರಿಯತ್ ಹಝ್ರತ್ ಮೌಲಾನಾ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಬಾಖ್ವಿ ನಿಧನ

Mon, 09/11/2017 - 05:48 -- web editor

ಬೆಂಗಳೂರು: ಅಮೀರೆ ಶರಿಯತ್ ಹಝ್ರತ್ ಮೌಲಾನಾ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಬಾಖ್ವಿ (80) ಸೆಂಪ್ಟಂಬರ್ 8ರಂದು ನಿಧನರಾದರು. ರಾಜ್ಯದ ಪ್ರಖ್ಯಾತ ಇಸ್ಲಾಮಿ ವಿದ್ವಾಂಸರು, ದೇಶ ವಿದೇಶಗಳಲ್ಲಿ ಚಿರಪರಿಚಿತರೂ ಆದ ಮೌಲಾನ ಅಶ್ರಫ್ ಅಲಿ, ಬೆಂಗಳೂರಿನ ಗೋವಿಂದಪುರದಲ್ಲಿರುವ ಪ್ರತಿಷ್ಠಿತ ಇಸ್ಲಾಮೀ ಶರೀಯತ್ ಕಾಲೇಜ್, ದಾರುಲ್ ಉಲೂಂ ಸಬೀಲುರ್ರಷಾದ್ ಇದರ ಪ್ರಾಂಶುಪಾಲರಾಗಿದ್ದರು.

ಶಾಂತಿಯುತ ಬಕ್ರೀದ್ ಆಚರಣೆಗೆ ಭದ್ರತೆ ಒದಗಿಸಲು ಇಮಾಮ್ಸ್ ಕೌನ್ಸಿಲ್ ಮನವಿ

Tue, 08/29/2017 - 12:54 -- web editor

ಮಂಗಳೂರು: ಮುಸ್ಲಿಮರು ಜಗತ್ತಿನಾದ್ಯಂತ ಆಚರಿಸುವ ಪವಿತ್ರ ಹಬ್ಬವಾದ ಬಕ್ರೀದ್ ಆಚರಣೆಗೆ ಯಾವುದೇ ರೀತಿಯ ತೊಡಕು ಉಂಟಾಗದಂತೆ ಮತ್ತು ಕುರ್ಬಾನಿಯು ಸೂಕ್ತ ವೇಳೆಯಲ್ಲಿ ನಡೆಯುವಂತಾಗಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಭದ್ರತೆ ಒದಗಿಸಬೇಕೆಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ.ಕ.ಜಿಲ್ಲಾ ಸಮಿತಿಯ ನಿಯೋಗವು ದ.ಕ.ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿಯನ್ನು ಸಲ್ಲಿಸಿತು.

‘ಮನೆಯಿಂದ ಹೊರಗೆ ಬನ್ನಿ’: ಜಿಲ್ಲಾದ್ಯಂತ ಯಶಸ್ವಿಯಾಗಿ ನಡೆದ ಮಾನವ ಸರಪಳಿ ಕಾರ್ಯಕ್ರಮ

Tue, 08/29/2017 - 11:39 -- web editor

ಮಂಗಳೂರು: ದೇಶಾದ್ಯಂತ ಮುಸ್ಲಿಮರು, ದಲಿತರು ಮತ್ತು ಹಿಂದುಳಿದ ವರ್ಗಗಳ ಮೇಲೆ ನಡೆಯುತ್ತಿರುವ ಗುಂಪು ಹಿಂಸಾ ಹತ್ಯೆಯನ್ನು ವಿರೋಧಿಸಿ ಆಗಸ್ಟ್ 25ರ ಶುಕ್ರವಾರದಂದು ‘ಮನೆಯಿಂದ ಹೊರಗೆ ಬನ್ನಿ’ ಎಂಬ ಘೋಷಣೆಯೊಂದಿಗೆ ರಾಷ್ಟ್ರಾದ್ಯಂತ ಏಕಕಾಲಕ್ಕೆ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರೀಕ್ಷೆಗೂ ಮಿಕ್ಕಿ ಜನಬೆಂಬಲದೊಂದಿಗೆ ಯಶಸ್ವಿಯಾಗಿ ನಡೆಯಿತು.

ಜಿಲ್ಲಾದ್ಯಂತ ಪ್ರಮುಖ ಮಸೀದಿಗಳ ಮುಂಭಾಗದಲ್ಲಿ, ಪ್ರಮುಖ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಪಟ್ಟಣ, ನಗರ ಪ್ರದೇಶಗಳಲ್ಲಿ ಸಾರ್ವಜನಿಕರೆಲ್ಲರೂ ಒಂದಾಗಿ ಮಾನವ ಸರಪಳಿ ರಚಿಸುವ ಮೂಲಕ ಗುಂಪು ಹಿಂಸಾ ಹತ್ಯೆಯ ವಿರುದ್ಧ ಐಕ್ಯಮತವನ್ನು ಪ್ರದರ್ಶಿಸಲಾಯಿತು.

Pages

Subscribe to ಸಾಮಾನ್ಯ ಸುದ್ದಿ