ಸಾಮಾನ್ಯ ಸುದ್ದಿ

ಸೋನಿಯಾ ಗಾಂಧಿ ಕಾಲೋನಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ

Fri, 08/18/2017 - 09:22 -- web editor

ಗುಲ್ಬರ್ಗಾ: ರಿಹಾಬ್ ಇಂಡಿಯಾ ಫೌಂಡೇಶನ್ ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸುತ್ತಿರುವ ಸೋನಿಯಾ ಗಾಂಧಿ ಕಾಲೋನಿಯಲ್ಲಿ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಸಾಬಿರ್ ಧ್ವಜಾರೋಹಣ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶ್ರಫ್ ಮಾಚಾರ್ ವಹಿಸಿದ್ದರು. ಲಾಲ್ ಅಹ್ಮದ್ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.

ಕ್ಯಾಂಪಸ್ ಫ್ರಂಟ್‌ನ 'ಹೆಲ್ತಿ ಕ್ಯಾಂಪಸ್' ಅಭಿಯಾನಕ್ಕೆ ಚಾಲನೆ

Fri, 06/16/2017 - 12:09 -- web editor

ಮಂಗಳೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಘಟಕದ ವತಿಯಿಂದ ಜೂನ್ 15ರಿಂದ ಜೂನ್ 25ರ ವರೆಗೆ ಹಮ್ಮಿಕೊಂಡಿರುವ ರಾಜ್ಯವ್ಯಾಪಿ ಹೆಲ್ತಿ ಕ್ಯಾಂಪಸ್ ಅಭಿಯಾನದ ಉದ್ಘಾಟನೆಯು ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಕಷ್ಣಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನ ಪರಿಸರದ ಸ್ವಚ್ಛತೆಯ ಬಗ್ಗೆ ಅರಿವನ್ನು ಮೂಡಿಸಿ, ಸಸಿಗಳನ್ನು ನೆಡುವ ಮೂಲಕ ಕ್ಯಾಂಪಸ್ ಫ್ರಂಟ್ ಜಿಲ್ಲಾಧ್ಯಕ್ಷ ಅಥಾವುಲ್ಲಾ ಅಭಿಯಾನಕ್ಕೆ ಚಾಲನೆ ನೀಡಿದರು.

ಕಲ್ಲಡ್ಕ: ಮಹಿಳೆಯರ ಮೇಲೆ ಪೊಲೀಸ್ ದೌರ್ಜನ್ಯ; ಎನ್.ಡಬ್ಲೂ.ಎಫ್. ಖಂಡನೆ

Thu, 06/15/2017 - 12:26 -- web editor

ಬಂಟ್ವಾಳ: ಕಲ್ಲಡ್ಕದಲ್ಲಿ ಇತ್ತೀಚೆಗೆ ನಡೆದ ಯುವಕನೋರ್ವನಿಗೆ ಚೂರಿ ಇರಿತ, ಮಸೀದಿಗೆ ಕಲ್ಲೆಸೆತ ಇನ್ನಿತರ ಅಹಿತಕರ ಘಟನೆಗಳ ನಂತರ ಬಂಟ್ವಾಳ ಪೊಲೀಸರು ಕಲ್ಲಡ್ಕದ ಮಾಣಿಮಜಲು, ಕೆ.ಸಿ.ರೋಡ್ ಮೊದಲಾದ ಕಡೆಗಳಲ್ಲಿ ರಾತ್ರಿ ಹೊತ್ತಿನಲ್ಲಿ ಅಕ್ರಮವಾಗಿ ಹಲವು ಮನೆಗಳಿಗೆ ನುಗ್ಗಿ ಅಮಾಯಕ ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿರುವುದನ್ನು ನ್ಯಾಷನಲ್ ವಿಮೆನ್ಸ್ ಫ್ರಂಟ್ ದ.ಕ.ಜಿಲ್ಲಾ ಸಮಿತಿಯು ಖಂಡಿಸಿದೆ.

ಮಹಿಳಾ ಪೊಲೀಸರಿಲ್ಲದೆ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿರುವ ಪೊಲೀಸರ ಅಮಾನುಷ ಕತ್ಯವು ನಾಗರಿಕ ಸಮಾಜ ಒಪ್ಪುವಂತಹದಲ್ಲ. ಈ ಕೃತ್ಯ ನಡೆಸಿದ ತಪ್ಪಿತಸ್ಥ ಪೊಲೀಸರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರವನ್ನು ಎನ್.ಡಬ್ಲೂ.ಎಫ್ ಒತ್ತಾಯಿಸುತ್ತದೆ.

ಯುನೈಟೆಡ್ ಮುಸ್ಲಿಂ ಫ್ರಂಟ್ ನಾಯಕರಿಂದ ಗೃಹ ಸಚಿವರ ಭೇಟಿ

Mon, 05/22/2017 - 11:34 -- web editor

ಬೆಂಗಳೂರು: ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರನ್ನು ಅವರ ನಿವಾಸದಲ್ಲಿ ಇಂದು ಭೇಟಿ ಮಾಡಿದ ಯುನೈಟೆಡ್ ಮುಸ್ಲಿಂ ಫ್ರಂಟ್ ನ ನಾಯಕರು, ಇತ್ತೀಚೆಗೆ ಮಂಗಳೂರು ಸಿಸಿಬಿ ಪೊಲೀಸರಿಂದ ಹಲ್ಲೆ ಮತ್ತು ದೌರ್ಜನ್ಯಕ್ಕೊಳಗಾದ ಅಹ್ಮದ್ ಖುರೇಷಿ ಪ್ರಕರಣದ ಸಿಐಡಿ ತನಿಖೆಯ ಪ್ರಾಥಮಿಕ ವರದಿಯನ್ನು ಶೀಘ್ರವೇ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಿದರು.

ವಿದ್ಯಾರ್ಥಿ ವೇತನ ವಿಳಂಬದ ವಿರುದ್ಧ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

Mon, 05/15/2017 - 12:36 -- web editor

ಪುತ್ತೂರು: ರಾಷ್ಟ್ರೀಯ ವಿದ್ಯಾರ್ಥಿ ವೇತನ ವಿಳಂಬ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರದ ನಿರ್ಲಕ್ಷ ಧೋರಣೆಯ ವಿರುದ್ಧ ಕ್ಯಾಂಪಸ್ ಫ್ರಂಟ್ ಆಪ್ ಇಂಡಿಯಾ ಪುತ್ತೂರು ತಾಲೂಕು ಸಮಿತಿಯ ವತಿಯಿಂದ ಪುತ್ತೂರಿನ ಗಾಂಧಿ ಕಟ್ಟೆಯ ಬಳಿ ಪ್ರತಿಭಟನೆಯನ್ನು ಮೇ 8ರಂದು ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಸಮಿತಿ ಸದಸ್ಯ ಸಾದಿಕ್ ಜಾರತ್ತಾರು ಮಾತನಾಡಿ, ಅಲ್ಪಸಂಖ್ಯಾತರ ಇಲಾಖೆಯಿಂದ ಸಿಗುವ ವಿದ್ಯಾರ್ಥಿವೇತನವು ಕಳೆದ ಮೂರು ವರ್ಷಗಳಿಂದ ಸಮರ್ಪಕವಾಗಿ ಸಿಗುತ್ತಿಲ್ಲ. ಇದರಿಂದಾಗಿ ಅಲ್ಪಸಂಖ್ಯಾತರ ಬಡ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಭಾರತದಲ್ಲಿ ವಿದ್ಯಾರ್ಥಿಗಳು ಮತ್ತು ರೈತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಸರಕಾರದಿಂದ ಪಡೆಯುವ ಸವಲತ್ತು, ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುವ ಸನ್ನಿವೇಶ ನಿರ್ಮಾಣವಾಗಿದೆ ಎಂದರು.

ಜಲೀಲ್ ಕರೋಪಾಡಿಯವರ ಮನೆಗೆ ಇಮಾಮ್ಸ್ ಕೌನ್ಸಿಲ್ ನಾಯಕರ ಭೇಟಿ

Mon, 05/15/2017 - 10:09 -- web editor

ಬಂಟ್ವಾಳ: ಇತ್ತೀಚಿಗೆ ದುಷ್ಕರ್ಮಿಗಳಿಂದ ಹತರಾದ ಕರೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಲೀಲ್ ಕರೋಪಾಡಿಯವರ ಮನೆಗೆ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ನಾಯಕರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಉಲೆಮಾಗಳು ಜಲೀಲ್ ಕರೋಪಾಡಿಯವರ ತಂದೆ ಉಸ್ಮಾನ್ ಹಾಜಿಯವರೊಂದಿಗೆ ಮಾತುಕತೆ ನಡೆಸಿದರು.

ಈ ವೇಳೆ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಖಾದರ್ ಫೈಝಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ, ರಾಜ್ಯ ಕಾರ್ಯದರ್ಶಿ ರಫೀಕ್ ದಾರಿಮಿ, ದ.ಕ.ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ಲಾ ಮದನಿ ಉಪಸ್ಥಿತರಿದ್ದರು.

Pages

Subscribe to ಸಾಮಾನ್ಯ ಸುದ್ದಿ