ಸಾಮಾನ್ಯ ಸುದ್ದಿ

ಮಹಾರಾಷ್ಟ್ರ: ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಸ್ಲಿಮರಿಗೆ ಮೀಸಲಾತಿ ನಿಷೇಧ: ಎಸ್‌ಡಿಪಿಐ ಖಂಡನೆ

Sat, 03/07/2015 - 06:48 -- web editor

ಬೆಂಗಳೂರು: ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಸ್ಲಿಮರಿಗೆ ಶೇ.5ರಷ್ಟಿದ್ದ ಮೀಸಲಾತಿಯನ್ನು ಮಹಾರಾಷ್ಟ್ರ ಸರಕಾರ ನಿಷೇಧಿಸಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.

ಮುಸ್ಲಿಮರಿಗೆ ಶೇ.5ರಷ್ಟು ಮೀಸಲು ಘೋಷಿಸಿದ್ದ ಹಿಂದಿನ ಸರಕಾರ 2014 ಜುಲೈ 24ರಂದು ಮಂಡಿಸಿದ್ದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಸ್ಲಿಮರಿಗೆ ಶೇ.5ರಷ್ಟು ಮೀಸಲಾತಿಯ ನಿರ್ಣಯವನ್ನು ರದ್ದುಪಡಿಸಿ, ರಾಜ್ಯ ಸರಕಾರ 2015 ಮಾರ್ಚ್ 2ರಂದು ಈ ನಿರ್ಣಯವನ್ನು ಕೈಗೊಂಡಿರುವುದು ಹಿಂದುತ್ವ ಅಜೆಂಡಾದ ಒಂದು ಭಾಗವಾಗಿದೆ ಎಂದು ಸಮಿತಿ ಪ್ರತಿಕ್ರಿಯಿಸಿದೆ.

ಟೀಸ್ತಾ ನೈತಿಕ ಸ್ಥೆೃರ್ಯ ಕುಗ್ಗಿಸುವ ಪ್ರಯತ್ನ: ಎನ್‌ಡಬ್ಲುಎಫ್

Sat, 02/28/2015 - 06:59 -- web editor

ಹೊಸದಿಲ್ಲಿ: ಗುಜರಾತ್ ಗಲಭೆ ಸಂತ್ರಸ್ತರಿಗೆ ನ್ಯಾಯ ಒದಗಿಸುವುದಕ್ಕಾಗಿ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತೆ ಟೀಸ್ತಾ ಸೆಟಲ್ವಾಡ್ ಹಾಗೂ ಅವರ ಕುಟುಂಬದ ವಿರುದ್ಧ ಗುಜರಾತ್ ಸರಕಾರದ ಆರೋಪಗಳು ತೀರಾ ಒಪ್ಪುವಂತದ್ದಲ್ಲ ಎಂದು ನ್ಯಾಶನಲ್ ವಿಮೆನ್ಸ್ ಫ್ರಂಟ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಫರೀದಾ ಹಸನ್ ಹೇಳಿದ್ದಾರೆ.

ಕೋಲ್ಕತಾದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಗಲಭೆ ಸಂತ್ರಸ್ತರಿಗೆ ಸಂಬಂಧಿಸಿದ ನಿಧಿಯ ದುರ್ಬಳಕೆಯ ಆರೋಪ ಹೊರಿಸಿ ಸಾಮಾಜಿಕ ಕಾರ್ಯಕರ್ತೆಯ ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದಕ್ಕಾಗಿ ಯತ್ನಿಸಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲಾ ಪ್ರಜಾಪ್ರಭುತ್ವಪರ ಕಾರ್ಯಕರ್ತರು ತಮ್ಮ ಮೌನ ಮುರಿದು ನ್ಯಾಯದ ಪರ ಧ್ವನಿ ಎತ್ತುವಂತೆ ಅವರು ಕರೆ ನೀಡಿದರು.

ಸಿಂದಗಿ: ಎಸ್‌ಡಿಪಿಐಯಿಂದ ಪ್ರತಿಭಟನಾ ದಿನಾಚರಣೆ

Mon, 02/16/2015 - 10:07 -- web editor

ಸಿಂದಗಿ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ‘‘ಗಾಂಧೀಜಿಯ ಹಂತಕರು-ರಾಷ್ಟ್ರದ ಹಂತಕರು’’ ಎಂಬ ಧ್ಯೇಯವಾಕ್ಯದೊಂದಿಗೆ ಜನವರಿ 30 ರಂದು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ದಿನಾಚರಣೆಯ ಅಂಗವಾಗಿ ಎಸ್‌ಡಿಪಿಐ ಸಿಂದಗಿ ಬಿಜಾಪುರ ಜಿಲ್ಲೆಯ ವತಿಯಿಂದ ಪಟ್ಟಣದ ಗಾಂಧಿ ವತ್ತದಲ್ಲಿ ವೌನಾಚರಣೆ ಮತ್ತು ಬೈಕ್ ರ್ಯಾಲಿಯನ್ನು ನಡೆಸಲಾಯಿತು.

ಕ್ಯಾಂಪಸ್ ಫ್ರಂಟ್‌ನಿಂದ ಇತಿಹಾಸದ ರಕ್ಷಣೆಗಾಗಿ ಕಾಲ್ನಡಿಗೆ ಜಾಥಾ

Mon, 02/16/2015 - 09:53 -- web editor

ಮೈಸೂರು:ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯದ ಪ್ರತಿನಿಧಿ ಸಮಾವೇಶ ಎದ್ದೇಳಿ, ಇತಿಹಾಸದ ರಕ್ಷಣೆಗಾಗಿ ಅಂಗವಾಗಿ ಇತ್ತೀಚೆಗೆ ಕಾಲ್ನಡಿಗೆ ಜಾಥಾ ಹಾಗೂ ಬಹತ್ ಸಾರ್ವಜನಿಕ ಸಭೆಯು ಇತ್ತೀಚೆಗೆ ಮೈಸೂರಿನಲ್ಲಿ ನಡೆಯಿತು. ಲಷ್ಕರ್ ಠಾಣೆಯ ಬಳಿಯ ನೆಹರು ವತ್ತದಿಂದ ಆರಂಭಗೊಂಡ ಕಾಲ್ನಡಿಗೆ ಜಾಥಾ, ಮೆಸ್ಕೋ ಐಟಿಐ ಮೈದಾನದಲ್ಲಿ ಸಮಾಪನಗೊಂಡಿತು. ಬಳಿಕ ಸಾರ್ವಜನಿಕ ಸಭೆಯು ನಡೆಯಿತು.

ಜನ ಸಾಮಾನ್ಯರ ಗೆಲುವು: ಎಸ್‌ಡಿಪಿಐ

Mon, 02/16/2015 - 09:46 -- web editor

ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ)ಯ ಭರ್ಜರಿ ಗೆಲುವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಶ್ಲಾಘಿಸಿದೆ.

ಬಿಜೆಪಿಗೆ ಸೋಲುಣಿಸಿದ್ದಕ್ಕಾಗಿ ಅದರ ನಾಯಕ ಅರವಿಂದ್ ಕೇಜ್ರಿವಾಲ್‌ರಿಗೆ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎ.ಸಯೀದ್ ತನ್ನ ಹೇಳಿಕೆಯೊಂದರಲ್ಲಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಕಳೆದ 9 ತಿಂಗಳಲ್ಲಿ ‘ಚಾಯ್‌ವಾಲಾ’ನಿಂದ ‘ದಸ್ ಲಾಖ್‌ಕಾ ಸೂಟ್‌ವಾಲಾ’ನಾಗಿ ಪರಿವರ್ತನೆಗೊಂಡ ನರೇಂದ್ರ ಮೋದಿಯ ಕುರಿತು ಮಾಧ್ಯಮಗಳ ಅತಿರೇಕದ ಪ್ರಚಾರದಿಂದಾಗಿ ಬಿಜೆಪಿಯು ಉಬ್ಬಿಹೋಗಿತ್ತು ಎಂದು ಅವರು ಹೇಳಿದ್ದಾರೆ.

ಗೋಡ್ಸೆ ಪ್ರತಿಮೆ-ಮಂದಿರ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ: ಇಲ್ಯಾಸ್ ಮುಹಮ್ಮದ್ ತುಂಬೆ

Fri, 02/06/2015 - 13:55 -- web editor

ಎಸ್‌ಡಿಪಿಐಯಿಂದ ಪ್ರತಿಭಟನಾ ದಿನ

ಮಂಗಳೂರು: ದೇಶಕ್ಕೆ ಸ್ವಾತಂತ್ರ ಲಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ, ಸಮಾಜದಲ್ಲಿ ಶಾಂತಿ- ಸೌಹಾರ್ದದ ಕನಸು ಕಂಡ ರಾಷ್ಟ್ರಪಿತ ಮಹಾತ್ಮಾ ಗಾಂೀಜಿ ಯನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆಯ ಪ್ರತಿಮೆ ಮತ್ತು ಮಂದಿರ ಸ್ಥಾಪನೆಗೆ ಜಾತ್ಯತೀತ ತತ್ವದಲ್ಲಿ ನಂಬಿಕೆಯನ್ನಿಟ್ಟಿರುವ ಎಸ್‌ಡಿಪಿಐ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದರು.

‘ಗಾಂೀಜಿಯ ಹಂತಕರು-ರಾಷ್ಟ್ರದ ಹಂತಕರು’ಎಂಬ ಘೋಷಣೆಯೊಂದಿಗೆ ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿ ಜಿಲ್ಲಾಕಾರಿ ಕಚೇರಿ ಮುಂದೆ ಜನವರಿ 30ರಂದು ನಡೆಸಿದ ಪ್ರತಿಭಟನಾ ಸಭೆಯಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

Pages

Subscribe to ಸಾಮಾನ್ಯ ಸುದ್ದಿ