ಸಾಮಾನ್ಯ ಸುದ್ದಿ

ತುಂಬೆ: ಎಸ್‌ಡಿಪಿಐಯಿಂದ ಬಸ್ಸು ನಿಲ್ದಾಣ ನಿರ್ಮಾಣ

Fri, 02/06/2015 - 13:51 -- web editor

ತುಂಬೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆ್ ಇಂಡಿಯಾ ತುಂಬೆ ಗ್ರಾಮ ಸಮಿತಿಯ ವತಿಯಿಂದ ತುಂಬೆಯಲ್ಲಿ ನಿರ್ಮಾಣ ಮಾಡಿರುವ ನೂತನ ಬಸ್ಸು ತಂಗುದಾಣ ಉದ್ಘಾಟನೆ ಹಾಗೂ ತುಂಬೆ ಗ್ರಾಮ ಸಮ್ಮಿಳನ ಕಾರ್ಯಕ್ರಮವು ತುಂಬೆ ಜಂಕ್ಷನ್‌ನಲ್ಲಿ ಜರಗಿತು.

ಎಸ್‌ಡಿಪಿಐಯಿಂದ ಎರಡು ಬಡ ಕುಟುಂಬಗಳಿಗೆ ಮನೆ ಕೊಡುಗೆ

Fri, 02/06/2015 - 13:49 -- web editor

ಕೊಣಾಜೆ: ಎಸ್‌ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರ ಹಾಗೂ ದಾನಿಗಳ ನೆರವಿನಿಂದ ಕಟ್ಟಿದ ಮನೆಯನ್ನು ಕಿನ್ಯ ಗ್ರಾಮದ ಎರಡು ಬಡ ಕುಟುಂಬಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮ ಕಿನ್ಯದ ಬಟ್ಯಡ್ಕದಲ್ಲಿ ನಡೆಯಿತು.

ಎಸ್‌ಡಿಪಿಐ ವತಿಯಿಂದ ಡಾ.ಅಂಬೇಡ್ಕರ್‌ರ 58ನೆ ಮಹಾಪರಿನಿರ್ವಾಣ ದಿನಾಚರಣೆ

Fri, 12/19/2014 - 06:57 -- web editor

ಬೆಂಗಳೂರು: ಎಸ್‌ಡಿಪಿಐ ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ್ ಅವರ 58ನೆ ಮಹಾಪರಿನಿರ್ವಾಣ ದಿನಾಚರಣೆಯನ್ನು ಇತ್ತೀಚೆಗೆ ಚಾಮರಾಜನಗರ ಶ್ರೀಚಾಮರಾಜೇಶ್ವರ ಉದ್ಯಾನವನದ ಎದುರು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ರಾರ್ ಅಹಮದ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕ ಕೆ.ಎಂ.ನಾಗರಾಜು, ನಗರಸಭಾ ಸದಸ್ಯ ಮಹೇಶ್, ಆಲೂರುನಾಗೇಂದ್ರ, ಕುರುಬರ ಸಂಘದ ಗಾಳೀಪುರ ಶಿವಣ್ಣ, ಪಾಪ್ಯುಲರ್ ಫ್ರಂಟ್ ಅಧ್ಯಕ್ಷ ಕಲೀಲ್‌ಉಲ್ಲಾ, ನ್ಯಾಯವಾದಿ ತೌಫೀಕ್ ಅಹಮದ್, ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇರ್ಷಾದ್‌ಅಹಮದ್, ಇಮ್ರಾನ್, ರಫೀಕ್, ಶಫೀಉಲ್ಲಾ ಇತರರು ಉಪಸ್ಥಿತರಿದ್ದರು.

‘‘ಬಾಬರಿ ಮಸೀದಿ ಮತ್ತು ನಮ್ಮ ಹೊಣೆಗಾರಿಕೆ’’ ವಿಚಾರ ಸಂಕಿರಣ

Fri, 12/19/2014 - 06:53 -- web editor

ಉಡುಪಿ: ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಇದರ ವತಿಯಿಂದ ಬಾಬರಿ ಮಸೀದಿ ಮತ್ತು ನಮ್ಮ ಹೊಣೆಗಾರಿಕೆ ವಿಚಾರ ಸಂಕೀರ್ಣ ಇತ್ತೀಚಿಗೆ ಜಾಮಿಯಾ ಮಸೀದಿ ಉಡುಪಿಯಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಜಿಲ್ಲಾಧ್ಯಕ್ಷ ಹಾಗೂ ಶಿರೂರು ಜಾಮಿಯಾ ಮಸ್ಜಿದ್‌ನ ಖತೀಬ್ ವೌಲಾನಾ ಮಹಮ್ಮದ್ ಇಸ್ಮಾಯಿಲ್ ಸಾಹೇಬ್ ನದ್ವಿ ವಹಿಸಿದ್ದರು. ಉಡುಪಿ ತಾಲೂಕು ಅಧ್ಯಕ್ಷ ಮತ್ತು ಇಂದ್ರಾಳಿ ಜಾಮಿಯಾ ಸಮೀದಿಯ ಖತೀಬ್ ವೌಲಾನಾ ಮಸೀಹುಲ್ಲಾ ಸಾಹೇಬ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕ್ಯಾಂಪಸ್ ಫ್ರಂಟ್‌ನಿಂದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ

Fri, 12/19/2014 - 06:49 -- web editor

ಬಜಪೆ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ವಲಯದ ವತಿಯಿಂದ ರಾಷ್ಟ್ರೀಯ ಶಿಕ್ಷಣ ಅಭಿಯಾನದ ಪ್ರಯುಕ್ತ ಅನ್ಸಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಸಪ್ರಶ್ನೆ ಹಾಗೂ ಪ್ರಬಂಧ ಸ್ಪಧೆರ್ಯನ್ನು ಏರ್ಪಡಸಲಾಗಿತ್ತು.

ಸಿಎಫ್‌ಐ ಮಂಗಳೂರು ಜಿಲ್ಲಾ ಸಮಿತಿ ಸದಸ್ಯ ಶಂಸುದ್ದೀನ್, ಡಿವಿಷನ್ ಅಧ್ಯಕ್ಷ ಇರ್ಶಾದ್ ಬಜ್ಪೆ, ಆಕ್ಸೆಸ್ ಇಂಡಿಯಾದ ಸಂಚಾಲಕ ಅಬ್ದುಲ್‌ಖಾದರ್, ಪ್ರಾಂಶುಪಾಲೆ ಜಯಶ್ರೀ ಉಪಸ್ಥಿತರಿದ್ದರು.

ಎಸ್‌ಡಿಪಿಐ ವತಿಯಿಂದ ಸಂಸದ ಸಿ.ಎಸ್.ಪುಟ್ಟರಾಜುರವರಿಗೆ ಸನ್ಮಾನ

Fri, 12/19/2014 - 06:26 -- web editor

ಮಂಡ್ಯ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಡ್ಯ ಜಿಲ್ಲಾ ಸಮಿತಿಯ ವತಿಯಿಂದ ಜೆಡಿಎಸ್ ಲೋಕಸಭಾ ಸದಸ್ಯ ಸಿ.ಎಸ್.ಪುಟ್ಟರಾಜುರವರಿಗೆ ಸನ್ಮಾನ ಕಾರ್ಯಕ್ರಮವನ್ನು ಮಂಡ್ಯದ ಸನಾ ಖಾನ್ ಫಂಕ್ಷನ್ ಹಾಲ್‌ನಲ್ಲಿ ಇತ್ತೀಚಿಗೆ ಆಯೋಜಿಸಲಾಗಿತ್ತು.

ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಮಂಡ್ಯ ಜಿಲ್ಲಾಧ್ಯಕ್ಷ ಮೊಹಮ್ಮದ್ ತಾಹಿರ್, ಪ್ರಧಾನ ಕಾರ್ಯದರ್ಶಿ ಅಸ್ಗರ್ ಅಹ್ಮದ್, ಅಬ್ರಾರ್, ಫಾರೂಕ್ ಮೈಸೂರು ಮತ್ತಿತರ ಜಿಲ್ಲಾ ಮುಖಂಡರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Pages

Subscribe to ಸಾಮಾನ್ಯ ಸುದ್ದಿ