ಸಾಮಾನ್ಯ ಸುದ್ದಿ

ಬಿಜಾಪುರ ಹೆಸರು ಬದಲಾಯಿಸದಿರಲು ಆಗ್ರಹ

Fri, 12/19/2014 - 06:20 -- web editor

ಬಿಜಾಪುರ: ಐತಿಹಾಸಿಕ ಬಿಜಾಪುರ ಜಿಲ್ಲೆಯ ಹೆಸರು ಬದಲಾಯಿಸದಿರುವಂತೆ ಒತ್ತಾಯಿಸಿ ಇತ್ತೀಚಿಗೆ ಎಸ್‌ಡಿಪಿಐ ತಾಲೂಕು ಸಮಿತಿಯ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸರಕಾರಿ ಅಸ್ಪತ್ರೆಯ ಅವ್ಯವಸ್ಥೆ: ಎಸ್ಡಿಪಿಐ ಪ್ರತಿಭಟನೆ

Fri, 12/19/2014 - 06:06 -- web editor

ಉಪ್ಪಿನಂಗಡಿ: ಆರೋಗ್ಯ ಕೇಂದ್ರದ ಅವ್ಯವಸ್ಥೆಯ ವಿರುದ್ಧ ಎಸ್ಡಿಪಿಐ ಉಪ್ಪಿನಂಗಡಿ-ಕಡಬ ವಲಯ ಸಮಿತಿ ವತಿಯಿಂದ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಎಸ್ಡಿಪಿಐ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ನ್ಯಾ.ಅಶ್ರಫ್ ಅಗ್ನಾಡಿ, ಅಬ್ದುಲ್ ರರಝಾಕ್ ಸೀಮಾ, ರಿಯಾಝ್ ಫರಂಗಿಪೇಟೆ, ಎಂ.ಕೂಸಪ್ಪ, ಆನಂದ ಗೌಡ ರಾಮಕುಂಜ, ಶಾಫಿ ಇಬ್ರಾಹಿ ಹಾಸನ, ಅಕ್ಬರ್ ಬೆಳ್ತಂಗಡಿ, ಫಯಾಝ್ ಯು.ಟಿ, ನಿಸಾರ್ ಕುದ್ರಡ್ಕ, ಝಕರಿಯಾ ಮೊದಲಾದವರು ಉಪಸ್ಥಿತರಿದ್ದರು.

ಜಮಲಾಬಾದ್ನಲ್ಲಿ ಟಿಪ್ಪು ಜನ್ಮದಿನಾಚರಣೆ

Fri, 12/19/2014 - 05:57 -- web editor

ಬೆಳ್ತಂಗಡಿ: ಜಮಲಾಬಾದ್ ನಾಗರಿಕ ಸಮಿತಿ ವತಿಯಿಂದ ಮಂಜೊಟ್ಟಿಯ ಐತಿಹಾಸಿಕ ಜಮಲಾಬಾದ್ ಕೋಟೆಯ ಬಳಿ ಟಿಪ್ಪುವಿನ 264ನೆ ಜನ್ಮದಿನದ ಪ್ರಯುಕ್ತ ಐಕ್ಯತಾ ಸಮಾವೇಶ ಹಾಗೂ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.

ಅಡ್ವಕೇಟ್ ಅಬ್ದುಲ್ ಮಜೀದ್ ಖಾನ್ ಪುತ್ತೂರು, ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾಧ್ಯಕ್ಷ ಶಾಫಿ ಬೆಳ್ಳಾರೆ, ಇಮಾಮ್ಸ್ ಕೌನ್ಸಿಲ್ ದ.ಕ. ಜಿಲ್ಲಾ ಸಮಿತಿಯ ಸದಸ್ಯ ಜಾಫರ್ ಸಾದಿಖ್ ಫೈಝಿ, ಜಮಲಾಬಾದ್ ನಾಗರಿಕ ಸಮಿತಿಯ ಅಧ್ಯಕ್ಷ ಎಸ್. ಆದಂ ಸಾಹೇಬ್, ಅಸ್ಸೈಯ್ಯದ್ ಅಸ್ಗರ್ ಬಿನ್ ಸಾಹೇಬ್ ಜಾನ್ ತಂಙಳ್ ತರಿ ಗಂಜಿಮಠ, ಜಿ.ಪಂ.ಸದಸ್ಯ ಶೈಲೇಶ್ ಕುಮಾರ್, ಭಾರತೀಯ ಸೇವಾದಳ ಕೇಂದ್ರದ ಆಲ್ಫೋನ್ಸ್ ಫ್ರಾಂಕೊ, ಹೈದರ್ ನೀರ್ಸಾಲ್, ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ ನಝೀರ್ ಮತ್ತಿತರರು ಉಪಸ್ಥಿತರಿದ್ದರು.

‘ಅಚ್ಛೇ ದಿನ್ ಕಿ ಸಚ್ಚಾಯಿ’ ಜಾಗತಿ ಅಭಿಯಾನ

Fri, 12/19/2014 - 05:52 -- web editor

ಫರಂಗಿಪೇಟೆ: ಎಸ್ಡಿಪಿಐ ವತಿಯಿಂದ ನಡೆಯುತ್ತಿರುವ ಅಚ್ಛೇ ದಿನ್ ಸಚ್ಚಾಯಿ ಎಂಬ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಜನ ಜಾಗೃತಿ ಸಭೆಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಜಲೀಲ್, ಎಸ್ಡಿಪಿಐ ಪುದು ಪಂಚಾಯತ್ ಅಧ್ಯಕ್ಷ ಜಮಾಲುದ್ದೀನ್, ಎಸ್ಡಿಪಿಐ ಮುಖಂಡ ರಿಯಾಝ್ ಪರ್ಲಿಯ, ಸಲೀಂ ಕೇ, ಕೂಸಪ್ಪ, ನಝೀರ್ ತುಂಬೆ ಮುಂತಾದವರು ಉಪಸ್ಥಿತರಿದ್ದರು.

ನವಾಝ್ ಬರ್ಕೆ ಸ್ವಾಗತಿಸಿದರು. ಖಾದರ್ ಅಮ್ಮೆಮ್ಮಾರ ಕಾರ್ಯಕ್ರಮವನ್ನು ನಿರೂಪಿಸಿದರು. ನವಾಝ್ ತುಂಬೆ ವಂದಿಸಿದರು.

ಕ್ಯಾಂಪಸ್ ಫ್ರಂಟ್ ಸಂಸ್ಥಾಪನಾ ದಿನ ಆಚರಣೆ

Fri, 12/19/2014 - 05:42 -- web editor

ಉಡುಪಿ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರದಾದ್ಯಂತ ನವೆಂಬರ್ 7ರಿಂದ 11ರವರೆಗೆ ರಾಷ್ಟ್ರೀಯ ಶಿಕ್ಷಣ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದರ ಪ್ರಯುಕ್ತ ಉಡುಪಿ ಜಿಲ್ಲಾ ಘಟಕದ ವತಿಯಿಂದ ನವೆಂಬರ್ 7ರಂದು ಕ್ಯಾಂಪಸ್ ಫ್ರಂಟ್ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಈ ವೇಳೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನಡೆಸಿ ನಂತರ ವಿವಿಧ ಶಾಲೆಗಳಿಗೆ ಸಿಹಿತಿಂಡಿ ವಿತರಿಸಲಾಯಿತು.

ಉಡುಪಿ ಸಿ.ಎಸ್.ಐ. ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ನ ಪದಾಧಿಕಾರಿಗಳಾದ ಆವೇಝ್ ಮಲ್ಪೆ, ಪರೇಶ್, ರಿಹಾನ್, ಸದಾಬ್, ನಾಝಿಲ್, ಪವಾಝ್ ಕಂಡ್ಲೂರು ಮುಂತಾದವರು ಉಪಸ್ಥಿತರಿದ್ದರು.

ಗುಲ್ಬರ್ಗಾ: ರಿಹಾಬ್ನಿಂದ ಗ್ರಾಮಾಭಿವದ್ಧಿ ಯೋಜನೆ

Thu, 12/18/2014 - 13:19 -- web editor

ಗುಲ್ಬರ್ಗಾ: ರಿಹಾಬ್ನಿಂದ ಗ್ರಾಮಾಭಿವದ್ಧಿ ಯೋಜನೆರಿಹಾಬ್ ಇಂಡಿಯಾ ಫೌಂಡೇಶನ್ ಅಧೀನದಲ್ಲಿ ‘‘ವಿಲೇಜ್ ಡೆವಲಪ್ಮೆಂಟ್ ಪ್ರೋಗ್ರಾಮ್’’ ಗುಲ್ಬರ್ಗಾದ ಸೋನಿಯಾ ಕಾಲೋನಿಯಲ್ಲಿ ಇತ್ತೀಚಿಗೆ ಉದ್ಘಾಟನೆಗೊಂಡಿತು. 468 ಮನೆಗಳಿರುವ ಈ ಕಾಲೋನಿಯಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಶಿಕ್ಷಣದಲ್ಲಿ ಸಬಲೀಕರಣ, ನೈರ್ಮಲ್ಯ ಇತ್ಯಾದಿ ಕಾರ್ಯಕ್ರಮಗಳನ್ನೊಳಗೊಂಡ 5 ವರ್ಷಗಳ ಯೋಜನೆಗೆ ಅಂದಾಜು ರೂ. 50,00,000 ಖರ್ಚು ತಗುಲಲಿದೆ.ಕಮ್ಯುನಿಟಿ ಸೆಂಟರ್ವೊಂದನ್ನುಈಗಾಗಲೇ ಆರಂಭಿಸಲಾಗಿದ್ದು, ಅಲ್ಲಿ ವಿದ್ಯಾರ್ಥಿಗಳಿಗಾಗಿ ಟ್ಯೂಷನ್ ಕೇಂದ್ರವನ್ನು ತೆರೆಯಲಾಗಿದೆ.

Pages

Subscribe to ಸಾಮಾನ್ಯ ಸುದ್ದಿ