ಸಾಮಾನ್ಯ ಸುದ್ದಿ

ಜಲೀಲ್ ಕರೋಪಾಡಿ ಹತ್ಯಾ ಆರೋಪಿಗಳ ಮೇಲೆ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿ: ಹನೀಫ್ ಖಾನ್

Fri, 05/12/2017 - 12:53 -- web editor

ಮಂಗಳೂರು : ಏಪ್ರಿಲ್ 20ರಂದು ನಡೆದ ದ.ಕ.ಜಿಲ್ಲೆಯ ಕರೋಪಾಡಿ ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಜಲೀಲ್ ಕರೋಪಾಡಿಯವರ ಹತೈಯು ಒಂದು ಸಂಘಟಿತ ಸಂಚಿನ ಕತ್ಯವಾಗಿದ್ದು, ಇದು ಸಮಾಜದಲ್ಲಿ ಗಲಭೆ ಸಷ್ಟಿಸುವಂತಹ ಪಿತೂರಿಯಾಗಿದೆ. ಹಾಡ ಹಗಲೇ ಪಂಚಾಯತ್ ಕಛೇರಿಯೊಳಗೆ ನುಗ್ಗಿ ಜನಪ್ರತಿನಿಧಿಯ ಕೊಲೆ ನಡೆಸಿರುವ ಘಟನೆ ಸಮಾಜವನ್ನು ಬೆಚ್ಚಿ ಬೀಳಿಸಿದ್ದು, ಇದರ ಸತ್ಯಾಸತ್ಯತೆ ಹೊರ ಬರಬೇಕಾದರೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುಬೇಕು ಮತ್ತು ಆರೋಪಿಗಳ ಮೇಲೆ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಒತ್ತಾಯಿಸಿದ್ದಾರೆ.

ನಗರದ ವುಡ್‌ಲ್ಯಾಂಡ್ ಹೊಟೇಲ್‌ನಲ್ಲಿ ಇಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಅಹ್ಮದ್ ಖುರೈಷಿ ಮನೆಗೆ ಯುನೈಟೆಡ್ ಮುಸ್ಲಿಂ ಫ್ರಂಟ್ ನಾಯಕರ ಭೇಟಿ

Fri, 05/12/2017 - 10:32 -- web editor

ಮಂಗಳೂರು: ಕಳೆದ ತಿಂಗಳು ಮಂಗಳೂರು ಸಿಸಿಬಿ ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿ ಎರಡು ಕಿಡ್ನಿ ವೈಫಲ್ಯಕ್ಕೊಳಗಾಗಿದ್ದ ಅಹ್ಮದ್ ಖುರೈಷಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬಳಿಕ ಖುರೈಷಿ ಮನೆಗೆ ಭೇಟಿ ನೀಡಿದ ಯುನೈಟೆಡ್ ಮುಸ್ಲಿಂ ಫ್ರಂಟ್‌ನ ನಾಯಕರು ಆತನ ಆರೋಗ್ಯದ ಬಗ್ಗೆ ಮತ್ತು ಸಿಐಡಿ ತನಿಖೆ ನಡೆಸಿದ ಮಾಹಿತಿಯನ್ನು ಪಡೆದು ಮುಂದಿನ ಹೋರಾಟದ ರೂಪುರೇಷೆಯ ಕುರಿತ ವಿಚಾರಗಳನ್ನು ಚರ್ಚಿಸಿದರು.

ಈ ಸಂದರ್ಭದಲ್ಲಿ ಯುನೈಟೆಡ್ ಮುಸ್ಲಿಂ ಫ್ರಂಟ್‌ನ ಸಂಚಾಲಕ ಹಾಜಿ.ಮುಸ್ತಫಾ ಕೆಂಪಿ, ಸಮಿತಿ ಸದಸ್ಯರಾದ ರಫೀವುದ್ದೀನ್ ಕುದ್ರೋಳಿ,ಹನೀಫ್ ಖಾನ್ ಕೊಡಾಜೆ, ನವಾಝ್ ಉಳ್ಳಾಲ, ಜಲೀಲ್ ಕಷ್ಣಾಪುರ, ಇಕ್ಬಾಲ್ ಗೂಡಿನಬಳಿ ಉಪಸ್ಥಿತರಿದ್ದರು.

ಜಮಲಾಬಾದ್: ಸೂಚನಾ ಫಲಕ ವಿರೂಪಗೊಳಿಸಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಮನವಿ

Thu, 05/04/2017 - 13:47 -- web editor

ಬೆಳ್ತಂಗಡಿ: ಐತಿಹಾಸಿಕ ಜಮಲಾಬಾದ್ ಕೋಟೆಗೆ ಹೋಗುವ ದಾರಿ ಸೂಚನಾ ಫಲಕವನ್ನು ವಿರೂಪಗೊಳಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ಜಮಲಾಬಾದ್ ನಾಗರಿಕ ಸಮಿತಿಯ ವತಿಯಿಂದ ಬೆಳ್ತಂಗಡಿ ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಲಾಯಿತು.

ದಾರಿ ಸೂಚನಾ ಫಲಕವನ್ನು ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಮಂಜೊಟ್ಟಿ ಬಸ್ಸು ನಿಲ್ದಾಣದ ಸಮೀಪ ಅಳವಡಿಸಲಾಗಿತ್ತು. ಎಪ್ರಿಲ್ 29ರಂದು ರಾತ್ರಿ ಕಿಡಿಗೇಡಿಗಳು ಸೂಚನಾ ಫಲಕವನ್ನು ವಿರೂಪಗೊಳಿಸಿ ಐತಿಹಾಸಿಕ ಜಮಲಾಬಾದ್ ಹೆಸರಿಗೆ ಕಪ್ಪು ಮಸಿ ಬಳಿದು ನರಸಿಂಹ ಗಡ ಎಂಬುದಾಗಿ ಬದಲಾಯಿಸಿದ್ದಾರೆ. ಇದು ಜಮಲಾಬಾದ್‌ನ ಇತಿಹಾಸವನ್ನು ತಿರುಚಲು ಕಿಡಿಗೇಡಿಗಳು ನಡೆಸಿದ ಷಡ್ಯಂತ್ರವಾಗಿರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕೊಣಾಜೆ ಠಾಣೆ ಎದುರು ಪ್ರತಿಭಟನೆ: ಇನ್ಸ್‌ಪೆಕ್ಟರ್ ಅಶೋಕ್ ವಜಾಕ್ಕೆ ಆಗ್ರಹ

Thu, 05/04/2017 - 10:07 -- web editor

ಮಂಗಳೂರು: ಕಾರ್ತಿಕ್ ರಾಜ್‌ನ ಹತ್ಯೆಯಾದ ಬಳಿಕ ಕಳೆದ ಎಂಟು ತಿಂಗಳಲ್ಲಿ ಪೊಲೀಸರು ರಾತ್ರಿಯ ವೇಳೆ ಮುಸ್ಲಿಮರ ಮನೆಗಳಿಗೆ ನುಗ್ಗಿ ವದ್ಧರು, ಮಹಿಳೆಯರೆನ್ನದೆ ಅಮಾಯಕರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ ಬಲವಂತವಾಗಿ ಆಪಾದನೆಯನ್ನು ಒಪ್ಪಿಸುವಂತಹ ಪ್ರಯತ್ನಗಳು ಸತತವಾಗಿ ನಡೆದಿದ್ದವು. ಇನ್ಸ್‌ಪೆಕ್ಟರ್ ಅಶೋಕ್‌ರಿಗೆ ಕಾರ್ತಿಕ್ ರಾಜ್ ಕುಟುಂಬದ ಕಲಹದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದರೂ ಅಮಾಯಕರಿಗೆ ಹಿಂಸೆ ನೀಡಿದ್ದಾರೆ. ತಮ್ಮ ವೃತ್ತಿ ಧರ್ಮಕ್ಕೆ ದ್ರೋಹ ಬಗೆದ ಇಂತಹ ಇನ್ಸ್‌ಪೆಕ್ಟರ್‌ರನ್ನು ಕೂಡಲೇ ಸರಕಾರ ವಜಾಗೊಳಿಸಬೇಕು.

ಮಂಗಳೂರು ವಿವಿ ಎದುರು ಕ್ಯಾಂಪಸ್ ಫ್ರಂಟ್ ಧರಣಿ

Thu, 03/24/2016 - 09:13 -- web editor

ವಿದ್ಯಾರ್ಥಿಗಳ ಫಲಿತಾಂಶ ಲೋಪದೋಷ ಸರಿಪಡಿಸಲು ಆಗ್ರಹ

ಕೊಣಾಜೆ: ಮಂಗಳೂರು ವಿವಿಯ ಫಲಿತಾಂಶದ ಗೊಂದಲಗಳನ್ನು ಮತ್ತು ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಎದುರು ಮಾ.17ರಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.

ಮಕ್ಕಳು, ಮಹಿಳೆಯರ ಕಳ್ಳ ಸಾಗಾಣೆ ಜಾಲ ಭೇದಿಸಿದ ಪೊಲೀಸರ ಕಾರ್ಯವೈಖರಿಗೆ ಎನ್‌ಡಬ್ಲುಎಫ್ ಶ್ಲಾಘನೆ

Tue, 02/09/2016 - 06:58 -- web editor

ಬೆಂಗಳೂರು: ಮಕ್ಕಳು ಮತ್ತು ಮಹಿಳೆಯರನ್ನು ವಿದೇಶಕ್ಕೆ ಕಳ್ಳ ಸಾಗಣೆ ಮಾಡುತ್ತಿದ್ದ ಬಹುದೊಡ್ಡ ಜಾಲವನ್ನು ಭೇದಿಸಿರುವ ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರ್ ಮತ್ತು ಅವರ ತಂಡವನ್ನು ನ್ಯಾಷನಲ್ ವಿಮೆನ್ಸ್ ಫ್ರಂಟ್ ಕರ್ನಾಟಕ ಮುಕ್ತಕಂಠದಿಂದ ಶ್ಲಾಘಿಸುತ್ತದೆ ಮತ್ತು ಅವರ ಈ ಕಾರ್ಯವು ನಿಜಕ್ಕೂ ಅಭಿನಂದನಾರ್ಹವಾದದ್ದಾಗಿದೆ.

Pages

Subscribe to ಸಾಮಾನ್ಯ ಸುದ್ದಿ