ಸಾಮಾನ್ಯ ಸುದ್ದಿ

ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ: ಕ್ಯಾಂಪಸ್ ಫ್ರಂಟ್ ಖಂಡನೆ

Tue, 02/09/2016 - 06:51 -- web editor

ಶಾಂತಿಯುತ ಪ್ರತಿಭಟನೆಯ ವೇಳೆ ಪೋಲಿಸರು ಲಾಠಿ ಪ್ರಹಾರ ನಡೆಸಿ ಪ್ರತಿಭಟನೆಯನ್ನು ದಮನಿಸುವ ಮೂಲಕ ಸಂವಿಧಾನಾತ್ಮಕ ಹಕ್ಕನ್ನು ಕಸಿಯಲು ಪ್ರಯತ್ನಿಸಿದ್ದಾರೆ. ಈ ಘಟನೆಗಳಿಗೆ ಕಾರಣಕರ್ತರಾದ ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಒತ್ತಾಯಿಸಿದೆ.

ಪ್ರತಿಭಟನಾನಿರತ ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿ ಅಶ್ವಾಸನೆ ಕೊಟ್ಟು ವಿದ್ಯಾರ್ಥಿಗಳ ಮನವೊಲಿಸುವುದನ್ನು ಬಿಟ್ಟು ವಿದ್ಯಾರ್ಥಿಗಳ ಮೇಲೆ ಏಕಾಏಕಿ ಲಾಠಿ ಪ್ರಹಾರ ಮಾಡಿದ್ದು ಖಂಡನೀಯ. ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿಯರ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ. ಈ ರೀತಿ ಪ್ರತಿಭಟನಾಕಾರರಿಗೆ ರಕ್ಷಣೆಕೊಡಬೇಕಿದ್ದ ಪೊಲೀಸರು, ಭಕ್ಷಕರಾಗಿ ಖಾಕಿ ದರ್ಪವನ್ನು ವಿದ್ಯಾರ್ಥಿಗಳ ಮೇಲೆ ಮೆರೆದಿರುವುದು ವಿಪರ್ಯಾಸ.

ಆರೆಸ್ಸೆಸ್ ಪ್ರಮುಖ ಭಯೋತ್ಪಾದಕ ಸಂಘಟನೆ: ಮಹಾರಾಷ್ಟ್ರದ ಮಾಜಿ ಪೊಲೀಸ್ ಅಧಿಕಾರಿ

Sat, 11/28/2015 - 12:37 -- web editor

ಕೋಲ್ಕತಾ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಭಾರತದ ನಂಬರ್ ಒಂದು ಭಯೋತ್ಪಾದಕ ಸಂಘಟನೆಯಾಗಿದ್ದು, ದೇಶಾದ್ಯಂತದ 13 ಭಯೋತ್ಪಾದಕ ಪ್ರಕರಣಗಳಲ್ಲಿ ಅದರ ಕಾರ್ಯಕರ್ತರು ದೋಷಾರೋಪಣೆ ಗೊಳಗಾಗಿದ್ದಾರೆ ಎಂದು ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾ ನಿರೀಕ್ಷಕ ಎಸ್.ಎಂ. ಮುಶ್ರಿಫ್ ಗುರುವಾರ ಹೇಳಿದ್ದಾರೆ.

‘‘ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ಕನಿಷ್ಠ 13 ಭಯೋತ್ಪಾದನೆ ಪ್ರಕರಣಗಳಲ್ಲಿ ದೋಷಾರೋಪಪಟ್ಟಿ ಹೊರಿಸಲಾಗಿದೆ. ಈ ಭಯೋತ್ಪಾದಕ ಪ್ರಕರಣಗಳಲ್ಲಿ ಆರ್‌ಡಿಎಕ್ಸ್ ಬಳಸಲಾಗಿದೆ. ಬಜರಂಗ ದಳ ಮುಂತಾದ ಸಂಘಟನೆಗಳನ್ನು ಗಣನೆಗೆ ತೆಗೆದುಕೊಂಡರೆ ಇಂಥ ಪ್ರಕರಣಗಳ ಸಂಖ್ಯೆ 17ಕ್ಕೆ ಏರುತ್ತದೆ’’ ಎಂದು ಕೋಲ್ಕತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಶ್ರಿಫ್ ಹೇಳಿದರು.

ಖಾಶಿಂಜಿ ಹತ್ಯೆ ಪ್ರಕರಣ-ಮೂವರಿಗೆ ಜೀವಾವಧಿ, ಇಬ್ಬರಿಗೆ ಏಳು ವರ್ಷ ಕಠಿಣ ಸಜೆಯ ತೀರ್ಪು

Sat, 11/28/2015 - 10:12 -- web editor
ನ್ಯಾಯವಾದಿ ನೌಶಾದ್ ಖಾಶಿಂಜಿ

ಮಂಗಳೂರು: ನ್ಯಾಯವಾದಿ ನೌಶಾದ್ ಖಾಶಿಂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಮೂರನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮೂವರು ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ಇಬ್ಬರು ಅಪರಾಧಿಗಳಿಗೆ ಏಳು ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.

ರಾಜ್ಯ ಸರಕಾರದ ತೀರ್ಮಾನಕ್ಕೆ ಇಮಾಮ್ಸ್ ಕೌನ್ಸಿಲ್ ಸ್ವಾಗತ

Thu, 10/22/2015 - 10:48 -- web editor

ಬೆಂಗಳೂರು: ಮೈಸೂರ ಹುಲಿ ಟಿಪ್ಪು ಸುಲ್ತಾನ್‌ರ ಜನ್ಮ ದಿನವಾದ ನವೆಂಬರ್ 10ನ್ನು ಸರಕಾರಿ ರಜಾ ದಿನವನ್ನಾಗಿ ಘೋಷಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರಕಾರದ ಆದೇಶವನ್ನು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕರ್ನಾಟಕ ರಾಜ್ಯ ಸಮಿತಿಯು ಸ್ವಾಗತಿಸಿದೆ.

ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಂದಿಗೆ ರಾಜಿರಹಿತ ಹೋರಾಟ ನಡೆಸಿ, ಯುದ್ಧ ರಣಾಂಗಣದಲ್ಲಿ ವೀರ ಹುತಾತ್ಮರಾದ ಏಕೈಕ ಅರಸ ಎಂಬ ಖ್ಯಾತಿವೆತ್ತ ಮೈಸೂರಿನ ಹುಲಿ ಹಝ್ರತ್ ಟಿಪ್ಪುಸುಲ್ತಾನ್‌ರವರ ಜನ್ಮದಿನವನ್ನು ಸರಕಾರಿ ರಜಾ ದಿನವನ್ನಾಗಿ ಘೋಷಿಸಬೇಕೆಂಬ ಕನ್ನಡಿಗರ ದೀರ್ಘಕಾಲದ ಬೇಡಿಕೆಯನ್ನು ಈ ಮೂಲಕ ಈಡೇರಿಸಿದಂತಾಗಿದೆ ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಮೌಲಾನಾ ಜಾಫರ್ ಸಾದಿಕ್ ಫೈಝಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ದಾದ್ರಿಯಲ್ಲೆ ನಡೆಯಿತು ಇನ್ನೊಂದು ಗಲಭೆಗೆ ಸಂಚು!

Wed, 10/07/2015 - 14:54 -- web editor

ದಾದ್ರಿ (ಉತ್ತರ ಪ್ರದೇಶ): ಮನೆಯಲ್ಲಿ ದನದ ಮಾಂಸ ಇಟ್ಟುಕೊಂಡಿದ್ದಾರೆಂದು ಮೊಹಮ್ಮದ್ ಅಖ್ಲಾಖ್ ಕಗ್ಗೊಲೆ ನಡೆದ ವಾರದ ಒಳಗೆ ಪಕ್ಕದ ಹಳ್ಳಿಯಲ್ಲೇ ಇಂತಹ ಇನ್ನೊಂದು ಸಂಚು ರೂಪಿಸಿದ್ದನ್ನು ಪೊಲೀಸರು ವಿಫಲಗೊಳಿಸಿದ್ದಾರೆ.

ಎನ್‌ಡಬ್ಲುಎಫ್ ವತಿಯಿಂದ ಸಾಮಾಜಿಕ ಜಾಗತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ

Tue, 09/22/2015 - 13:58 -- web editor

ಬಂಟ್ವಾಳ: ಪ್ರಸಕ್ತ ಭಾರತದಲ್ಲಿ ಮಹಿಳೆಯರು ಅನುಭವಿಸುತ್ತಿರುವ ಮಾನಸಿಕ, ದೈಹಿಕ ದೌರ್ಜನ್ಯ ಹಾಗೂ ಸಾಮಾಜಿಕ ಪಿಡುಗುಗಳಿಂದ ಮುಕ್ತಿಗೊಳಿಸುವ ಸಲುವಾಗಿ ನ್ಯಾಷನಲ್ ವುಮೆನ್ಸ್ ಫ್ರಂಟ್ ವತಿಯಿಂದ ಸಪ್ಟೆಂಬರ್ 15ರಿಂದ ನವೆಂಬರ್ 15ರ ವರೆಗೆ ‘ತಡೆಯಿರಿ ನಮ್ಮ ಪೀಳಿಗೆಯನ್ನು ಅವನತಿಯಿಂದ’ ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡಿರುವ ಸಾರ್ವಜನಿಕ ಅಭಿಯಾನ ಕಾರ್ಯಕ್ರಮವನ್ನು ಎನ್‌ಡಬ್ಲುಎಫ್‌ನ ರಾಷ್ಟ್ರೀಯ ಅಧ್ಯಕ್ಷೆ ಶಾಹಿದಾ ಎ. ಉದ್ಘಾಟಿಸಿದರು.

Pages

Subscribe to ಸಾಮಾನ್ಯ ಸುದ್ದಿ