ಸಾಮಾನ್ಯ ಸುದ್ದಿ

ಧಾರ್ಮಿಕ ಆಚರಣೆಗೆ ಭದ್ರತೆ ಒದಗಿಸುವಂತೆ ಇಮಾಮ್ಸ್ ಕೌನ್ಸಿಲ್ ಮನವಿ

Tue, 09/22/2015 - 12:54 -- web editor

ಮಂಗಳೂರು: ದೇಶಾದ್ಯಂತ ಸೆಪ್ಟಂಬರ್ 24ರಂದು ಮುಸ್ಲಿಮರು ಬಕ್ರೀದ್ ಹಬ್ಬವನ್ನು ಆಚರಿಸಲಿದ್ದು, ಕುರ್ಬಾನಿ ಆಚರಣೆಯೂ ಈ ಹಬ್ಬದ ಭಾಗವಾಗಿದೆ. ಮುಸ್ಲಿಮರ ಈ ಧಾರ್ಮಿಕ ಆಚರಣೆಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.

ರಸ್ತೆಯ ಹೆಸರು ಬದಲಾವಣೆ ಇತಿಹಾಸಕ್ಕೆ ಬಗೆದ ಅಪಚಾರ

Sat, 09/05/2015 - 11:52 -- web editor

ನವದೆಹಲಿಯಲ್ಲಿ ಔರಂಗಜೇಬ್‌ ರಸ್ತೆಯ ಹೆಸರನ್ನು ಎಪಿಜೆ ಅಬ್ದುಲ್‌ ಕಲಾಮ್‌ ರಸ್ತೆ ಎಂದು ಬದಲಿಸುವ ಮೂಲಕ ಅಲ್ಲಿನ ಮಹಾನಗರಪಾಲಿಕೆ ಅಗ್ಗದ ರಾಜಕೀಯ ನಡೆಸಿದೆ. ಸಾರ್ವಜನಿಕ ಸ್ಮೃತಿಯಿಂದ ಔರಂಗಜೇಬನ ಹೆಸರು ಅಳಿಸಿಹಾಕುವ ಪ್ರಯತ್ನ ಇಲ್ಲಿದೆ. ಚಾರಿತ್ರಿಕ ಘಟನೆಗಳಿಗೆ ಕೋಮು ಬಣ್ಣ ನೀಡುವ ಸಣ್ಣತನದ ರಾಜಕಾರಣ ಇದು. ದೆಹಲಿಯ ಇತಿಹಾಸದ ಕಡೆಗೆ ಕಣ್ಣು ಹಾಯಿಸಿದರೆ, ಅಲ್ಲಿಂದ ಇಡೀ ಇಂಡಿಯಾವನ್ನು ಆಳಿದ ಚಕ್ರವರ್ತಿಗಳು, ರಾಜಮಹಾರಾಜರ ವೈವಿಧ್ಯಮಯ ಜೀವನಚಿತ್ರಗಳು ಕಾಣಸಿಗುತ್ತವೆ. ಇತಿಹಾಸದ ಈ ಮೆರವಣಿಗೆಯಲ್ಲಿ ಮೊಘಲ್‌ ದೊರೆ ಔರಂಗಜೇಬ್‌ ಕೂಡಾ ಒಬ್ಬ ಪಾತ್ರಧಾರಿ. ಸುಮಾರು ಅರ್ಧಶತಮಾನ ಕಾಲ ದೆಹಲಿಯ ಸಿಂಹಾಸನದಲ್ಲಿ ಕುಳಿತು, ಬಹುದೊಡ್ಡ ಸಾಮ್ರಾಜ್ಯವನ್ನು ನಿಭಾಯಿಸಿದ ಔರಂಗಜೇಬನದ್ದು ಬಹುವರ್ಣದ ವ್ಯಕ್ತಿತ್ವ.

ಬಾಬಾ ಬುಡನ್ ಗಿರಿ ವಿವಾದವನ್ನು ರಾಜ್ಯ ಸರಕಾರವೇ ಬಗೆಹರಿಸಲಿ: ಸುಪ್ರೀಂ ಕೋರ್ಟ್

Fri, 09/04/2015 - 14:11 -- web editor

ನವದೆಹಲಿ: ಬಾಬಾ ಬುಡನ್ ಗಿರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪೋಂದನ್ನು ನೀಡಿದ್ದು, ವಿವಾದಿತ ದರ್ಗಾ ಕ್ಕೆ ಸಂಬಂಧಿಸಿದ ಒಡೆತನದ ಪ್ರಶ್ನೆಯನ್ನು ರಾಜ್ಯ ಸರಕಾರವೇ ಬಗೆಹರಿಸಬೇಕು ಎಂದು ಆದೇಶಿದೆ.

ಯಾಕೂಬ್ ಅಫ್ಝಲ್ ಗಲ್ಲು ರಾಜಕೀಯ ಪ್ರೇರಿತ

Fri, 09/04/2015 - 13:54 -- web editor

ನವದೆಹಲಿ: ಸಂಸತ್ ದಾಳಿಯ ಅಪರಾಧಿ ಅಫ್ಜಲ್ ಗುರು ಹಾಗೂ 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್‌ಗೆ ಗಲ್ಲು ಶಿಕ್ಷೆ ರಾಜಕೀಯ ಪ್ರೇರಿತವೇ? ಹೌದು ಎನ್ನುತ್ತಾರೆ ದೆಹಲಿ ಹೈಕೋರ್ಟ್ ನಿವೃತ್ತ ಮುಖ್ಯ ನಾಯಮೂರ್ತಿ ಎ.ಪಿ.ಶಾಹ್.

ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನ್ಯಾ. ಎ. ಪಿ ಶಾಹ್ ಅಫ್ಜಲ್ ಗುರುಗೆ ಗಲ್ಲು ನೀಡಿದ್ದು ನಿರಾಸೆ ತಂದಿತ್ತು ಎಂದು ಹೇಳಿದ್ದಾರೆ. ಯಾಕೂಬ್ ಮೆಮೊನ್‌ಗೆ ಗಲ್ಲು ಶಿಕ್ಷೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮಧ್ಯೆಯೇ ಭಿನ್ನಾಭಿಪ್ರಾಯವಿತ್ತು. ಅದನ್ನು ಮತ್ತೊಂದು ಪೀಠಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಕ್ಷಮಾದಾನ ಅರ್ಜಿ ತಿರಸ್ಕಾರಗೊಂಡ ನಂತರ 14 ದಿನಗಳ ಕಾಲಾವಕಾಶ ನೀಡಬೇಕೆಂಬ ಕಾನೂನನ್ನು ಸಹ ಇಲ್ಲಿ ಪಾಲಿಸಲಾಗಿಲ್ಲ ಎಂದ್ ಶಾಹ್ ಹೇಳಿದ್ದಾರೆ.

ದಲಿತ ಮಹಿಳೆಯ ನಗ್ನಗೊಳಿಸಿ, ಮೂತ್ರ ಕುಡಿಸಿದ ದುಷ್ಕರ್ಮಿಗಳು

Fri, 09/04/2015 - 13:52 -- web editor

ಭೋಪಾಲ್: ಸರಕಾರ ನೀಡಿದ ಜಮೀನಿನಲ್ಲಿ ಕೃಷಿ ಮಾಡಿದುದನ್ನು ಹಾಳುಗೆಡವಲು ಬಂದ ಮೇಲ್ಜಾತಿಯ ಜನರನ್ನು ವಿರೋಧಿಸಿದ ದಲಿತ ಮಹಿಳೆಯೊಬ್ಬಳನ್ನು ನಗ್ನಗೊಳಿಸಿದುದೇ ಅಲ್ಲದೆ, ಆಕೆಗೆ ಬಲವಂತವಾಗಿ ಮೂತ್ರ ಕುಡಿಸಿದ ಆಘಾತಕಾರಿ ಘಟನೆ ವರದಿಯಾಗಿದೆ. ಮಧ್ಯಪ್ರದೇಶದ ಛತ್ತಾಪುರ್ ಜಿಲ್ಲೆಯ ನೌಗಾಂಗ್ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ವಾರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆಗೆ ತೊಡಕು: ಕ್ಯಾಂಪಸ್ ಫ್ರಂಟ್‌ನಿಂದ ಪ್ರತಿಭಟನಾ ರಾಲಿ

Sat, 08/29/2015 - 09:13 -- web editor

ಮಂಗಳೂರು: ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್‌ನಲ್ಲಿ ಸರ್ವರ್ ದೋಷದ ಕಾರಣ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಅರ್ಜಿಯನ್ನು ಸಲ್ಲಿಸಲು ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ನಗರದ ಪಿವಿಎಸ್ ಸರ್ಕಲ್‌ನಿಂದ ಲಾಲ್‌ಭಾಗ್‌ನಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಕಚೇರಿಯ ವರೆಗೆ ಪ್ರತಿಭಟನಾ ರಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Pages

Subscribe to ಸಾಮಾನ್ಯ ಸುದ್ದಿ