ಸಾಮಾನ್ಯ ಸುದ್ದಿ

ಎಸ್‌ಡಿಪಿಐಯಿಂದ 69ನೇ ಸ್ವಾತಂತ್ರೋತ್ಸವ ಆಚರಣೆ

Fri, 08/28/2015 - 09:07 -- web editor

ಮಂಗಳೂರು: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿಯ ವತಿಯಿಂದ ಪಕ್ಷದ ಜಿಲ್ಲಾ ಕಛೇರಿಯ ಮುಂಭಾಗದಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆಯವರು ಧ್ವಜಾರೋಹಣಗೈದರು.

ಎಸ್‌ಡಿಪಿಐ ವತಿಯಿಂದ ಸ್ವಾತಂತ್ರ ದಿನಾಚರಣೆ ಅಂಗವಾಗಿ ಹಣ್ಣು ಹಂಪಲು ವಿತರಣೆ

Fri, 08/28/2015 - 09:03 -- web editor

ಮಂಗಳೂರು: ಎಸ್‌ಡಿಪಿಐ ಅಡ್ಡೂರು ವಲಯ ಸಮಿತಿಯ ವತಿಯಿಂದ 69ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮವು ಪಕ್ಷದ ಕಛೇರಿಯ ಮುಂಭಾಗದಲ್ಲಿ ವಲಯಾಧ್ಯಕ್ಷ ಎಂ.ಕೆ.ಮುಸ್ತಫಾ ನೆರವೇರಿಸಿದರು.

ನಂತರ ಕೈಕಂಬದಲ್ಲಿರುವ ಸ್ನೇಹ ಸದನ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಂಜಿಲಕೋಡಿ ಜುಮಾ ಮಸೀದಿ ಅಧ್ಯಕ್ಷ ಹಾಜಿ ಎಂ.ಎಚ್.ಮಯ್ಯದ್ದಿ, ಬಿ.ಜೆ.ಎಂ ಮಸೀದಿಯ ಗೌರವಾಧ್ಯಕ್ಷ ಹಾಜಿ ಎಸ್.ಬಾವುಂಞಿ, ಗ್ರಾಮ ಪಂಚಾಯತ್ ಸದಸ್ಯ ಎಂ.ಕೆ.ರಿಯಾಝ್, ಐಎಫ್ಎಫ್ ಮುಖಂಡ ರಝಾಕ್ ಪಾಂಡೆಲ್, ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಕಾಯದರ್ಶಿ ಅಸ್ತಾರ್ ಅಡ್ಡೂರು, ಅನ್ವರ್ ಗೋಳಿಪಡ್ಪು, ಜಬ್ಬಾರ್, ಇಮ್ತಿಯಾಝ್, ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.

ಕ್ರಿಯೇಟಿವ್ ಫೌಂಡೇಶನ್ ವತಿಯಿಂದ ವೆಬ್ಸೈಟ್ ಅನಾವರಣ, ಸನ್ಮಾನ ಕಾರ್ಯಕ್ರಮ

Wed, 08/19/2015 - 09:25 -- web editor

ಮಂಗಳೂರು : ಕ್ರಿಯೇಟಿವ್ ಫೌಂಡೇಶನ್ ಮಂಗಳೂರು ಇದರ ವತಿಯಿಂದ ಸಂಸ್ಥೆಯ ವೆಬ್ಸೈಟ್ ಅನಾವರಣ ಹಾಗೂ ಸನ್ಮಾನ ಕಾರ್ಯಕ್ರಮವು ಇತ್ತೀಚೆಗೆ ಜಮೀಯತುಲ್ ಫಲಾಹ್ ಕಮ್ಯೂನಿಟಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಸರಕಾರದ ಮತ್ತು ಸರಕಾರೇತರ ಸಂಸ್ಥೆಗಳಿಂದ ಸಿಗುವ ವಿದ್ಯಾರ್ಥಿ ವೇತನ ಹಾಗೂ ಶೈಕ್ಷಣಿಕ ಸಾಲದ ಬಗ್ಗೆ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದ ವ್ಯವಸ್ಥಾಪಕ ಅಬ್ದುಲ್ ಖಾದರ್ ಮಾಹಿತಿ ನೀಡಿದ್ದರು.

ತಲಪಾಡಿ: ಎಸ್‌ಡಿಪಿಐ ವತಿಯಿಂದ ಶ್ರಮದಾನ

Wed, 08/19/2015 - 09:23 -- web editor

ತಲಪಾಡಿ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತಲಪಾಡಿ ಘಟಕದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಮತ್ತು ಶ್ರಮದಾನ ಕಾರ್ಯಕ್ರಮ ತಲಪಾಡಿಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯೆ ಮುಮ್ತಾಝ್ ಬಿ.ಸಿ. ಲತೀಫ್, ಎಸ್‌ಡಿಪಿಐ ಪುರಸಭಾ ಸಮಿತಿ ಅಧ್ಯಕ್ಷ ಮುಸ್ತಾಕ್ ತಲಪಾಡಿ, ಪಕ್ಷದ ಕಾರ್ಯಕರ್ತರಾದ ಮಿಶಾಲ್, ಅಶ್ವಾನ್ ಸಾದಿಕ್, ಲತೀಫ್ ಕೆ.ಎಚ್, ಅನ್ವರ್ ಕೆ.ಎಚ್, ಆರೀಫ್, ಲತೀಫ್ ಮೋನಾಕಾ, ಹಾರಿಸ್ ಮೊದಲಾದವರು ಉಪಸ್ಥಿತರಿದ್ದರು.

ಕ್ಯಾಂಪಸ್ ಫ್ರಂಟ್ ವತಿಯಿಂದ ವಿದ್ಯಾರ್ಥಿ ವೇತನದ ಮಾಹಿತಿ ಮತ್ತು ಪ್ರತಿಭಾ ಪುರಸ್ಕಾರ

Wed, 08/19/2015 - 09:17 -- web editor

ಉಪ್ಪಿನಂಗಡಿ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ವಲಯದ ವತಿಯಿಂದ ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ, ವಿದ್ಯಾರ್ಥಿ ವೇತನದ ಮಾಹಿತಿ ಹಾಗೂ ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಇತ್ತೀಚೆಗೆ ಸ್ಪಂದನಾ ಎಜುಕೇಶನ್ ಸೆಂಟರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಫೌಂಡೇಶನ್ ಮಂಗಳೂರು ಇದರ ಸದಸ್ಯ ಅಹ್ರಾಝ್, ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಆಶಿಕ್ ಮಾಚಾರ್, ಉಪ್ಪಿನಂಗಡಿ ವಲಯ ಸಮಿತಿ ಅಧ್ಯಕ್ಷ ಹರ್ಷದ್ ಕೋಲ್ಪೆ, ಜ್ಞಾನ ಭಾರತಿ ಸ್ಕೂಲ್ ಇದರ ಸಂಚಾಲಕ ರವೂಫ್ ಹಾಜಿ ಮತ್ತು ಆಸಿಫ್ ಮಡಂತ್ಯಾರು ಉಪಸ್ಥಿತರಿದ್ದರು.

ಬಿಬಿಎಂಪಿ ಚುನಾವಣೆ: ಎಸ್‌ಡಿಪಿಐ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Wed, 08/19/2015 - 09:11 -- web editor

ಬೆಂಗಳೂರು: ಭ್ರಷ್ಟಾಚಾರ ಮುಕ್ತ ಜನಪರ ಕಾರ್ಪೊರೇಟರ್ ಎಂಬ ಘೋಷಣೆಯೊಂದಿಗೆ ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ 18 ನಾಮಪತ್ರಗಳು ಸಲ್ಲಿಕೆಯಾಗಿವೆ.

ಭಾರೀ ಸಂಖ್ಯೆಯ ಬೆಂಬಲಿಗರೊಂದಿಗೆ ರ್ಯಾಲಿ ನಡೆಸಿ ಮನೋರಾಯನ ಪಾಳ್ಯ ವಾರ್ಡಿನ ಅಭ್ಯರ್ಥಿ ಅಡ್ವಕೇಟ್ ಮುಹಮ್ಮದ್ ತ್ವಾಹಿರ್ ನಾಮಪತ್ರ ಸಲ್ಲಿಸಿದ್ದು, ನಾಮ ಪತ್ರ ಸಲ್ಲಿಕೆ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹೀಂ ಪಟೇಲ್ ಹಾಗೂ ಇನ್ನಿತರ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Pages

Subscribe to ಸಾಮಾನ್ಯ ಸುದ್ದಿ