ಸಾಮಾನ್ಯ ಸುದ್ದಿ

‘ದೀನುಲ್ ಹಖ್’ ಪುಸ್ತಕ ಬಿಡುಗಡೆ

Thu, 07/09/2015 - 08:31 -- web editor

ಪುತ್ತೂರು : ಸ್ತುತಿ ಪ್ರಕಾಶನದ ವತಿಯಿಂದ ಪ್ರಕಟಿಸಲಾದ ‘ದೀನುಲ್ ಹಖ್’ ಪುಸ್ತಕದ ಬಿಡುಗಡೆ ಸಮಾರಂಭವು ದಿನಾಂಕ 30-06-2015ರಂದು ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಸಭಾಂಗಣದಲ್ಲಿ ನಡೆಯಿತು.

ಪ್ರಸ್ತುತ ಪಾಕ್ಷಿಕದ ಪ್ರಧಾನ ಸಂಪಾದಕರಾದ ಕೆ.ಎಂ ಶರೀಫ್‌ರವರು ಪುಸ್ತಕವನ್ನು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಸಂಪಾದಕರಾದ ಶಬೀರ್ ಕೆ., ಪಾಪ್ಯುಲರ್ ಫ್ರಂಟ್ ಬಂಟ್ವಾಳ ಅಧ್ಯಕ್ಷ ಝಕರಿಯಾ ಕಲ್ಲಡ್ಕ, ಸಲೀಂ, ಇಕ್ಬಾಲ್, ಸಿದ್ದೀಕ್ ಪನಾಮ ಮೊದಲಾದವರು ಉಪಸ್ಥಿತರಿದ್ದರು.

ಲೇಖಕ ಎ. ಸಯೀದ್‌ರವರ ಮಲಯಾಳ ಮೂಲದ ಈ ಕತಿಯನ್ನು ಅಬ್ದುಲ್ ಹಮೀದ್ ಕುಕ್ಕಾಜೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಲ ವೃದ್ಧಿಸಿಕೊಂಡ ಎಸ್.ಡಿ.ಪಿ.ಐ

Sun, 06/07/2015 - 09:44 -- web editor

ಬೆಂಗಳೂರು: ಕೆಲವೊಂದು ಪಂಚಾಯತ್‌ಗಳಲ್ಲಿ ಆಡಳಿತ ನಡೆಸಲು ಎಸ್.ಡಿ.ಪಿ.ಐ ಅಭ್ಯರ್ಥಿಗಳೇ ನಿರ್ಣಾಯಕರಾಗಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಅಬ್ಬರದ ಪ್ರಚಾರ, ಹಣ ಬಲ, ಮದ್ಯ ಹಂಚಿಕೆ, ಅಪಪ್ರಚಾರಗಳ ನಡುವೆಯೂ ನಿಷ್ಠಾವಂತ ಕಾರ್ಯಕರ್ತರ ಹಗಳಿರುಲಿನ ಪರಿಶ್ರಮದಿಂದ ಎಸ್.ಡಿ.ಪಿ.ಐ ತನ್ನ ಅಸ್ತಿತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಮ್ಯಾಗಿ ಉತ್ಪನ್ನ ತಕ್ಷಣ ನಿಷೇಧಿಸುವಂತೆ ಎಸ್.ಡಿ.ಪಿ.ಐ ಒತ್ತಾಯ

Wed, 06/03/2015 - 12:19 -- web editor

ಬೆಂಗಳೂರು: ಮ್ಯಾಗಿ ನೂಡಲ್ಸ್‌ನಲ್ಲಿ ಮನೋಸೋಡಿಯಂ ಗ್ಲುಟಮೇಟ್ ಹಾಗೂ ಸೀಸದ ಅಂಶ ಮಿತಿಗಿಂತ ಹೆಚ್ಚಿರುವುದನ್ನು ಉತ್ತರ ಪ್ರದೇಶದ ಎಫ್‌ಎಸ್‌ಡಿಎ ಪತ್ತೆ ಹಚ್ಚಿದ್ದು, ಅಪಾಯಕಾರಿ ರಾಸಾಯನಿಕ ಅಂಶವು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಕ್ಷಣವಾಗಿ ಮ್ಯಾಗಿ ಹಾಗೂ ಇನ್ನಿತರ ಅಪಾಯಕಾರಿ ರಾಸಾಯನಿಕವನ್ನು ಹೊಂದಿರುವ ಆಹಾರ ಉತ್ಪನ್ನಗಳನ್ನು ನಿಷೇಧಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕನಾಟಕ ರಾಜ್ಯ ಸಮಿತಿಯು ಒತ್ತಾಯಿಸಿದೆ.

ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾಗಿ ಎ.ಸಯೀದ್ ಪುನರಾಯ್ಕೆ

Wed, 06/03/2015 - 12:09 -- web editor

ಬೆಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಷ್ಟೀಯ ಪ್ರತಿನಿಧಿ ಸಭೆಯು ಕೇರಳದ ಎರ್ನಾಕುಲಂ ಜಿಲ್ಲೆಯ ಆಳುವಾದಲ್ಲಿ ಇತ್ತೀಚೆಗೆ ನಡೆಯಿತು.

ಪ್ರಥಮ ದಿನದಲ್ಲಿ ಕಳೆದ ಎರಡು ವರ್ಷಗಳಲ್ಲಿ ಪಕ್ಷದ ಚಟುವಟಿಕೆಗಳ ಬಗ್ಗೆ ಚರ್ಚಿಸಿ, ಮುಂಬರುವ ದಿನಗಳಲ್ಲಿ ಪಕ್ಷವು ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

ರಾಷ್ಟ್ರೀಯ ಪ್ರತಿನಿಧಿ ಸಭೆಯ ದ್ವಿತೀಯ ದಿನದಂದು ಪಕ್ಷದ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ನಾಯಕರ ಆಯ್ಕೆಯ ಆಂತರಿಕ ಚುನಾವಣೆ ನಡೆದು, ರಾಷ್ಟ್ರೀಯ ಅಧ್ಯಕ್ಷರಾಗಿ ಎ.ಸಯೀದ್ ಪುನರಾಯ್ಕೆಯಾದರು.

ಕಾಂಗ್ರೆಸ್ ಹತಾಶಗೊಂಡು ಗಲಭೆಗೆ ಪ್ರಚೋದನೆ ನೀಡುತ್ತಿದೆ -ಎಸ್‍ಡಿಪಿಐ ಆರೋಪ

Wed, 06/03/2015 - 12:02 -- web editor

ಮಂಗಳೂರು: ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಸ್‍ಡಿಪಿಐ ಬೆಂಬಲಿತ ಅಭ್ಯರ್ಥಿಗಳ ಸ್ಪರ್ಧೆಯಿಂದ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿರುವ ಕಾಂಗ್ರೆಸ್ ಹತಾಶಗೊಂಡು ಗಲಭೆಗೆ ಪ್ರಚೋದನೆ ನೀಡುತ್ತಿದೆ ಎಂದು ಎಸ್‍ಡಿಪಿಐ ಆರೋಪಿಸಿದೆ.

ಪಕ್ಷದ ದ.ಕ. ಜಿಲ್ಲಾ ಉಪಾಧ್ಯಕ್ಷ ಅತಾವುಲ್ಲಾ ಜೋಕಟ್ಟೆ ಸೋಮವಾರ ಮಂಗಳೂರಿನಲ್ಲಿ ಕರೆದ ಮಾತನಾಡಿ, ಪುತ್ತೂರಿನ ಅರಿಯಡ್ಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೀತಿ ಸಂಹಿತೆ ಉಲ್ಲಂಘಿಸಿರುವುದರ ಬಗ್ಗೆ ಎಸ್‍ಡಿಪಿಐ ಕಾರ್ಯಕರ್ತರು ಅಧಿಕಾರಿಗಳಿಗೆ ದೂರು ನೀಡಿರುವುದನ್ನೇ ನೆಪ ಮಾಡಿ ಕಾಂಗ್ರೆಸ್ ಕಾರ್ಯಕರ್ತರು ಎಸ್‍ಡಿಪಿಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿದರು.

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮುಸ್ಲಿಂ, ದಲಿತ ವಿದ್ಯಾರ್ಥಿಗಳ ಹಿಂದುಳಿಯುವಿಕೆ ಕಳವಳಕಾರಿ: ಎಸ್.ಡಿ.ಪಿ.ಐ

Tue, 05/19/2015 - 14:47 -- web editor

ಬೆಂಗಳೂರು: ಇತ್ತೀಚೆಗೆ ಪ್ರಕಟಗೊಂಡ ಎಸ್‌ಎಸ್‌ಎಲ್‌ಸಿಯ ಫಲಿತಾಂಶದಲ್ಲಿ ರಾಜ್ಯದ ಮುಸ್ಲಿಂ ಹಾಗೂ ದಲಿತ ಸಮುದಾಯದ ವಿದ್ಯಾರ್ಥಿಗಳು ಹಿಂದುಳಿಯುವಿಕೆಯು ಕಳವಳಕಾರಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಸಮಿತಿ ಅಭಿಪ್ರಾಯಪಟ್ಟಿದೆ.

Pages

Subscribe to ಸಾಮಾನ್ಯ ಸುದ್ದಿ