ಸಾಮಾನ್ಯ ಸುದ್ದಿ

ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷರಾಗಿ ಹನೀಫ್ ಖಾನ್ ಕೊಡಾಜೆ ಆಯ್ಕೆ

Mon, 04/13/2015 - 11:47 -- web editor

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿ ಪ್ರತಿನಿಧಿಗಳ ಸಮಾವೇಶವು ಎಪ್ರಿಲ್ 10ರಂದು ಮಿತ್ತೂರಿನ ಫ್ರೀಡಂ ಕಮ್ಯೂನಿಟಿ ಹಾಲ್‌ನಲ್ಲಿ ನಡೆಯಿತು.

ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ ಧ್ವಜಾರೋಹಣಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಯುವ ಪ್ರತಿನಿಧಿಗಳ ಸಮಾವೇಶದಲ್ಲಿ ಮುಂದಿನ ಮೂರು ವರ್ಷಗಳಿಗೆ ಆಂತರಿಕ ಚುನಾವಣೆಯ ಮೂಲಕ ಪದಾಧಿಕಾರಿಗಳ ಆಯ್ಕೆ ನಡೆಯಿತು.ನೂತನ ಅಧ್ಯಕ್ಷರಾಗಿ ಹನೀಫ್ ಖಾನ್ ಕೊಡಾಜೆ, ಪ್ರಧಾನ ಕಾರ್ಯದರ್ಶಿಯಾಗಿ ನವಾಝ್ ಉಳ್ಳಾಲ್, ಉಪಾಧ್ಯಕ್ಷರಾಗಿ ಎಂ.ಕೂಸಪ್ಪ, ಅಥಾವುಲ್ಲಾ ಜೋಕಟ್ಟೆ, ಕಾರ್ಯದರ್ಶಿಗಳಾಗಿ ಅನ್ವರ್ ಸಾದಾತ್ ಬಜತ್ತೂರು ಹಾಗೂ ರಿಯಾಝ್ ಫರಂಗಿಪೇಟೆ ಮತ್ತು ಕೋಶಾಧಿಕಾರಿಯಾಗಿ ಜಲೀಲ್ ಕಷ್ಣಾಪುರ ಆಯ್ಕೆಯಾದರು.

ಚಾಮರಾಜನಗರ: ದಲಿತರ ನರಬಲಿ ಪ್ರಕರಣ : ಉನ್ನತ ಮಟ್ಟದ ತನಿಖೆಗೆ ಎಸ್.ಡಿ.ಪಿ.ಐ ಆಗ್ರಹ

Thu, 04/02/2015 - 11:55 -- web editor

ಬೆಂಗಳೂರು: ಚಾಮರಾಜನಗರ ಸಂತೆ ಮರಳಿ ತಾಲೂಕಿನಲ್ಲಿ ಮಾರ್ಚ್ 19ರಂದು ನಡೆದ ಇಬ್ಬರು ದಲಿತ ಕಾರ್ಮಿಕರಾದ ನಂಜಯ್ಯ ಹಾಗೂ ಕೃಷ್ಣಯ್ಯ ರವರ ನರಬಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಸೋಮವಾರ(30.03.2015)ದಂದು ಕುಟುಂಬವನ್ನು ಭೇಟಿಮಾಡಿ, ಕುಟುಂಬಕ್ಕೆ ಸಾಂತ್ವಾನ ನೀಡಿದೆ.

ಚಾಮರಾಜನಗರ: ಎಸ್ಡಿಪಿಐ ಜಿಲ್ಲಾಧ್ಯಕ್ಷರಾಗಿ ಅಬ್ರಾರ್ ಅಹ್ಮದ್ ಆಯ್ಕೆ

Thu, 04/02/2015 - 06:59 -- web editor

ಚಾಮರಾಜನಗರ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿಗೆ ನೂತನ ಜಿಲ್ಲಾಧ್ಯಕ್ಷರಾಗಿ ಅಬ್ರಾರ್ ಅಹ್ಮದ್ ಆಯ್ಕೆಯಾಗಿದ್ದಾರೆ.

ನಗರದ ಎಚ್.ಕೆ ಫಂಕ್ಷನ್ ಹಾಲ್ನಲ್ಲಿ ಈ ಚುನಾವಣಾ ಪ್ರಕ್ರಿಯೆ ನಡೆಯಿತು. ಪ್ರಧಾನ ಕಾರ್ಯದರ್ಶಿಯಾಗಿ ಜಬಿವುಲ್ಲಾ, ಉಪಾಧ್ಯಕ್ಷರಾಗಿ ಸಮಿವುಲ್ಲಾ ಖಾನ್, ಕಾರ್ಯದರ್ಶಿಯಾಗಿ ಇರ್ಷಾದ್ ಅಹ್ಮದ್, ಖಜಾಂಚಿಯಾಗಿ ಇಮ್ರಾನ್, ಕಾರ್ಯಕಾರಿಣಿ ಸದಸ್ಯರಾಗಿ ಎಂ.ಮಹೇಶ್, ಸಿ.ಎಸ್. ಸೈಯದ್ ಆರೀಫ್, ಮುಹಮದ್ ತೌಫಿಕ್, ಸೈಯದ್ ಇಮ್ರಾನ್ ಆಯ್ಕೆಯಾಗಿದ್ದಾರೆ. ಪಕ್ಷದ ರಾಜ್ಯ ಕಾರ್ಯದರ್ಶಿಯಾದ ಶೇಕ್ ಸಿರಾಜ್ ಚುನಾವಣೆ ಕಾರ್ಯ ನಿರ್ವಹಿಸಿದರು.

‘ಪ್ರಸ್ತುತ ಪಾಕ್ಷಿಕ’ದ ವತಿಯಿಂದ ಮಾಧ್ಯಮ ಕಾರ್ಯಾಗಾರ

Thu, 04/02/2015 - 06:54 -- web editor

ಮಂಗಳೂರು: ‘ಪ್ರಸ್ತುತ ಪಾಕ್ಷಿಕ’ದ ವತಿಯಿಂದ ಉದಯೋನ್ಮುಖ ಬರಹಗಾರರಿಗೆ ಒಂದು ದಿನದ ‘ಮಾಧ್ಯಮ ಕಾರ್ಯಾಗಾರ’ ವನ್ನು ಮಾರ್ಚ್ 23ರಂದು ಕೋಸ್ಟಲ್ ಹೌಸ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಪ್ರಸ್ತುತ ಪಾಕ್ಷಿಕದ ಪ್ರಧಾನ ಸಂಪಾದಕ ಕೆ.ಎಂ.ಶರೀಫ್ರವರು ‘ಬರಹ ಏಕೆ?’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ವಿಜಯ ಕರ್ನಾಟಕ ಪ್ರಧಾನ ವರದಿಗಾರ ಆರಿಫ್ ಪಡುಬಿದ್ರೆ ವರದಿಗಾರಿಕೆಯ ಬಗ್ಗೆ ತರಗತಿ ನಡೆಸಿಕೊಟ್ಟರು. ಉದಯೋನ್ಮುಖ ಬರಹಗಾರರಿಗಾಗಿ ರಚಿಸಲಾದ ‘ಕನ್ನಡ ಭಾರತಿ’ ಎಂಬ ಪತ್ರಿಕೆಯನ್ನು ಆರಿಫ್ ಪಡುಬಿದ್ರೆ ಇದೇ ವೇಳೆ ಬಿಡುಗಡೆಗೊಳಿಸಿದರು. ಕಾರ್ಯಾಗಾರದಲ್ಲಿ ‘ಕನ್ನಡ ಮಾಧ್ಯಮ: ಅವಕಾಶಗಳು ಮತ್ತು ಸವಾಲುಗಳು ಎಂಬ ವಿಷಯದಲ್ಲಿ ಚರ್ಚೆ ನಡೆಸಲಾಯಿತು.

ಶಾಲಾ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ವಿರೋಧಿಸಿ ವಿವಿಧ ಸಂಘಟನೆಗಳಿಂದ ಧರಣಿ

Thu, 04/02/2015 - 06:50 -- web editor

ಮಂಗಳೂರು: ತೊಕ್ಕೊಟ್ಟು ಚೆಂಬುಗುಡ್ಡೆ ಸಮೀಪದ ಖಾಸಗಿ ಶಾಲೆಯೊಂದರ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಸೂಕ್ತ ತನಿಖೆಗೆ ಆಗ್ರಹಿಸಿ ಮಾರ್ಚ್ 20ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಸಂಘಟನೆಗಳಿಂದ ಬಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

37 ಸಂಘಟನೆಗಳ ಬೆಂಬಲದೊಂದಿಗೆ ನಡೆದ ಈ ಧರಣಿಯಲ್ಲಿ ಶಾಲಾ ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಹಾಗೂ ಪ್ರಕರಣವನ್ನು ನಿರ್ಲಕ್ಷಿಸಿದ ಶಾಲಾ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ಜರಗಿಸಬೇಕೆಂದು ಒತ್ತಾಯಿಸಲಾಯಿತು.

ಕ್ಯಾಂಪಸ್ ಫ್ರಂಟ್ನಿಂದ ‘ಹೌಟು ಫೇಸ್ ಇಂಟರ್ವ್ಯೆ’ ಕಾರ್ಯಕ್ರಮ

Wed, 04/01/2015 - 13:03 -- web editor

ಮಂಗಳೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಲೈಫ್ ಬ್ರಿಗೇಡ್ ಬ್ಯಾಂಗಲೋರ್, ಕ್ರಿಯೇಟಿವ್ ಫೌಂಡೇಶನ್ ಮಂಗಳೂರು ಇವುಗಳ ಸಹಯೋಗದೊಂದಿಗೆ ಹೌಟು ಫೇಸ್ ಇಂಟರ್ವ್ಯೆ ಎಂಬ ಕಾರ್ಯಕ್ರಮವನ್ನು ಇತ್ತೀಚೆಗೆ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ತುಫೈಲ್, ಲೈಫ್ ಬ್ರಿಗೇಡ್ ಇಮಾದ್, ಶರೀಫ್, ಮುಜಾಹಿದ್, ಲೈಫ್ ಬ್ರಿಗೇಡ್ನ ತನ್ವೀರ್ ಹಾಗೂ ಕ್ರಿಯೇಟಿವ್ ಫೌಂಡೇಶನ್ನ ನಝೀರ್ ಉಪಸ್ಥಿತರಿದ್ದರು. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಮೊಹಮ್ಮದ್ ಇರ್ಷಾದ್ ಬಜ್ಪೆ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

Pages

Subscribe to ಸಾಮಾನ್ಯ ಸುದ್ದಿ